ಶಿವಮೊಗ್ಗ ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಗೆ ಆರೆಂಜ್‌ ಅಲರ್ಟ್‌ | ಭಾರೀ ಮಳೆಯ ಎಚ್ಚರಿಕೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 3, 2024

ನಿನ್ನೆ ದಿನ ನೀಡಿದಂತೆ ಹವಾಮಾನ ಇಲಾಖೆ ಬೆಂಗಳೂರು ಇವತ್ತು ಸಹ ಕೊಡಗು ಜಿಲ್ಲೆಗೆ ರೆಡ್‌ ಅಲರ್ಟ್‌ ನೀಡಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ನೀಡಿದೆ. ಫೆಂಗಲ್‌ (Fengal) ಚಂಡಮಾರುತ ಈ ಡಿಸೆಂಬರ್‌ ಮಳೆಗೆ ಕಾರಣವಾಗಿದೆ

ಇದನ್ನು ಸಹ ಓದಿ : DINA-BHAVISHYA-DECEMBER-03 | ದಿನಭವಿಷ್ಯದಲ್ಲಿ ಇವತ್ತಿನ ವಿಶೇಷ ಏನು ಗೊತ್ತಾ

ಬೆಳಗ್ಗೆ 8.30 ರ ಹೊತ್ತಿಗೆ ಪ್ರಕಟವಾಗಿರುವ ಹವಾಮಾನ ಇಲಾಖೆ ಬೆಂಗಳೂರು ರವರ ವೆಬ್‌ಸೈಟ್‌ನಲ್ಲಿ ಜಿಲ್ಲಾವಾರು ಮುನ್ಸೂಚನೆಯ ಮಾಹಿತಿಯು ಹೀಗಿದೆ. ಇವತ್ತು ಅಂದರೆ ಡಿಸೆಂಬರ್‌ 3 ರಂದು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ ಮಂಡ್ಯ ರಾಮನಗರ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್‌ ನೀಡಲಾಗಿದ್ದು, ಶಿವಮೊಗ್ಗ ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ನೀಡಿದೆ. 

ಇನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ಚಂಡಮಾರುತ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ವರದಿ ಇಲ್ಲಿದೆ  : ಶಿವಮೊಗ್ಗ ಜಿಲ್ಲೆಯ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಇವತ್ತು ರಜೆ |ಡಿಸಿ ಆದೇಶ

SUMMARY |   orange alert has been issued for Shivamogga, Chikkamagaluru, Udupi, Dakshina Kannada, Mysuru,  Chamarajanagar districts, Cyclone Fengal  

KEY WORDS  |  orange alert has been issued for Shivamogga, Chikkamagaluru, Udupi, Dakshina Kannada, Mysuru,  Chamarajanagar districts, Cyclone Fengal  

Share This Article