ಟ್ರೈನ್‌ ನಲ್ಲಿ ಹೋಗುವಾಗ ಈ ತಪ್ಪು ಮಾಡಬೇಡಿ | ಶಿವಮೊಗ್ಗ ಚನ್ನೈ ಟ್ರೈನ್‌ನಲ್ಲಿ ನಡೀತು ಈ ಘಟನೆ | ವಿಡಿಯೋ ವೈರಲ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 27, 2024 ‌ 

ರೈಲಿನಲ್ಲಿ ಪ್ರಯಾಣಿಸುವಾಗ, ಬಾಗಿಲ ಬಳಿ ನಿಂತು ಟ್ರೈನ್‌ನ ವಿಡಿಯೋ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಮತ್ತೆ ಕೆಲವರು ಟ್ರೈನ್‌ ಡೋರ್‌ ಬಳಿ ಕುಳಿತು ಮೊಬೈಲ್‌ನ ನೋಡುತ್ತಿರುತ್ತಾರೆ. ಅಂತಹವರು ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ಸಾಕ್ಷಿ ಎನ್ನುವಂತಹ ದೃಶ್ಯವೊಂದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.  ಶಿವಮೊಗ್ಗ-ಚನ್ನೈ ಟ್ರೈನ್‌ನಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ. 

ಸ್ಟೇಷನ್‌ಗಳಿಂದ ಟ್ರೈನ್‌ ಹೊರಡುವಾಗ ಸಾಮಾನ್ಯವಾಗಿ ಅದರ ವೇಗ ನಿಧಾನವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬಾಗಿಲ ಬಳಿ ಅಥವಾ ಕಿಟಕಿ ಬಳಿ ಮೊಬೈಲ್‌ ಯೂಸ್‌ ಮಾಡುವವರನ್ನ ಟಾರ್ಗೆಟ್‌ ಮಾಡಿಕೊಂಡು ಕೆಲವು ಕಳ್ಳರು ಟ್ರ್ಯಾಕ್‌ ಬಳಿ ನಿಂತಿರುತ್ತಾರೆ. ಅಂತವರು ಕೆಲವೇ ಕ್ಷಣದಲ್ಲಿ ಪ್ರಯಾಣಿಕರ ಮೊಬೈಲ್‌ ಎಗರಿಸಿಕೊಂಡು ಪರಾರಿಯಾಗುತ್ತಾರೆ. ಇದೇ ರೀತಿಯ ಘಟನೆ ಶಿವಮೊಗ್ಗ ಟು ಚನ್ನೈ ಟ್ರೈನ್‌ನಲ್ಲಿ ನಡೆದಿದೆ. 

ಕಳೆದ ನವೆಂಬರ್ 23 ರಂದು ಶಿವಮೊಗ್ಗ-ಚೆನ್ನೈ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12692,  ಬೆಂಗಳೂರು ಟರ್ಮಿನಲ್‌ನಿಂದ ಹೊರಟಿತ್ತು. ಟ್ರೈನ್‌ ಸ್ವಲ್ಪ ದೂರ ಹೋಗುತ್ತಲೇ ಅದರಲ್ಲಿದ್ದ ಪ್ರಯಾಣಿಕರೊಬ್ಬರು ರೈಲಿನ ಬಾಗಿಲ ಬಳಿ ನಿಂತು ಹೊರಗಿನ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು. ಈ ವೇಳೆ ಅವರ ಮೊಬೈಲ್‌ನ್ನ ಅಲ್ಲಿಯೇ ಟ್ರ್ಯಾಕ್‌ ಬಳಿ ನಿಂತಿದ್ದ ಯುವಕನೊಬ್ಬ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಅದೃಷ್ಟಕ್ಕೆ ಪ್ರಯಾಣಿಕರು ಮೊಬೈಲ್‌ನ್ನ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಮೊಬೈಲ್‌ ಕಳ್ಳನ ಪಾಲಾಗಲಿಲ್ಲ. 

ಆದಾಗ್ಯೂ, ಚಲಿಸುವ ರೈಲುಗಳಲ್ಲಿ ಓಪನ್‌ ಪ್ಲೇಸ್‌ಗಳ ಬಳಿ ಮೊಬೈಲ್ ಸಾಧನಗಳನ್ನು ಬಳಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂಬ ಸಂದೇಶದೊಂದಿಗೆ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

  

SUMMARY | An attempt to steal the mobile phones of passengers on the Shivamogga-Chennai train has failed. The video has gone viral. 12692 shivamogga chennai express. snatching mobile attempt failed. 

KEY WORDS  | attempt to steal the mobile phones of passengers,  Shivamogga-Chennai train has failed, video has gone viral,  12692 shivamogga chennai express, snatching mobile attempt failed,

Share This Article