ಗಾಂಧಿಬಜಾರ್‌ನಲ್ಲಿರುವ ಅಂಗಡಿಯೊಂದರಲ್ಲಿ ಅಗ್ನಿ ಆಕಸ್ಮಿಕ |

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024 ‌ 

ಶಿವಮೊಗ್ಗ | ನಿನ್ನೆ ದಿನ ರಾತ್ರಿ ಗಾಂಧಿ ಬಜಾರ್‌ನಲ್ಲಿನ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ನಷ್ಟವಾಗಿದೆ. 

ನಿನ್ನೆ ರಾತ್ರಿ ಗಾಂಧಿ ಬಜಾರ್‌ನಲ್ಲಿರುವ  ಜೈ ಅಂಬೆ ಮಾರ್ಕೆಟಿಂಗ್‌ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಗಾಂಧಿ ಬಜಾರ್‌ 1ನೇ ಅಡ್ಡರಸ್ತೆಯಲ್ಲಿ ಈ ಜೈ ಅಂಬೆ ಮಾರ್ಕೆಟಿಂಗ್‌ ಸಂಸ್ಥೆಯಿದೆ. 

ಅಗ್ನಿ ಅವಘಡದಲ್ಲಿ ಗ್ಯಾಸ್‌ ಸ್ಟೌ, ಫ್ಯಾನ್‌ಗಳು ಸೇರಿದಂತೆ ವಿವಿಧ ಉಪಕರಣಗಳು ಇದ್ದವು. ನಿನ್ನೆ ರಾತ್ರಿ ಅಂಗಡಿಯ ಗೌಡೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಬರಲು ಆರಂಭವಾಗಿದೆ. 

ಇದನ್ನ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಫೋನಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಬೆಂಕಿಯನ್ನ ನಂದಿಸಿದ್ದಾರೆ. ಇನ್ನೂ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ

 

Malenadu Today

 

SUMMARY | fire in gandhibajar shivamogga 

KEY WORDS  | fire in gandhibajar shivamogga 

Share This Article