BIG NEWS KARNATAKA | ನಕ್ಸಲ್‌ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ | ದಶಕಗಳ ನಂತರ ಕಾಡಿನಲ್ಲಿ ಗುಂಡಿನ ಸದ್ದು

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024

ಶಿವಮೊಗ್ಗ | ಮಹತ್ವದ ಬೆಳವಣಿಗೆಯಲ್ಲಿ ಕಾಡಿನಲ್ಲಿ ಶೂಟೌಟ್‌ ಸುದ್ದಿಯೊಂದು ಕೇಳಿಬಂದಿದೆ. ನಕ್ಸಲ್‌ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ ಆಗಿದ್ದಾನೆ. 

ಕಳೆದ ಕೆಲದಿನಗಳಿಂದ ಹೆಬ್ರಿ, ಶೃಂಗೇರಿ ಭಾಗದಲ್ಲಿ ನಕ್ಸಲ ಚಲನವಲನದ ಬಗ್ಗೆ ಎಎನ್‌ಎಫ್‌ಗೆ ಮಾಹಿತಿ ಲಭ್ಯವಾಗಿತ್ತು. ಈ ನಡುವೆ ANF ತಂಡ ನಿನ್ನೆ ನಡೆಸಿದ್ದ ಕೂಂಬಿಂಗ್‌ ವೇಳೆ ವಿಕ್ರಂಗೌಡ ನೇತೃತ್ವದ ನಕ್ಸಲ್‌ ತಂಡ ಮುಖಾಮುಖಿಯಾಗಿದೆ. 

ಈ ವೇಳೆ ನಡೆದ ಶೂಟೌಟ್‌ನಲ್ಲಿ ವಿಕ್ರಂಗೌಡ ಎನ್‌ಕೌಂಟರ್‌ ಆಗಿದ್ದಾನೆ. ಹೆಬ್ರಿ ವ್ಯಾಪ್ತಿಯಲ್ಲಿ ಪೀತೆ ಬೈಲ್‌ ಎಂಬಲ್ಲಿ ಘಟನೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಮಲೆನಾಡು ಟುಡೆಗೆ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ. 

ಈತ ಮೂಲತಃ ಹೆಬ್ರಿಯವನು ಎನ್ನಲಾಗಿದ್ದು, ಶೃಂಗೇರಿ, ಕಾರ್ಕಳ ಭಾಗದಲ್ಲಿ ಸಕ್ರಿಯನಾಗಿದ್ದ. ಕೇರಳದಲ್ಲಿ ನಕ್ಸಲ್‌ ಚಟುವಟಿಕೆಗೆ ಥಂಡರ್‌ ಬೋಲ್ಟ್‌ ಟೀಂ ಬಿಗಿ ಮಾಡಿದ ಬಳಿಕ ನಕ್ಸಲ್‌ ಟೀಂ ಕರ್ನಾಟಕಕ್ಕೆ ವಾಪಸ್‌ ಆಗಿತ್ತು. 

ಆನಂತರ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಡಗಾರು ಲತಾ ಓಡಾಟ ನಡೆಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತಷ್ಟೆ ಅಲ್ಲದೆ ಆ ಸಂಬಂಧ ಪೊಲೀಸರು uapa ಕಾಯ್ದೆ ಅಡಿ ಕೇಸ್‌ ದಾಖಲಿಸಿದ್ದರು. 

ಇದೆಲ್ಲಾ ಬೆಳವಣಿಗೆ ಬಳಿಕ ಇದೀಗ ವಿಕ್ರಂಗೌಡ ಪೊಲೀಸ್‌ ಶೂಟೌಟ್‌ನಲ್ಲಿ ಎನ್‌ಕೌಂಟರ್‌ ಆಗಿದ್ದಾನೆ. ಹೆಬ್ರಿಯ ಪೀತೆಬೈಲ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. 

SUMMARY | Naxal leader Vikram Gowda encountered 

KEY WORDS |Naxal leader Vikram Gowda encountered 

Share This Article