ಕಾಂತಾರ ಚಾಪ್ಟರ್‌ 1 ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಹೊಂಬಾಳೆ ಫಿಲಮ್ಸ್‌ & ರಿಷಬ್‌ ಶೆಟ್ಟಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024

ಸಿನಿಪ್ರೇಕ್ಷಕರನ್ನ ಅಚ್ಚರಿಗೊಳಿಸಿದ್ದ ಕಾಂತಾರಾ ಸಿನಿಮಾನ ಚಾಪ್ಟರ್‌ 1 ರಿಲೀಸ್‌ಗೆ ದಿನಾಂಕ ಫಿಕ್ಸ್‌ ಆಗಿದೆ. ಈ ಸಂಬಂಧ ಸಿನಿತಂಡ ಚಿತ್ರ ಬಿಡಗಡೆಯ ದಿನಾಂಕ ಘೋಷಣೆ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದೆ.

ಕಾಂತಾರ ಚಾಪ್ಟರ್ 1 ರಿಲೀಸ್ ಡೇಟ್ ಫಿಕ್ಸ್

ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಚಿತ್ರ ಅಕ್ಟೋಬರ್ 2. 2025 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಬಗ್ಗೆ ಹೊಂಬಾಳೆ ಪಿಲಂಸ್ ತನ್ನ instagram ಅಧಿಕೃತ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಈ ಹಿಂದೆ ಕಾಂತಾರ ಚಿತ್ರವು ರಿಲೀಸ್ ಆಗಿ ವಿಶ್ವದಾದ್ಯಂತ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದರು. ಹಾಗೆಯೇ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು. ಆನಂತರ ಸಿನಿಮಾದ ಇನ್ನೊಂದು ಪಾರ್ಟ್‌ಗೆ ಚಿತ್ರತಂಡ ನಿರ್ಧಾರ ಮಾಡಿತ್ತು. 

ಈ ಪ್ರಯತ್ನದ ನಡುವೆಯೇ ರಿಷಬ್‌ ಆಂಡ್‌ ಟೀಂ ಕೆಲ ತಿಂಗಳ ಹಿಂದೆಕಾಂತಾರ ಚಾಪ್ಟರ್ 1 ರ ಟೀಸರ್ ರಿಲೀಸ್  ಮಾಡಿತ್ತು. ಈ ಟೀಸರ್‌ ಸಕತ್‌ ಇಂಟ್ರಸ್ಟಿಂಗ್‌ ಆಗಿತ್ತು. ಇದೀಗ ಸಿನಿತಂಡ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಈ ಚಿತ್ರಕ್ಕೆ ಅಜಿನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ

SUMMARY | Directed by Rishab Shetty, ‘Kanthara Chapter 1’ is all set to release worldwide on October 2, 2025. Hombale Films shared the information on its Instagram official account..

KEY WORDS | Rishab Shetty Kanthara Chapter 1, release worldwide on October 2 2025,  Hombale Films  Instagram official account

 

Share This Article