SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 16, 2024
ಶಿವಮೊಗ್ಗ | ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ದಾಖಲಿಸಿರುವ ಸುಮೊಟೋ ಕೇಸ್ ಅನ್ನು ಹಿಂಪಡೆಯಬೇಕೆಂದು ಶಿವಮೊಗ್ಗದಲ್ಲಿ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ ನಡೆಸಿದೆ. ಎಸ್‌ಪಿ ಕಚೇರಿ ಎದುರು ಧರಣಿ ನಡೆಸಿದ ಬಳಗದ ಸದಸ್ಯರು ಎಸ್ ಪಿ ಮಿಥನ್ ಕುಮಾರ್ ಗೆ ಈ ಸಂಬಂಧ ಮನವಿ ಸಲ್ಲಿಸಿದರು.
ಕೆ,ಎಸ್ ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಸುಮೊಟೋ ಕೇಸ್ ದಾಖಲಾಗಿದೆ. ಈ ಕೇಸ್ ಪೂರ್ವಾಗೃಹ ಪೀಡಿತವಾಗಿದ್ದು, ಇದರಲ್ಲಿ ರಾಜಕೀಯ ದುರುದ್ದೇಶವಿದೆ ಎಂದು ರಾಷ್ಟ್ರಭಕ್ತರ ಬಳಗ ದೂರಿದೆ.
ಮನವಿ ಪತ್ರದಲ್ಲಿ ಏನಿದೆ.
ಕೆಎಸ್ ಈಶ್ವರಪ್ಪನವರು ಹಿಂದೂ ಸಮಾಜದ ಹಿತದೃಷ್ಟಿಯಿಂದ ಹಾಗೂ ಬಡ ರೈತರ ಕಾಳಜಿಯಿಂದ ನೀಡಿದ ಹೇಳಿಕೆಯಿಂದ ಕಾಂಗ್ರೆಸ್ ಸರ್ಕಾರ ವಿಚಲಿತಗೊಂಡಿದೆ. ಹಾಗಾಗಿ ಕೆ.ಎಸ್.ಈಶ್ವರಪ್ಪನವರ ವಿರುದ್ದ ಶಿವಮೊಗ್ಗ ನಗರದ ಜಯನಗರ ಪೋಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ನಡೆಯಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಹಾಗೆಯೇ ದಾಖಲಿಸಿರುವ ದೂರನ್ನು ಈ ಕೂಡಲೇ ಹಿಂಪಡೆದು ಈಶ್ವರಪ್ಪನವರು ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ರೀತಿಯ ತಡೆಯೊಡ್ಡಬಾರದೆಂದು ಈ ಮೂಲಕ ಆಗ್ರಹಿಸುತ್ತೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರತರವಾದ ಹೋರಾಟವನ್ನು ಮಾಡಲಾಗುವುದೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
SUMMARY| memorandum to SP Mithan Kumar seeking withdrawal of the suo motu case registered against Eshwarappa.
KEY WORDS | SP Mithan Kumar, suo motu case,ks eshwarappa, shivamogga,