Shivamogga jail Raid | ಶಿವಮೊಗ್ಗ ಜೈಲ್ ರೇಡ್ | ಸುಮುಟೋ ಕೇಸ್ ನಲ್ಲಿ ಏನಿದೆ? | ಸಿಕ್ಕಿದ್ದೇನು?
Shivamogga jail raid case updates ̧ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ನಡೆದ ಪೊಲೀಸ್ ರೇಡ್ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ
SHIVAMOGGA | MALENADUTODAY NEWS | Sep 3, 2024 ಮಲೆನಾಡು ಟುಡೆ
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಎಸ್‌ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ರೇಡ್ ನಡೆಸಿದ್ದರು. ಈ ರೇಡ್ ನಲ್ಲಿ ಶಿವಮೊಗ್ಗ ಜೈಲಿನೊಳಗೆ ಬೀಡಿ ಹಾಗೂ ಮ್ಯಾಚ್ ಬ್ಲಾಕ್ಸ್‌ಗಳು ಹಾಗೂ ಚಾರ್ಜರ್ ವಯರ್‌ಗಳು ಪತ್ತೆಯಾಗಿತ್ತು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತುಂಗಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಬಿ ದಾಖಲಿಸಿರುವ ಸುಮೊಟೋ ಪ್ರಕರಣದಲ್ಲಿ ದಿನಾಂಕ:28.08.2024 ರಂದು ನಡೆದ ಕೇಂದ್ರ ಕಾರಾಗೃಹದ ಮೇಲಿನ ರೇಡ್‌ನ ವಿವರಣೆಯನ್ನ ನೀಡಲಾಗಿದೆ.
ತುಂಗಾನಗರ ಪೊಲೀಸ್ ಠಾಣೆ
ಅಂದು ಶಿವಮೊಗ್ಗ ನಗರದ ಡಿಎಆರ್ ಡಿವೈಎಸ್‌ಪಿ ಆದ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ. ಪಿಐ ರವಿ ಪಾಟೀಲ್ ಮತ್ತು ಸಿಬ್ಬಂದಿಗಳು, ಪಿಐ ದೀಪಕ್ ಮತ್ತು ಸಿಬ್ಬಂದಿಗಳು, ಪಿಐ ಸತ್ಯನಾರಾಯಣ್, ಸಿಬ್ಬಂದಿಗಳು, ಆರ್ ಪಿ ಐ ಪ್ರಶಾಂತ ಮತ್ತು ಅವರ ಸಿಬ್ಬಂದಿಗಳು, ಮತ್ತು ಪಿರ್ಯಾದಿ ಮತ್ತು ಅವರ ಸಿಬ್ಬಂದಿಗಳು, ಹಾಗೂ ಕೇಂದ್ರ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಬಾಂಬ್ ನಿಗ್ರಹ ದಳ ಹಾಗೂ ಶ್ವಾನದಳ ಸಿಬ್ಬಂದಿಗಳ ತಂಡ ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತ ತಪಾಸಣೆಯನ್ನ ಕೈಗೊಂಡಿತ್ತು.
ಶಿವಮೊಗ್ಗ ಕೇಂದ್ರ ಕಾರಾಗೃಹ
ಈ ವೇಳೆ ಕಾವೇರಿ ಬ್ಲಾಕ್, ಕುಮುದ್ರತಿ ಬ್ಲಾಕ್, ತುಂಗಾ ಬ್ಲಾಕ್, ಭದ್ರಾ, ಬ್ಲಾಕ್, ಶರಾವತಿ ಬ್ಲಾಕ್ ನಲ್ಲಿರುವ ಸೆಲ್‌ಗಳಲ್ಲಿ ಬೀಡಿಗಳು, ಬೆಂಕಿ ಪಟ್ಟಣಗಳು, ಸಿಗರೇಟ್, ಚಿಲುಮೆಗಳು ಮಧು ಪಾಕೇಟ್, ಚಿಲುಮೆ ಓಲೆ, ಚಾರ್ಜಿಂಗ್ ಕೇಬಲ್, 3500/- ರೂ ನಗದು ಹಣ ಮತ್ತು ಮೊಬೈಲ್ ಪೋನ್ ಚಾರ್ಜರ್ ಕೇಬಲ್ ಗಳು ದೊರೆತ್ತಿದ್ದವು. ಈ ಸಂಬಂಧ ನಿಷೇಧಿತ ವಸ್ತುಗಳಿಗೆ ಸಂಬಂಧಿಸಿದಂತೆ ಕಾರಾಗೃಹ ತಿದ್ದುಪಡಿ ಅಧಿನಿಯಮ-2022 ಕಲಂ 42 ರ ಅಡಿಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಈ ಕೇಸ್ ದಾಖಲಿಸಲಾಗಿದೆ ಎಂದು ಎಫ್‌ಐಆರ್ ನಲ್ಲಿ ತಿಳಿಸಲಾಗಿದೆ.
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?