ಸಚಿವರ ವಿರುದ್ಧ ಅವಹೇಳನ | ಪುನೀತ್‌ ಕೆರೆಹಳ್ಳಿ ಬಂಧನ?

131

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024

ಸಚಿವ ಜಮೀರ್ ಅಹ್ಮದ್ ವಿರುದ್ದ ಜಾತಿ ಹಾಗೂ ಧರ್ಮ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ನವಂಬರ್ 11 ರಂದು ಪುನೀತ್ ಕೆರೆಹಳ್ಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದರು. ಆ ವಿಡಿಯೋದಲ್ಲಿ  ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಜಾತಿ ಹಾಗೂ ಧರ್ಮದ ಹೆಸರಲ್ಲಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಸಂಬಂಧ ಪುನೀತ್‌ ಕೆರೆಹಳ್ಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕ ಬಿ.ಎಸ್.ಅಶೋಕ್  ದೂರು ನೀಡಿದ್ದರು. ಇದೀಗ ಚಾಮರಾಜಪೇಟೆ ಪೊಲೀಸರು ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ 

SUMMARY| Puneeth Kerehalli has been arrested 

KEYWORDS | Puneeth Kerehalli  arreste, jameer ahmed, politicalnews, kannadanews,

Share This Article