ಡಿಸಿಎಂ ಡಿ ಕೆ ಶಿವಕುಮಾರ್​ರನ್ನ ಭೇಟಿಯಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ! OPS ವಿಚಾರದಲ್ಲಿ ಮಾತುಕತೆ

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ಶಿವಮೊಗ್ಗ/ ಮಹತ್ವದ ಬೆಳವಣಿಗೆಯಲ್ಲಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಹಾಗೂ ಸರ್ಕಾರಿ ನೌಕರರ ನಿಯೋಗ ಡಿಸಿಎಂ ಡಿಕೆ ಶಿವಕುಮಾರ್​ರವರನ್ನ ಭೇಟಿಯಾಗಿದೆ. 

ಸರ್ಕಾರದಲ್ಲಿ ಡಿಸಿಎಂ ಸ್ಥಾನಕ್ಕೆ ಏರಿದ ಡಿಕೆಶಿಯವರನ್ನ  ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿನಂದಿಸಿದರು. ಇನ್ನೂ ಇದೇ ವೇಳೆ  ಪ್ರಣಾಳಿಕೆಯಲ್ಲಿನ ಭರವಸೆಯಂತೆ ಎನ್.ಪಿ.ಎಸ್ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ  ಮನವಿ ಮಾಡಿದ್ರು. ಇದೇ ವೇಳೆ  7ನೇ ವೇತನ ಆಯೋಗದ ವರದಿಯನ್ನು ಪಡೆದು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಯಿತು.

ಶರಾವತಿ ಆತಂಕ!/ ಸಿಗಂದೂರು ಲಾಂಜ್ ಸ್ಥಗಿತಕ್ಕೆ ಕ್ಷಣಗಣನೆ! ಲಿಂಗನಮಕ್ಕಿಯಲ್ಲಿ ವಿದ್ಯುತ್​ ಉತ್ಪಾದನೆಯು ನಿಲ್ಲುತ್ತಾ?

ರಾಜ್ಯದ ಪ್ರತಿಷ್ಠಿತ ಲಿಂಗನಮಕ್ಕಿ ಜಲಾಶಯ ಬರಿದಾಗುತ್ತ ಸಾಗಿದ್ದು, ಹಿನ್ನೀರಿನ ಪ್ರದೇಶದ ನೆಲ ಕಾಣುತ್ತಿದೆ. ಅಂದು ತಮ್ಮ ನೆಲೆ ಕಳೆದುಕೊಂಡ ಸಂತ್ರಸ್ತರು, ಇದೀಗ ಮತ್ತೆ ಹಿನ್ನೀರಿನತ್ತ ಬಂದು ತಮ್ಮ ಮೂಲಸ್ಥಳವನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಅಂದಿನ ದೈವಸ್ಥಳಗಳಿಗೆ ಹೋಗಿ ಹಣ್ಣು ಕಾಯಿ ಕೊಟ್ಟು ಬರುತ್ತಿದ್ದಾರೆ. ಮಲೆನಾಡಲ್ಲಿ ವಿಶೇಷವಾಗಿ ಕಾಣ ಸಿಗುವ ದೃಶ್ಯಗಳಿವು, ಹಿನ್ನೀರು ಖಾಲಿಯಾಗುತ್ತಲೇ , ಅಲ್ಲಿ ಬುದಕಿದ್ದ ದೊಡ್ಡ ಸಮುದಾಯ ಬಿಟ್ಟು ಹೋಗಿರುವ ಅವಶೇಷಗಳು ಕಾಣ ಸಿಗುತ್ತವೆ. ಇಂತಹ ಭಾವುಕ ಸನ್ನಿವೇಶದ ಜೊತೆಜೊತೆ ಹಿನ್ನೀರಿನ ಇಳಿಕೆ ಆತಂಕಕ್ಕೂ ಕಾರಣವಾಗುತ್ತದೆ. 

120 ಕಿಲೋಮೀಟರ್ ಸುತ್ತಾಟ

ಏಕೆಂದರೆ, ಹಿನ್ನೀರಿನ ನಡುಗಡ್ಡೆ ಪ್ರದೇಶಗಳಲ್ಲಿನ ಜನರಿಗೆ ನೀರು ದಾಟಲು ಇರುವ ಲಾಂಜ್​ ಸೇವೆಗಳು, ನೀರಿಲ್ಲದಿದ್ದರೇ ಸ್ಥಗಿತಗೊಳ್ಳುತ್ತವೆ. ಈಗಾಗಲೇ ಹಸಿರುಮಕ್ಕಿ, ಮುಪ್ಪಾನೆ ಲಾಂಜ್​ ನಿಲ್ಲಿಸಲಾಗಿದ್ದು, ಸಿಗಂದೂರು ಲಾಂಜ್​ ಕೂಡ ನಿಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಸ್ಥಳೀಯರೇ ತಮ್ಮೂರಿಗೆ ಹೋಗಲು  ನಿತ್ಯದ ಕೆಲಸ ಕಾರ್ಯಗಳಿಗೆ 120 ರಿಂದ 140 ಕಿಲೋಮೀಟರ್ ಸುತ್ತು ಹಾಕಿಕೊಂಡು ಸಾಗರ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ  ಇದೆ. 

ಡ್ಯಾಂನಲ್ಲಿ ನೀರಿಲ್ಲ

ಲಿಂಗನಮಕ್ಕಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿದ ಹಿನ್ನಲೆ ಡ್ಯಾಂ ನ ನೀರಿನ ಮಟ್ಟ ಡೆಡ್ ಸ್ಟೋರೆಜ್ ತಲುಪುವತ್ತ ಸಾಗಿದೆ. ಗರಿಷ್ಠ 1819 ಅಡಿ ನೀರು ಸಂಗ್ರಹ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ಥುತ 1746 ಅಡಿ ನೀರು ಸಂಗ್ರಹಗೊಂಡಿದೆ. ಕೇವಲ 9.94 ರಷ್ಟು ನೀರು ಸಂಗ್ರಹಗೊಂಡಿದೆ. 

ಸ್ಥಗಿತಗೊಳ್ಳಲಿದೆ ವಿದ್ಯುತ್ ಉತ್ಪಾದನೆ

ಇನ್ನೆರೆಡು ದಿನಗಳಲ್ಲಿ ಮಳೆಯಾಗದಿದ್ದರೆ, ಶರಾವತಿ ಕಣಿವೆ ಪ್ರದೇಶದ ವಿದ್ಯುದಾಗಾರಗಳು ಸ್ಥಗಿತಗೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸಾಮಾನ್ಯವಾಗಿ ಮೇ ಅಂತ್ಯ ಇಲ್ಲವೇ ಜೂನ್ ಮೊದಲ ವಾರದಲ್ಲಿ ಶರಾವತಿ ಕಣಿವೆ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಮುನ್ಲೂಚನೆಯೂ ಈ ಭಾಗದಲ್ಲಿ ಕಂಡು ಬಂದಿಲ್ಲ.

ಎರಡು ದಿನಗಳಲ್ಲಿ ಮಳೆಯಾಗದಿದ್ದರೇ

ಇನ್ನೆರೆಡು ದಿನಗಳಲ್ಲಿ ಮಳೆಯಾಗದಿದ್ದರೆ. ಸಿಗಂದೂರು ಕ್ಷೇತ್ರಕ್ಕೆ ಹೋಗುವ ಲಾಂಜ್ ಸೇವೆಯೂ ಸ್ಥಗಿತಗೊಳ್ಳುವ ಸಾಧ್ಯತೆಗಳು ಹೆಚ್ಚಿದೆ.  ಸಾಗರ ತಾಲ್ಲೂಕಿನ ಮುಪ್ಪಾನೆಯಲ್ಲಿ ಲಾಂಚ್ ಸೇವೆ ಕಳೆದ ಮೇ 26 ರಿಂದಲೇ ನಿಂತಿದೆ. ಇನ್ನೂ ಹೊಸನಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಸಹ ಕಳೆದ  ಜೂನ್ 4 ರಿಂದ ಸ್ಥಗಿತವಾಗಿದೆ. ಇದೀಗ ಸಿಗಂದೂರು ಲಾಂಚ್ ಸ್ಥಗಿತಗೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಈ ಭಾಗದಲ್ಲಿ ಲಾಂಜ್ ಸ್ಥಗಿತಗೊಂಡರೆ  ಸಾಕಷ್ಟು ಸಮಸ್ಯೆಯಾಗಲಿದೆ.  

ಲಾಂಚ್ ನಿಲ್ಲಿಸುವ ಹೊಳೆಬಾಗಿಲು, ಆಂಬಾರಗೋಡ್ಲು ನಲ್ಲಿ ಬೇಸ್ಮೆಂಟ್ ನಿಂದ ಮುಂದಕ್ಕೆ ಲಾಂಚ್ ನಿಲ್ಲಿಸಬೇಕಾದ ಅನಿವಾರ್ಯತೆ ಇದ್ದು, ಅಷ್ಟರಮಟ್ಟಿಗೆ ನೀರು ಇಳಿದಿದೆ. ಇದು ಲಾಂಜ್​ ನಿಲುಗಡೆಗೆ ಸಮಸ್ಯೆಯಾಗುತ್ತಿದೆ.

ಹಾಗೊಂದು ವೇಳೆ ಇಲ್ಲಿ ಕಾರ್ಯಾಚರಣೆ ನಿಂತರೆ, ಜನರು ಸಂಪೇಕಟ್ಟೆ, ನಿಟ್ಟೂರು ಮೂಲಕ ಸಿಗಂದೂರಿಗೆ  ಬರಬೇಕಾಗುತ್ತದೆ. ಅಲ್ಲದೆ ಈ ಭಾಗದ ಜನರು ಸಹ ಸುತ್ತಿ ಬಳಸಿಯೆ ಸಾಗರಕ್ಕೆ ಬರಬೇಕಾಗುತ್ತದೆ. ಈ ತಲೆಬಿಸಿಯನ್ನು ತಪ್ಪಿಸಲು ಮಳೆಯ ಆಗಮನವಷ್ಟೆ ಪರಿಹಾರವಾಗಿದೆ.

Viral Video/  ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಡಿಯೋ ಇನ್ನಿಲ್ಲದಂತೆ ಮನಸೆಳೆಯುತ್ತದೆ. ಅಂತಹ ವಿಡಿಯೋಗಳು ಕ್ಷಣಮಾತ್ರದಲ್ಲಿ ಎಲ್ಲರ ಮೊಬೈಲ್​ಗಳಲ್ಲಿ ಫಾರವರ್ಡ್​ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಹೀಗೆ ಸಣ್ಣ ಟೈಂನಲ್ಲಿ, ಜಗದಗಲ ಸಂಚರಿಸುವ ವಿಡಿಯೋಗಳು ವೈರಲ್​ ವಿಡಿಯೋಗಳು ವೈರಲ್​ ವಿಡಿಯೋ ಎಂದು ಕರೆಸಿಕೊಳ್ಳುತ್ತವೆ. 

ಅಪ್ಪ ಐ ಲವ್​ ಯು

ಅಂದಹಾಗೆ  ಇವತ್ತಿನ ವೈರಲ್​ ವಿಡಿಯೋ ಕೇವಲ ಮನ ಸೆಳೆಯುತ್ತಿಲ್ಲ. ಬದಲಾಗಿ ಭಾವುಕವಾಗಿಸುತ್ತಿದೆ. ಅಪ್ಪನೊಬ್ಬ ತನ್ನ ಮಗಳಿಗಾಗಿ ನೆಲಕ್ಕೆ ನೆತ್ತಿ ತಾಗಿಸಿ, ಕೈ ಮುಗಿಯುವ ದೇನಿಯ ಸ್ಥಿತಿಯ ವಿಡಿಯೋ ಇದಾಗಿದ್ದು, ಸದ್ಯ ಇಡೀ ದೇಶದಲ್ಲಿ ಪ್ರೇಮಿಗಳೆ ಈ ವಿಡಿಯೋ ನೋಡಿ ಪ್ರೀತಿಸಿ ಎಂಬಂತಹ ಸಂದೇಶ ರವಾನೆಯಾಗುವಂತೆ ಮಾಡಿದೆ. 

ಪ್ರೇಮಿಯೊಂದಿಗೆ ಹೊರಟ ಮಗಳು, ಮನೆಗೆ ಕರೆದ ಅಪ್ಪ

ಅಪ್ಪಂದಿರಿಗೆ ಎಷ್ಟೆ ಅಂದರೂ ಮಗಳು ಅಂದರೇನೆ ಪ್ರಾಣ! ಪುಟ್ಟ ಹೆಜ್ಜೆಗೆ ಗೆಜ್ಜೆ ತೊಡಿಸುವಾಗ ಸಂಭ್ರಮಿಸುವ ಅಪ್ಪ, ಮಗಳ ಕಿವಿ ಚುಚ್ಚಿದ ನೋವಿಗೆ ಅಳುವ ಅಪ್ಪ, ಮಗಳನ್ನ ಗಂಡನ ಮನೆಗೂ ಸೇರಿಸುವಾಗಲೂ ಬಿಕ್ಕಲಾಗದೇ ದುಃಖಿಸುತ್ತಾನೆ. ಅಂತಹ ಅಪ್ಪನೊಬ್ಬ ತನ್ನ ಮಗಳು ತಾನೆ ಆಯ್ಕೆ ಮಾಡಿಕೊಂಡ ಪ್ರೇಮಿಯ ಜೊತೆಗೆ ಹೊರಟಾಗ, ನಡು ಬೀದಿಯಲ್ಲಿ ಮಗಳ ಕಾಲಿಗೆ ಬಿದ್ದು ಬಾ ಮಗಳೇ ಮನೆಗೆ ಎಂದು ಬೇಡಿಕೊಳ್ತಿದ್ದಾನೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ. 

ನಡೆದಿದ್ದೇನು?

ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಹುಡುಗಿಯೊಬ್ಬಳು ಕೆಲ  ಸಮಯದ ಹಿಂದೆ ಮನೆಯಿಂದ ಪ್ರೇಮಿಯ ಜೊತೆಗೆ ಓಡಿಹೋಗಿ ಮದುವೆಯಾಗಿದ್ದಳು. ಈ ಬಗ್ಗೆ ವಿಷಯ ಗೊತ್ತಿಲ್ಲದ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದ. ಪೊಲೀಸರು ಹುಡುಗಿಯನ್ನ ಕರೆದುಕೊಂಡು ಬಂದು ಫೋಷಕರ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಆಕೆ ಅಪ್ಪ-ಅಮ್ಮ ಜೊತೆಗೆ ಹೋಗಲು ನಿರಾಕರಿಸಿ ತನ್ನ ಗಂಡನ ಜೊತೆಗೆ ಹೋಗಲು ನಿರ್ದರಿಸಿದ್ದಾಳೆ. 

ಆದರೆ ಅಪ್ಪ ಇದನ್ನ ಒಪ್ಪಲು ಸಿದ್ದನಿರಲಿಲ್ಲ, ಮಗಳೇ ಬಂದು ಬಿಡು ಮಗಳೆ ಅಂತಾ ಬೇಡಿಕೊಳ್ಳುತ್ತಾನೆ. ಮಗಳು ಕೇಳುವುದಿಲ್ಲ, ಅಪ್ಪ ಬಿಡುವುದಿಲ್ಲ, ಕೈ ಮುಗಿಯುತ್ತಾನೆ, ಕಾಲಿಗೆ ಬೀಳುತ್ತಾನೆ. ಮದುವೆಯಾದ ಹುಡುಗನ ಕಾಲಿಗೂ ಬಿದ್ದು ಬಿಟ್ಟು ಕಳಿಸಿ ಮಗಳನ್ನ ಎನ್ನುತ್ತಾನೆ, ಅಪ್ಪ ನೆಲಕ್ಕೆ ತಲೆ ಮುಟ್ಟಿಸಿ, ಕೈ ಮುಗಿವಾಗ, ಅಮ್ಮನೂ ಅಳುತ್ತಾ ಕೈ ಮುಗಿದು ಬೇಡುತ್ತಾಳೆ. ಯುವ ಮನಸ್ಸುಗಳ ನಿರ್ಧಾರ ಬದಲಾಗುವುದಿಲ್ಲ. ಆಗ ಅಪ್ಪಾ, ಬದುಕೇ ಮುಗಿದು ಹೋದ ಹಾಗೆ,, ಎರಡು ಕೈ ಬೀಸಿ ಇಷ್ಟೆ ಪರಪಂಚ ಎನ್ನುವಂತೆ ಮೇಲೆ ನೋಡುತ್ತಾನೆ…

ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದು, ಜನರು ತಮ್ಮದೆ ಆದ ರೀತಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರೇಮಿಗಳ ಬೆಂಬಲಕ್ಕೆ ನಿಂತವರೂ ಸಹ ತಂದೆಯೊಬ್ಬನ ಕುರುಡು ಪ್ರೀತಿಗೆ ಭಾವುಕರಾಗುತ್ತಿದ್ದಾರೆ. ಆ ಜಾಗದಲ್ಲಿ ತಾನಿದ್ದರೇ ಎಂಬಂತಹ ಬರಹಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದೆ. 


 

Leave a Comment