KARNATAKA NEWS/ ONLINE / Malenadu today/ Jun 6, 2023 SHIVAMOGGA NEWS
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ನಡೆದಿದ್ದ ಅಂಧಶಿಕ್ಷಕ ಕೊಲೆಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ನಡೆದಿದ್ದೇನು?
ಅಜ್ಜಂಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಮಾಲತೇಶ ಜೋಶಿ ಎಂಬವರನ್ನ, ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಘಟನೆ ನಡೆದಿತ್ತು. ಮೂಲತಃ ಮಲೆಬೆನ್ನೂರು ನಿವಾಸಿಯಾಗಿದ್ದ ಮಾಲತೇಶ್ ರವರ ಪತ್ನಿ ಮಗ ಶಿವಮೊಗ್ಗದಲ್ಲಿ ವಾಸವಿದ್ದರು.
ಪ್ರಕರಣ ಭೇದಿಸಿದ ಪೊಲೀಸರು!
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಜಂಪುರ ಪೊಲೀಸರು ಆರೋಪಿಯನ್ನು ನಿನ್ನೆ ಸೋಮವಾರ ಬಂಧಿಸಿದ್ದಾರೆ. ಸೈಯದ್ ಆಸೀಫ್ (27) ಬಂಧಿತ ಆರೋಪಿ. ಶಿಕ್ಷಕ ಮಾಲತೇಶ ಜೋಷಿ ಮತ್ತು ಹತ್ಯೆ ಆರೋಪಿ ಇಬ್ಬರೂ ಬಿ.ವಿ. ಮದ್ಯ ವ್ಯಸನಿಯಾಗಿದ್ದು ಕಳೆದ ಶುಕ್ರವಾರ ರಾತ್ರಿ ಮದ್ಯ ಸೇವಿಸಿದ್ಧಾರೆ. ಬಳಿಕ ಇವರಿಬ್ಬರ ನಡುವೆ ಜಗಳವಾಗಿದೆ. ಶಿಕ್ಷಕನ ಬಳಿಯಿಂದ 210 ರೂಪಾಯಿಯನ್ನು ಆಸೀಫ್ ಕಿತ್ತುಕೊಳ್ಳಲು ನೋಡಿದ್ದಾನೆ. ಈ ವಿಚಾರದಲ್ಲಿ ಗಲಾಟೆಯಾಗಿ, ಆಸೀಫ್ ಕಲ್ಲಿನಿಂದ ಮಾಲತೇಶ್‌ನ ತಲೆ ಹಿಂಭಾಗಕ್ಕೆ ಹೊಡೆದು ಸಾಯಿಸಿದ್ದ.
ಆರೊಪಿ ಸಿಕ್ಕಿಬಿದ್ದಿದ್ದು ಹೇಗೆ?
ಈ ಮಧ್ಯೆ ಆರೋಪಿ ಬೀರೂರು ರಸ್ತೆಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ, ಇದನ್ನ ನೋಡಿದ ವಾಕ್ ಮಾಡುತ್ತಿದ್ದ ಸ್ಥಳೀಯರೊಬ್ಬರು, ಆರೋಪಿ ಮೇಲೆ ರಕ್ತದ ಕಲೆಗಳಿರುವುದನ್ನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಆತನನ್ನು ವಿಚಾರಣೆ ನಡೆಸಿದ ಕೊಲೆ ಘಟನೆಯನ್ನು ಬಾಯ್ಬಿಟ್ಟಿದ್ಧಾನೆ.
ಸಿಗಂದೂರು ಭಕ್ತರಿಗೂ ಸಿಗದು ಲಾಂಚ್?! ಬಂದ್ ಆಗುತ್ತಾ ಹೊಳೆಬಾಗಿಲು ಕಡವು ಸೇವೆ
ಸಾಗರ/ ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮುಂಗಾರು ಆರಂಭವೂ ಸಹ ತಡವಾಗುತ್ತಿದ್ದು, ಮುಂಗಾರು ಪೂರ್ವ ಮಳೆಯು ಮಲೆನಾಡಿನಲ್ಲಿ ಸಮರ್ಪಕವಾಗಿ ಆಗಿಲ್ಲ.ಪರಿಣಾಮ ಶರಾವತಿ ಹಿನ್ನೀರಿನಲ್ಲಿ ಓಡಾಡುವ ಎರಡು ಲಾಂಚ್ಗಳ ಸಂಚಾರ ಈಗಾಗಲೇ ಸ್ಥಗಿತಗೊಂಡಿದ್ದು, ಸಿಗಂದೂರು ಲಾಂಚ್ ಸಹ ಕಾರ್ಯ ನಿಲ್ಲಿಸುವ ಸಾಧ್ಯತೆ ಇದೆಯಂತೆ. ಪರಿಣಾಮ ಸ್ಥಳೀಯರಿಗೆ ಹಾಗೂ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. .
ಅತ್ತ ಲಿಂಗನಮಕ್ಕಿ ಅಣೆಕಟ್ಟೆ ಬರಿದಾಗಿದೆ. ಈ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ಮುಪ್ಪಾನೆಯಲ್ಲಿ ಲಾಂಚ್ ಸೇವೆ ಕಳೇದ ಮೇ 26ರಿಂದಲೇ ನಿಂತಿದೆ. ಇನ್ನೂ ಹೊಸನಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಸಹ ಕಳೆದ ಜೂನ್ 4ರಿಂದ ಸ್ಥಗಿತವಾಗಿದೆ. ಇದೀಗ ಸಿಗಂದೂರು ಲಾಂಚ್ ನಿಂತ ಪಕ್ಷದಲ್ಲಿ ಸಾಕಷ್ಟು ಸಮಸ್ಯೆಯಾಗಲಿದೆ.
ಲಾಂಚ್ ನಿಲ್ಲಿಸುವ ಹೊಳೆಬಾಗಿಲು, ಆಂಬಾರಗೋಡ್ಲು ನಲ್ಲಿ ಬೇಸ್ಮೆಂಟ್ ನಿಂದ ಮುಂದಕ್ಕೆ ಲಾಂಚ್ ನಿಲ್ಲಿಸಬೇಕಾದ ಅನಿವಾರ್ಯತೆ ಇದ್ದು, ಅಷ್ಟರಮಟ್ಟಿಗೆ ನೀರು ಇಳಿದಿದೆ. ಇದು ಲಾಂಚ್ ನಿಲುಗಡೆಗೆ ಸಮಸ್ಯೆಯಾಗುತ್ತಿದೆ.
ಹಾಗೊಂದು ವೇಳೆ ಇಲ್ಲಿ ಕಾರ್ಯಾಚರಣೆ ನಿಂತರೆ, ಜನರು ಸಂಪೇಕಟ್ಟೆ, ನಿಟ್ಟೂರು ಮೂಲಕ ಸಿಗಂದೂರಿಗೆ ಬರಬೇಕಾಗುತ್ತದೆ. ಅಲ್ಲದೆ ಈ ಭಾಗದ ಜನರು ಸಹ ಸುತ್ತಿಬಳಸಿಯೆ ಸಾಗರಕ್ಕೆ ಬರಬೇಕಾಗುತ್ತದೆ. ಈ ತಲೆಬಿಸಿಯನ್ನು ತಪ್ಪಿಸಲು ಮಳೆಯ ಆಗಮನವಷ್ಟೆ ಪರಿಹಾರವಾಗಿದೆ.
ಆಯನೂರು ಬಾರ್ ಕ್ಯಾಶಿಯರ್ ಕೊಲೆ ಪ್ರಕರಣ/ ಆರೋಪಿ ಕಾಲಿಗೆ ಗುಂಡು! ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಶಿವಮೊಗ್ಗ/ ಆಯನೂರಲ್ಲಿ ಬಾರ್ ಕ್ಯಾಶಿಯರ್ ಕೊಲೆ ಪ್ರಕರಣ ಸಂಬಂಧ ಕುಂಸಿ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ನಿರಂಜನ, ಅಶೋಕ್ ಹಾಗೂ ಸತೀಶ್ ಬಂಧಿತರು . ಈ ಪೈಕಿ ಇಬ್ಬರನ್ನು ಮೊದಲೇ ಬಂಧಿಸಿದ್ದ ಪೊಲೀಸರು, ಸತೀಶ್ ನನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಎಸ್ಐ ರಾಜುರೆಡ್ಡಿಯವರು ಆರೋಪಿ ಕಾಲಿಗೆ ಗುಂಡು ಹೊಡೆದು ಆತನನ್ನ ಬಂಧಿಸಿದ್ದಾರೆ.
ಹಳೇ ಕಿರಿಕ್! ಆಯನೂರಿನಲ್ಲಿ ನಿನ್ನೆ ರಾತ್ರಿ, ಬಾರ್ ಕ್ಯಾಶಿಯರ್ಗೆ ಚುಚ್ಚಿ ಕೊಲೆ! ಪೊಲೀಸರೇ ಸಾಕ್ಷಿಯಾದರಾ ಭೀಕರ ಘಟನೆಗೆ?
ನಿನ್ನೆ ಮಧ್ಯರಾತ್ರಿ ನಡೆದಿದ್ದ ಕೊಲೆ ಸಂಬಂಧ ಆರೋಪಿ ಸತೀಶ್ನನ್ನ ಬಂಧಿಸಲು ಪಿಎಸ್ಐ ರಾಜುರೆಡ್ಡಿ ಹಾಗೂ ಪ್ರವೀಣ್ ಹಾಗೂ ಶಿವರಾಜ್ ಎಂಬಿಬ್ಬರು ಸಿಬ್ಬಂದಿ ತೆರಳಿದ್ದರು. ಈ ವೇಳೆ ಆರೋಪಿ ಸತೀಶ್ ಪೊಲೀಸರ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದಾನೆ. ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹೊಡೆದ ಹೊರತಾಗಿಯು ಸತೀಶ್ ದಾಳಿಗೆ ಮುಂದಾದಾಗ ಪಿಎಸ್ಐ ರವರು ಆತನ ಕಾಲಿಗೆ ಗುಂಡು ಹಾರಿಸಿದ್ಧಾರೆ. ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನ ಹಾಗೂ ಆರೋಪಿ ಸತೀಶ್ನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
