KARNATAKA NEWS/ ONLINE / Malenadu today/ May 31, 2023 SHIVAMOGGA NEWS
ಶಿವಮೊಗ್ಗ ದಲ್ಲಿ ಕೇಂದ್ರ ಗೃಹ ಸಚಿವಾಲಯದಡಿ ನಿರ್ವಹಿಸುತ್ತಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದ 5ನೇ ಶಾಖೆ (rashtriya raksha university) ಕಾರ್ಯಾರಂಭ ಮಾಡಿದೆ. ನಗರದ ರಾಗಿಗುಡ್ಡದಲ್ಲಿನ ಹಳೆಯ ಕೇಂದ್ರೀಯ ವಿದ್ಯಾಶಾಲೆ ಕಟ್ಟಡದಲ್ಲಿ ವಿವಿ ಪ್ರಾರಂಭವಾಗಿದೆ
ಮಹಿಳೆಯಿಂದ ಹಣ ಕಿತ್ತು ಪರಾರಿ!/ ಅತ್ತೆ ಚಿನ್ನ ಕದ್ದ ಸೊಸೆ/ ಅನೈತಿಕ ಪೊಲೀಸ್ಗಿರಿ ಆರೋಪಿಗಳು ಅರೆಸ್ಟ್! / ಸಿನಿಮಾ ಸ್ಟೈಲ್ನಲ್ಲಿ ಯುವಕನಿಗೆ ಇರಿತ! ಹಲ್ಲೆ! Today @ 7 NEWS
rashtriya raksha university course admissions / ಈ ಸಂಬಂಧ ಶಿವಮೊಗ್ಗ ವಿವಿ ಕ್ಯಾಂಪಸ್ ಸಹಾಯಕ ಅಪರಾಧಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ದಿವ್ಯಶ್ರೀ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಪೊಲೀಸ್ ಹಾಗೂ ಭದ್ರತೆಯ ವಿಷಯಗಳ ಆಧಾರದಲ್ಲಿ ರಕ್ಷಾ ವಿವಿಯನ್ನು ಕೇಂದ್ರ ಸರಕಾರ ಪ್ರಾರಂಭಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಪೊಲೀಸರಿಗೆ ಶೈಕ್ಷಣಿಕ ಸಂಶೋಧನೆ, ತರಬೇತಿಯನ್ನು ಕ್ಯಾಂಪಸ್ ನಲ್ಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಬಸಪ್ಪ ಭೇಟಿ! ಸಿಡಿಲಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ 7 ಲಕ್ಷ ರೂಪಾಯಿ ಪರಿಹಾರ ಭರವಸೆ!
rashtriya raksha university courses/ ಏನೆಲ್ಲಾ ಕೋರ್ಸ್ ಆರಂಭ?
ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಕೋರ್ಸ್ : ಕ್ಯಾಂಪಸ್ನಲ್ಲಿ ಒಂದು ವರ್ಷ ಅವಧಿಯ ಕೋರ್ಸ್ ಇದಾಗಿದ್ದು, ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಹ ರಾಗಿರುತ್ತಾರೆ.
ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್ ಕೋರ್ಸ್ : ನಾಲ್ಕು ವರ್ಷ ಅವಧಿಯ ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್ ಕೋರ್ಸ್ ಆಂಗ್ಲ ಮಾಧ್ಯಮದಲ್ಲಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ. 50 ಪಡೆದವರು ಪ್ರವೇಶ ಪಡೆಯಬಹುದು.
ಗ್ರಾಜ್ಯುಯೇಷನ್ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಕೋರ್ಸ್ : ವರ್ಷದ ಗ್ರಾಜ್ಯುಯೇಷನ್ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಕೋರ್ಸ್ ಇದ್ದು, ಪದವಿಯಲ್ಲಿ ಶೇ.50 ಅಂಕ ಗಳಿಸಿ ದವರು ಅರ್ಹರಾಗಿದ್ದಾರೆ. ಆರಂಭಿಕ ಹಂತದಲ್ಲಿ ಈ ಮೂರು ಕೋರ್ಸ್ಗಳನ್ನು ಮಾತ ಪ್ರಾರಂಭಿಸಲಾಗಿದೆ ಎಂದು ಡಾ ದಿವ್ಯಶ್ರೀ ತಿಳಿಸಿದ್ಧಾರೆ.
ಹಿಡಿದು ಬ್ಯಾಗ್ನಲ್ಲಿಟ್ಟಿದ್ದ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!
rashtriya raksha university karnataka/ ಮುಂದಿನ ದಿನಗಳಲ್ಲಿ?
ಬೇಸಿಕ್ ಕೋರ್ಸ್ ಇನ್ ಕಾರ್ಪೋರೇಟ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್, ಸರ್ಟಿಫಿಕೇಟ್ ಪ್ರೋಗ್ರಾಂ ಇನ್ ಕೋಸ್ಟಲ್ ಸೆಕ್ಯುರಿಟಿ ಆ್ಯಂಡ್ ಲಾ ಎನ್ಫೋರ್ಸ್ ಮೆಂಟ್, ಸರ್ಟಿಫಿಕೇಟ್ ಪ್ರೋಗ್ರಾಂ ಆನ್ ರೋಡ್ ಸೇಫ್ಟಿ ಮ್ಯಾನೇಜ್ಮೆಂಟ್ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಂ ಆನ್ ಫಿಸಿಕಲ್ ಫಿಟ್ನೆಸ್ ಮ್ಯಾನೇಜ್ಮೆಂಟ್ ಕೋರ್ಸ್ಗಳನ್ನು ನಂತರದ ದಿನಗಳಲ್ಲಿ ಶಿವಮೊಗ್ಗದಲ್ಲಿನ ವಿವಿ ಕ್ಯಾಂಪಸ್ನಲ್ಲಿ ಸೇರಿಕೊಳ್ಳಲಿದೆ ಮತ್ತಿದು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಇರಲಿದೆ ಎಂದು ದಿವ್ಯಶ್ರೀ ತಿಳಿಸಿದ್ದಾರೆ.
ಸುಖಾಸುಮ್ಮನೆ ಚೈನ್ ಎಳೆದು ಟ್ರೈನ್ ನಿಲ್ಲಿಸ್ತಿರುವ ಪ್ರಯಾಣಿಕರು! ಇಷ್ಟಕ್ಕೂ ರೈಲ್ವೆ ಅಲಾರಾಮ್ ಚೈನ್ ಎಳೆಯುವುದರಿಂದ ಏನಾಗುತ್ತೆ ಗೊತ್ತಾ!? ಶಿಕ್ಷೆ ಎಷ್ಟು ವರ್ಷ ಗೊತ್ತಾ?
ನೇಮಕಾತಿಯಲ್ಲಿ ಆದ್ಯತೆ!
ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ಅಧ್ಯಯನ ಮಾಡಿದವರಿಗೆ ಪೊಲೀಸ್ ಮತ್ತು ಇತರೆ ನೇಮಕದಲ್ಲಿ ಆದ್ಯತೆ ಸಿಗುತ್ತಿದ್ದು, ಈ ವಿವಿಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಗುಜರಾತ್, ಜಾರ್ಖಂಡ್, ದೆಹಲಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ 5 – 15 ಗ್ರೇಸ್ ಅಂಕಗಳು ನೀಡಲಾಗುತ್ತಿದೆ ಎಂದು ದಿವ್ಯಶ್ರೀ ಮಾಹಿತಿ ನೀಡಿದ್ಧಾರೆ. ಅಲ್ಲದೆ ಈ ಕೋರ್ಸ್ ಮಾಡುವವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಇರುತ್ತವೆ ಎಂದು ದಿವ್ಯಶ್ರೀ ತಿಳಿಸಿದ್ಧಾರೆ. ಪ್ರತಿ ವಿಭಾಗದಲ್ಲಿಯೂ 20 ಸೀಟ್ಗಳು ಇದ್ದು, ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ಧಾರೆ.
