KARNATAKA NEWS/ ONLINE / Malenadu today/ May 30, 2023 SHIVAMOGGA NEWS
ಚಿಕ್ಕಮಗಳೂರು/ ಜಿಲ್ಲೆಯಲ್ಲಿ ಹಾವು ಹಿಡಿಯುವ ತಜ್ಞರೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ಧಾರೆ. ಸ್ನೇಕ್ ನರೇಶ್ (51) ಮೃತ ದುರ್ದೈವಿ.
ಇವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದರು, ತಾವೆ ಹಿಡಿದು ಇಟ್ಟಿದ್ದ ನಾಗರಹಾವು ಕಚ್ಚಿದ್ದರಿಂದ ಇವರು ಸಾವನ್ನಪ್ಪಿದ್ಧಾರೆ.
ನಡೆದಿದ್ದೇನು?
ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿಯಲ್ಲಿ ನಾಗರ ಹಾವೊಂದು ಕಾಣಸಿಕ್ಕಿತ್ತು. ಅದನ್ನ ಹಿಡಿದಿದ್ದ ಸ್ನೇಕ್ ನರೇಶ್, ಮತ್ತೊಂದು ಹಾವನ್ನ ಹಿಡಿಯಲು ತೆರಳಿದ್ದಾರೆ. ಈ ವೇಳೆ ತಮ್ಮ ಸ್ಕೂಟಿಯಲ್ಲಿ ಬ್ಯಾಗ್ವೊಂದಕ್ಕೆ ಮೊದಲು ಹಿಡಿದಿದ್ದ ನಾಗರಹಾವನ್ನ ಹಾಕಿ ಇಟ್ಟಿದ್ದರು.
ಇನ್ನೊಂದು ಹಾವನ್ನ ಹಿಡಿಯಲು ಹೋಗಿದ್ದ ವೇಳೆ ನರೇಶ್, ತಾವು ಸ್ಕೂಟಿಯಲ್ಲಿದ್ದ ಬ್ಯಾಗ್ನ್ನ ತೆಗೆಯಲು ಮುಂದಾಗಿದ್ಧಾರೆ. ಈ ವೇಳೇ ಅದರಲ್ಲಿದ್ದ ನಾಗರ ಹಾವು ನರೇಶ್ರಿಗೆ ಕಚ್ಚಿದೆ. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ರವಾನಿಸಿದ್ದರು. ಆದರೆ ಹಾವಿನ ವಿಷ ದೇಹದ ತುಂಬಾ ವ್ಯಾಪಿಸಿದ್ದರಿಂದ ನರೇಶ್ ಸಾವನ್ನಪ್ಪಿದ್ಧಾರೆ.
ಟೈಲರ್ ಆಗಿ ಕೆಲಸ ಮಾಡುತ್ತಿರುವ ಇವರು ಈ ಹಿಂದೊಮ್ಮೆ ವಿಧಾನಸಭಾ ಎಲೆಕ್ಷನ್ಗೂ ನಿಂತು ಅಚ್ಚರಿ ಮೂಡಿಸಿದ್ದರು.
