ಕುಶಾವತಿ ಬಳಿ ಒಮಿನಿಗೆ ಹೋಂಡಾ ಅಮೇಜ್ ಡಿಕ್ಕಿ! ಎಂಆರ್​ಎಸ್​ ಸರ್ಕಲ್​ನಲ್ಲಿ ಗೂಡ್ಸ್​ ಗಾಡಿಗ ಮತ್ತು ಕಾರಿನ ನಡುವೆ ಅಪಘಾತ

Malenadu Today

 KARNATAKA NEWS/ ONLINE / Malenadu today/ May 24, 2023 SHIVAMOGGA NEWS

ಶಿವಮೊಗ್ಗ/ ಜಿಲ್ಲೆ ತೀರ್ಥಹಳ್ಳಿ ತಾಲ್ಲಕಿನ ಕುಶಾವತಿ ಬಳಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಒಮಿನಿ ಹಾಗೂ ಹೋಂಡಾ ಅಮೇಜ್​ ವಾಹನ ನಡುವೆ ಪರಸ್ಪರ ಡಿಕ್ಕಿಯಾಗಿದೆ. 

:22.05.2023 ರಂದು ರಾತ್ರಿ ನಡೆದ ಘಟನೆ ಇದಾಗಿದ್ದು, ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.  ಘಟನೆಯಲ್ಲಿ ಒಮಿನಿ ಚಾಲಕನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. 

Malenadu Today


ಎಂಆರ್​ಎಸ್​ ಸರ್ಕಲ್​ ಬಳಿಯಲ್ಲಿ ಅಪಘಾತ

ಶಿವಮೊಗ್ಗ ನಗರದ  ಕೋಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಎಂಆರ್​ಎಸ್​ ಸರ್ಕಲ್​ ಬಳಿಯಲ್ಲಿ ಅಪಘಾತ ಸಂಭವಿಸಿದೆ. ಕಾರು ಹಾಗೂ ಟಾಟಾ ಏಸ್​ ವಾಹನಗಳು ಪರಸ್ಪರ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನ ಒಂದು ಭಾಗ ಬಹುತೇಕ ಜಖಂಗೊಂಡಿದೆ. ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಾಹನಗಳನ್ನು ಸ್ಥಳಾಂತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಈ ಸಂಬಂಧ ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ. 

ಸೊರಬದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯಿತು ಪರ್ಜನ್ಯ! ಏನಿದು ವಿಶೇಷ ಓದಿ ನೋಡಿ!

ಸೊರಬ/ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಪಟ್ಟಣದ ದಂಡಾವತಿ ನದಿಯ ತಟದಲ್ಲಿರುವ  ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹಾಗೂ ವರುಣನ ಕೃಪೆಗಾಗಿ ಪ್ರಾರ್ಥಿಸಿ ಪರ್ಜನ್ಯ ಪೂಜೆ ನಡೆಸಲಾಗಿದೆ. 

ಏನಿದು?

ಪರ್ಜನ್ಯ ಪೂಜೆ ಮಳೆಗಾಗಿ ಮಾಡುವ ಒಂದು ವಿಶಿಷ್ಟ ಪೂಜೆ, ಈ ಪೂಜೆಯನ್ನ ಎಲ್ಲ ಈಶ್ವರ ದೇವಸ್ಥಾನದಲ್ಲಿ ನಡೆಸಲು ಬರುವುದಿಲ್ಲ. ದೇವಸ್ಥಾನ ನದಿತಟದಲ್ಲಿ ಇರಬೇಕು, ದೇವಸ್ಥಾನದ ಹೊಸಿಲಿಗಿಂತ ಕೆಳಗೆ ಈಶ್ವರ ಲಿಂಗ ಇರಬೇಕು. ಆಗ ಮಾತ್ರ ಹೊಸ್ತಿಲವರೆಗೆ ನೀರು ನಿಲ್ಲಿಸಿ, ಲಿಂಗವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಆಗ ಪರಮೇಶ್ವರನು ಸಂಪ್ರೀತನಾಗಿ ಜನರ ಅಪೇಕ್ಷೆ ಈಡೇರಿಸುತ್ತಾನೆ ಎಂಬುದು ನಂಬಿಕೆ. 

ಅದರಂತೆ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪರ್ಜನ್ಯ ಪೂಜೆ ನೆರವೇರಿಸುವ ವಾಡಿಕೆ ಇದೆ ಎಂದು ಪಟ್ಟಣದ ರಾಮಚಂದ್ರ ದೇವಸ್ಥಾನದ ಅರ್ಚಕ ಸತ್ಯನಾರಾಯಣ ತಿಳಿಸಿದ್ದಾರೆ. ಪರ್ಜನ್ಯ ಬ್ರಾಹ್ಮಣ ಸಮಾಜ ಅಧ್ಯಕ್ಷ ಎನ್‌.ಜಿ. ಪದ್ಮನಾಭ ನೇತೃತ್ವದಲ್ಲಿ ಪೂಜೆ ನಡೆಯಿತು. ಉಸ್ತುವಾರಿಯನ್ನು ರಾಮಚಂದ್ರ ಭಟ್, ಸತ್ಯನಾರಾಯಣ, ವೆಂಕಟೇಶ ದಾಮ್ಮೆ (ರಾಜು), ವೆಂಕಟೇಶ ಜೊಯಿಸ್, ಶ್ರೀಕಾಂತ್ ಭಟ್, ಪರಮೇಶ್ವರ ಭಟ್, ಅಕ್ಷಯ ವಹಿಸಿದ್ದರು.

 

 

 

 

Share This Article