SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 8, 2024 | SHIVAMOGGA POLICE NEWS |
25 ವರ್ಷಗಳ ಹಿಂದೆ ತಪ್ಪಿಸಿಕೊಂಡಿದ್ದವನ ಬಂಧನ
ಹಳೆಯ ಪ್ರಕರಣವೊಂದರಲ್ಲಿ ಬೇಕಿದ್ದ ಆರೋಪಿಯೊಬ್ಬನನ್ನ ಹಳೇನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಭದ್ರಾವತಿ ಔಲ್ಡ್ ಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಏ6 ಆರೋಪಿಯೊಬ್ಬರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಪ್ರಕರಣದಲ್ಲಿ ಬೇಕಿದ್ದ ಆರೋಪಿ ಎಸ್ಕೇಪ್ ಆಗಿದ್ದ. ಇದೀಗ ಈತನನ್ನ ಪೊಲೀಸರು ಪತ್ತೆ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.
ವೃದ್ಧನ ರಕ್ಷಣೆ ಮಾಡಿದ ಪೊಲೀಸರು
ಇನ್ನೊಂದೆಡೆ ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು ತೋಟದಲ್ಲಿ ಅನಾಥವಾಗಿ ಕುಳಿತಿದ್ದ ವೃದ್ಧರೊಬ್ಬರನ್ನ ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮಾಹಿತಿ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ವೃದ್ಧನ ಪೂರ್ವಪರ ವಿಚಾರಿಸಿ ಅವರಿಗೆ ಸಂಬಂಧಪಟ್ಟವರನ್ನ ಕರೆಯಿಸಿ, ಹಿರಿಯರನ್ನ ಕರೆದುಕೊಂಡು ಹೋಗುವಂತೆ ತಿಳುವಳಿಕೆ ನೀಡಿದ್ದಾರೆ. ಇನ್ನೊಂದೆಡೆ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಚಾನಲ್ ಬಳಿ ಕುಳಿತಿದ್ದ ಮಾನಸಿಕ ಅಸ್ವಸ್ಥೆಯೊಬ್ಬರನ್ನ ಪೊಲೀಸರು ರಕ್ಷಣೆ ಮಾಡಿದ್ದು, ಸ್ಥಳೀಯವಾಗಿ ಪೊಲೀಸರಿಗೆ ಮಾಹಿತಿ ನೀಡಿದವರು ಆವರನ್ನ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ ಘಟನೆ ನಡೆದಿದೆ.
ಭದ್ರಾವತಿಯ ಚಾನಲ್‌ನಲ್ಲಿ ಮೃತದೇಹ ಪತ್ತೆ
ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚಾನಲ್ ಒಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಘಟನೆ ವಿಚಾರವಾಗಿ ಸ್ಥಳಕ್ಕೆ ತೆರಳಿದ ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಮೃತದೇಹವನ್ನು ನೀರಿನಿಂದ ಹೊರತೆಗೆದಿದು ಮರಣೋತ್ತರ ಪರಿಕ್ಷೆಗೆ ಒಳಪಡಿಸಿದ್ದಾರೆ. ಇನ್ನೂ ಮೃತದೇಹ ಗುರುತು ಪತ್ತೆಯಾಗಿದ್ದು, ಘಟನೆ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ .
SUMMARY | An accused wanted in an old case was arrested by the Old Town police station police and produced before the court.
KEYWORDS | Shivamogga Fast News, Old Town Police Station, Paper Town Police Station, Bhadravathi News, Shivamogga District, Bhadravathi Rural Police Station, Bhadravathi Channel