KARNATAKA NEWS/ ONLINE / Malenadu today/ May 24, 2023 SHIVAMOGGA NEWS
ಶಿವಮೊಗ್ಗ/ ನಗರದ ನಗರ ಹೊರವಲಯ ಗೋವಿಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಆವರಣದಲ್ಲಿ ಜೆಸಿಬಿಯಿಂದ ಕಬ್ಬಿಣದ ರಾಡುಗಳನ್ನು ಇಳಿಸುವಾಗ, ಕಬ್ಬಿಣ ಮೈಮೇಲೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಅವಧೂತರ ಹೆಸರಲ್ಲಿ ಗಂಡಾಂತರ ಮೆಸೇಜ್ ಕಳುಹಿಸುತ್ತಿರುವ ಫೇಕ್ ಅಕೌಂಟ್!
ಮೃತ ಕಾರ್ಮಿಕನನ್ನ ಚಿಕ್ಕಬಳ್ಳಾಪುರದ ಗುರುಮೂರ್ತಿ (35) ಎಂದು ಗುರುತಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯಿಂದ ರಾಡುಗಳನ್ನ ಇಳಿಸಲು ಜೆಸಿಬಿ ಬಳಲಾಗಿತ್ತು. ಜೆಸಿಬಿ ಚಾಲಕ, ಜೆಸಿಬಿ ಬಕೆಟ್ ಬಳಸಿ, ಲಾರಿಯಿಂದ ರಾಡುಗಳನ್ನ ಎಳೆದಿದ್ಧಾನೆ. ಈ ವೇಳೆ ಅಲ್ಲಿಯೆ ಲಾರಿ ಕೆಳಗೆ ನಿಂತಿದ್ದ ಗುರುಮೂರ್ತಿ ಮೈಮೇಲೆ ರಾಡುಗಳು ಬಿದ್ದಿವೆ. ಪರಿಣಾಮ ಗುರುಮೂರ್ತಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.