₹2000 ರೂಪಾಯಿ ನಿರ್ಬಂಧದ ನಡುವೆ ವೈರಲ್​ ಆಗುತ್ತಿದೆ ಈ ಗುಲಾಬಿ ನೋಟು! ಕಾರಣವೇನು ಗೊತ್ತಾ?

Malenadu Today

KARNATAKA NEWS/ ONLINE / Malenadu today/ May 21, 2023 SHIVAMOGGA NEWS

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತದಲ್ಲಿ ರೂಪಾಯಿ 2000 ನೋಟು(#2000 ban) ಹಿಂಪಡೆಯುವ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ 2 ಸಾವಿರ ರೂಪಾಯಿ ನೋಟಿನ ಸುದ್ದಿಯೊಂದು ವೈರಲ್​ ಆಗುತ್ತಿದೆ. 

ನಿನ್ನೆ ಹರಿಹರದಲ್ಲಿ ಒಂದು ರೈಲಿನ ಬೋಗಿ ಮೇಲೆ ಹತ್ತಿ ಇನ್ನೊಂದು ಬೋಗಿ! ಏನಿದು ಘಟನೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೇಜು ಎಂಬವರ ಹಳೆಯ ಸುದ್ದಿ ಇದೀಗ ವೈರಲ್​ ಆಗುತ್ತಿದ್ದು, ಇವರ ಬದುಕಿಗೆ 2 ಸಾವಿರ ರೂಪಾಯಿಯ ನೋಟು ವಿಶೇಷ ನೆನಪಾಗಿ ಉಳಿಯಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 

ಪ್ರಯಾಣಿಕರ ಗಮನಕ್ಕೆ! 23 ನೇ ತಾರೀಖು , ತಾಳಗುಪ್ಪ ಟ್ರೈನ್​ ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ! ರೈಲ್ವೆ ಇಲಾಖೆ ಪ್ರಕಟಣೆ ತಿಳಿಯಿರಿ

ಕಾರಣವೇನು? 

ಇಲ್ಲಿನ ನಿವಾಸಿ ತೇಜುರವರು, ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್‍ನ್ನ 2000 ರೂಪಾಯಿ ನೋಟಿನ ರೀತಿಯಲ್ಲಿಯೇ ಮುದ್ರಿಸಿದ್ದರು.  2000 ರೂಪಾಯಿ ಎಂದು ಬರೆದಿದ್ದ ಜಾಗದಲ್ಲಿ ಮದುವೆಯಾಗುವ ಹುಡುಗಿಯ ಹೆಸರು ಹಾಗೂ ತಮ್ಮ ಹೆಸರು ಹಾಕಿಸಿದ್ದರು. ಆರ್​ಬಿಐ ಎಂಬ ಸ್ಥಳದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದು. 

ಆನವಟ್ಟಿಯಲ್ಲಿ ಕಾರು ಮತ್ತು ಟಾಟಾ ಏಸ್​ ನಡುವೆ ಡಿಕ್ಕಿ!

ಮಹಾತ್ಮ ಗಾಂಧಿಜೀಯವರ ಫೋಟೋ ಇರುವ ಜಾಗದಲ್ಲಿ ವಧು-ವರರನ್ನ ಆಶೀರ್ವದಿಸುತ್ತಿರುವ ಗಣಪತಿಯ ಭಾವಚಿತ್ರವಿತ್ತು. ಹೀಗೆ ವಿಶೇಷವಾಗಿ ಬಳಸಿದ್ದ ನೋಟಿನ ಆಹ್ವಾನ ಪತ್ರಿಕೆಯನ್ನ ಇವರ ಸ್ನೇಹಿತರು ಇದೀಗ ಮತ್ತೆ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.  ಇನ್ನು ಮುಂದೆ ಅದೆಲ್ಲಾ ನೆನಪಷ್ಟೆ ಎಂಬಿತ್ಯಾದಿ ಕಾಮೆಂಟ್ಸ್​ಗಳು ಬರುತ್ತಿದ್ದು, ನೆನಪಿನ ದೋಣಿಯಲ್ಲಿ ಇನ್ನಷ್ಟು ಕಾರ್ಡ್​ಗಳನ್ನ ಹೀಗೆ ಮುದ್ರಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.  

Share This Article