SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 3, 2024 | ಶಿವಮೊಗ್ಗ ನವರಾತ್ರಿ ಉತ್ಸವ (ನಾಡಹಬ್ಬ ದಸರಾ)ಕ್ಕೆ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಬರುವುದು ನಿಕ್ಕಿಯಾಗಿದೆ. ಈ ಸಂಬಂಧ ಸಕ್ರೆಬೈಲು ಆನೆ ಬಿಡಾರ ದಲ್ಲಿರುವ ಮೂರು ಗಂಡಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವದಲ್ಲಿ ಭಾಗವಹಿಸಲು ನಿನ್ನೆ ದಿನ ಅಧಿಕೃತ ಆಹ್ವಾನ ನೀಡಲಾಗಿದೆ.
ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ ಅವರು ಸಾಗರ್, ಬಹದ್ದೂರ್ ಮತ್ತು ಬಾಲಣ್ಣ ಹೆಸರಿನ 3 ಗಂಡಾನೆಗಳಿಗೆ ಪೂಜೆ ಸಲ್ಲಿಸಿ ಅಧಿಕೃತ ಆಹ್ವಾನ ನೀಡಿದರು.
ಇದೇ ಅಕ್ಟೋಬರ್ 12ರಂದು ಅಂಬಾರಿ ಮೆರವಣಿಗೆ ಶಿವಮೊಗ್ಗದಲ್ಲಿ ನಡೆಯಲಿದೆ. ಸಾಗರ್ ಆನೆಯು ಚಾಮುಂಡಿ ದೇವಿಯನ್ನು ಹೊತ್ತು ಅಂಬಾರಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾನೆ. ಈ ವೇಳೆ ಬಾಲಣ್ಣ ಹಾಗೂ ಬಹದ್ದೂರ್ ಸಾಗರ್ ಸಾಥ್ ನೀಡಲಿವೆ ಈ ಸಲ ಒಂದರ ಬೆನ್ನಿಗೆ ಇನ್ನೊಂದು ಆನೆ ಸಾಗಲಿದ್ದು, ಈಗಾಗಲೇ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ.