SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 25, 2024 STATE NEWS TODAY | 2019ರ ಮೇ 11ರಂದು ಮಂಗಳೂರು ಅತ್ತಾವರದಲ್ಲಿ ಶ್ರೀಮತಿ ಶೆಟ್ಟಿಯವರ ಕೊಲೆ ಪ್ರಕರಣ ಸಂಬಂಧ ಕೋರ್ಟ್ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಂಪತಿಗಳಿಬ್ಬರಿಗೆ ಶಿಕ್ಷೆ ವಿಧಿಸಿದೆ. ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಊರೆಲ್ಲೆಡೆ ಬಿಸಾಡಿದ್ದ ಇವರ ವಿರುದ್ಧ ಆರೋಪ ಸಾಬೀತಾಗಿತ್ತು. ನಿನ್ನೆ ಕೋರ್ಟ್ ತೀರ್ಪು ನೀಡಿದೆ.
ಜೋನಸ್ ಜೌಲಿನ್ ಸ್ಯಾಮ್ಸನ್ ಹಾಗೂ ವಿಕ್ಟೋರಿಯ ಮಥಾಯಿಸ್ ಜೀವಾವಧಿ ಶಿಕ್ಷೆಗೊಳಗಾದ ದಂಪತಿ, ಇವರಿಗೆ ಸಹಾಯ ಮಾಡಿದ ಆರೋಪ ಗುಡ್ಡೆಯ ರಾಜು ಆರು ತಿಂಗಳು ಶಿಕ್ಷೆ ವಿಧಿಸಲಾಗಿದೆ.
ಏನಿದು ಪ್ರಕರಣ
2019ರ ಮೇ 11ರಂದು ಚಿಟ್ ಪಂಡ್‌ನ ಹಣದ ಕಂತನ್ನ ಕಟ್ಟದ ಸ್ಯಾಮನ್ಸ್ ಮನೆಗೆ ಶ್ರೀಮತಿ ಶೆಟ್ಟಿ ಬಂದಿದ್ದರು. ಹಣ ಕಟ್ಟದನ್ನ ಪ್ರಶ್ನಿಸಿದಾಗ ಅಲ್ಲಿ ಜಗಳ ನಡೆದಿತ್ತು. ಆ ವೇಳೆ ಸ್ಯಾಮ್ಸನ್ ಮರದ ಪಟ್ಟಿಯೊಂದರಿಂದ ಶ್ರೀಮತೆ ಶೆಟ್ಟಿ ತಲೆಗೆ ಹೊಡೆದು ಕೊಲೆ ಮಾಡಿದ್ದ. ಆ ಬಳಿಕ ಗಂಡ ಹೆಂಡತಿ ಇಬ್ಬರು ಶ್ರೀಮತಿ ಶೆಟ್ಟಿಯವರ ಬಾಡಿಯನ್ನ ತಮ್ಮ ಮನೆಯ ಬಚ್ಚಲು ಮನೆಗೆ ಸಾಗಿಸಿ ಮೈಮೇಲಿನ ಚಿನ್ನ ತೆಗೆದುಕೊಂಡಿದ್ದಾರೆ. ಆ ಬಳಿಕ ದೇಹವನ್ನ ತುಂಡು ತುಂಡು ಮಾಡಿ ಅದನ್ನು ಹಲವೆಡೆ ಎಸೆದು ಸುಮ್ಮನಾಗಿದ್ದರು. ದಂಪತಿ ಕದ್ದ ಚಿನ್ನವನ್ನ ಖರೀದಿಸಿದ್ದ ರಾಜು, ಅವರ ಬೈಕ್‌ನ್ನ ಸಹ ತನ್ನ ಬಳಿ ಇಟ್ಟುಕೊಂಡಿದ್ದ..
ದಕ್ಷಿಣಕನ್ನಡ
ಈ ಸಂಬಂಧ ದಾಖಲಾದ ಚಾರ್ಜ್ ಶೀಟ್ ಕುರಿತಾಗಿ ವಿಚಾರಣೆ ನಡೆಸಿದ್ದ ದಕ್ಷಿಣಕನ್ನಡ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿ ದಂಪತಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರನೇ ಅಪರಾಧಿಗೆ ಆರೂವರೆ ತಿಂಗಳು ಸಜೆಯನ್ನು ವಿಧಿಸಿದೆ.
ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ರವರು ದಂಪತಿಗೆ (ಐಪಿಸಿ) ಸೆಕ್ಷನ್ 302 (ಕೊಲೆ) ಹಾಗೂ ಸೆಕ್ಷನ್ 34 (ಸಮಾನ ಉದ್ದೇಶದ ಕೊಲೆ) ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಅಪರಾಧಿಗಳು ಮತ್ತೆ 1 ವರ್ಷ ಸಾದಾ ಸಜೆ ಅನುಭವಿಸಬೇಕು. ಐಪಿಸಿ ಸೆಕ್ಷನ್ 201 (ಸುಳ್ಳು ಸಾಕ್ಷ್ಯ ಹಾಗೂ ಸಾಕ್ಷ್ಯನಾಶ) ಮತ್ತು ಸೆಕ್ಷನ್ 34ರ ಅಡಿ 7 ವರ್ಷಗಳ ಸಾದಾ ಸಜೆ ಮತ್ತು ತಲಾ ₹ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲವಾದಲ್ಲಿ 3 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. ಇನ್ನೂ ಐಪಿಸಿ ಸೆಕ್ಷನ್ 392 (ಸುಲಿಗೆ) ಮತ್ತು 34ರ ಅಡಿಯಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ತಲಾ ₹ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ಮಾಡಿದ್ದಾರೆ. ರಾಜುಗೆ ಐಪಿಸಿ ಸೆಕ್ಷನ್ 414ರ ಅಡಿ (ಕದ್ದ ಸ್ವತ್ತು ಬಚ್ಚಿಡಲು ನೆರವು) ಆರೂವರೆ ತಿಂಗಳು ಸಾದಾ ಸಜೆ ಮತ್ತು₹ 5ಸಾವಿರ ದಂಡ ವಿಧಿಸಿದ್ದಾರೆ.