KARNATAKA NEWS/ ONLINE / Malenadu today/ May 6, 2023 GOOGLE NEWS
ಶಿವಮೊಗ್ಗ/ Narendra modi/ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ .
ರಿಪ್ಪನ್ ಪೇಟೆ, ಸಾಗರ ಹಾಗೂ ಶಿಕಾರಿಪುರಕ್ಕೆ ಹೋಗುವವರು ಹಾಗೂ ಆ ಕಡೆಗಳಿಂದ ಶಿವಮೊಗ್ಗಕ್ಕೆ ಬರುವವರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಸಂಚಾರ ಮಾರ್ಗದಲ್ಲಿ ಬದಲಾವಣೆ
ದಿನಾಂಕ: 07-05-2023 ರಂದು ನರೇಂದ್ರ ಮೋದಿ, ಆಯನೂರಿಗೆ ಭೇಟಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಚಾರದಲ್ಲಿ ವ್ಯತ್ಯಯ ಆಗದಂತೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಸಾಗರದಿಂದ ಶಿವಮೊಗ್ಗ ಕಡೆಗೆ ಬರುವ ಲಘು ವಾಹನಗಳು
ಆನಂದಪುರ ಎಡೆಹಳ್ಳಿ ಸರ್ಕಲ್ – ಚೊರಡಿ – ಕುಂಸಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಎಡಕ್ಕೆ ತಿರುಗಿ ಹಾರ್ನಳ್ಳಿ – ಬೈರನಕೊಪ್ಪ -ಹಿಟ್ಟೂರು ಕ್ರಾಸ್ ಬಲಕ್ಕೆ ತಿರುಗಿ ಶಿವಮೊಗ್ಗಕ್ಕೆ ಬಂದು ಸೇರುವುದು.
ಸಾಗರದಿಂದ ಶಿವಮೊಗ್ಗದ ಕಡೆಗೆ ಬರುವ ಭಾರಿ ಮತ್ತು ಸರಕು ವಾಹನಗಳು
ಆನಂಪುರ – ಶಿಕಾರಿಪುರ – ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಲಘು ವಾಹನಗಳು
ಶಿವಮೊಗ್ಗದಿಂದ ಸೋಮಿನಕೊಪ್ಪ – ಗೆಜ್ಜೇನಹಳ್ಳಿ – ಮುದುವಾಲ – ಹಾರ್ನಳ್ಳಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಬಲಕ್ಕೆ ತಿರುಗಿ ಸಾಗರಕ್ಕೆ ಹೋಗುವುದು.
ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಭಾರಿ ಮತ್ತು ಸರಕು ವಾಹನಗಳು
ಶಿವಮೊಗ್ಗದಿಂದ ಹೊನ್ನಾಳಿ – ಶಿಕಾರಿಪುರ – ಆನಂದಪುರ ಮೂಲಕ ಸಾಗರಕ್ಕೆ ಹೋಗುವುದು
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಭಾರಿ ಮತ್ತು ಲಘು ವಾಹನಗಳು
ಶಿವಮೊಗ್ಗದಿಂದ ಹೊನ್ನಾಳಿ ಮೂಲಕ ಶಿಕಾರಿಪುರಕ್ಕೆ ಹೋಗುವುದು.
ಶಿಕಾರಿಪುರ ದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು
ಶಿಕಾರಿಪುರ ದಿಂದ ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
ಶಿವಮೊಗ್ಗದಿಂದ ರಿಪ್ಪನ್ ಪೇಟೆ ಹಾಗೂ ಹೊಸನಗರ ಕಡೆಗೆ ಹೋಗುವ ಭಾರಿ ಮತ್ತು ಲಘು ವಾಹನಗಳು
ಶಿವಮೊಗ್ಗದಿಂದ ಮಂಡಗದ್ದೆ – ಕೋಣಂದೂರು – ರಿಪ್ಪನಪೇಟೆ ಮೂಲಕ ಹೊಸನಗರಕ್ಕೆ ಹೋಗುವುದು.
ರಿಪ್ಪನಪೇಟೆ ಹೊಸನಗರದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು
ಕೋಣಂದೂರು – ಸಿ. ಕೆ. ರಸ್ತೆ – ಮಂಡಗದ್ದೆ – ಮಾಳೂರು ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
Read/ Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್
Read/ Kichcha Sudeepa/ ನಟ ಸುದೀಪ್ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
Malenadutoday.com Social media
