Shimoga | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಚಿಕ್ಕಲ್‌ ಚೆಕ್‌ಪೋಸ್ಟ್‌ನಲ್ಲಿ ವಾಹನ ಅಡ್ಡಹಾಕಿದ ಪೊಲೀಸರಿಗೆ ಶಾಕ್‌ | 14 ಲಕ್ಷ ದುಡ್ಡು!?

13

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 20, 2024  

ಶಿವಮೊಗ್ಗದಲ್ಲಿ ಕಳೆದ 17 ರಂದು ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಈ ವೇಳೆ ಪೊಲೀಸ್‌ ಇಲಾಖೆಯ ಬಂದೋಬಸ್ತ್‌ ಜನಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿಯು ವಿಶೇಷವಾಗಿ ಶಿವಮೊಗ್ಗ ನಗರಕ್ಕೆ  ಬರುವ ವಾಹನಗಳನ್ನ ತಪಾಸಣೆ ಮಾಡಿದ್ದ ಪೊಲೀಸರು ಚೆಕ್‌ಪೋಸ್ಟ್‌ಗಳನ್ನ ನಿರ್ಮಿಸಿ ವಾಹನದ ನೋಂದಣಿ, ಅದರಲ್ಲಿರುವವರ ವಿವರ ಹಾಗೂ ಬಂದ ಉದ್ದೇಶಗಳನ್ನು ಬರೆದುಕೊಳ್ಳುತ್ತಿದ್ದರು.

ವಿಶೇಷ ಅಂದರೆ, ಗಣಪತಿ ಉತ್ಸವದ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಂಡ ಈ ಪರೀಶೀಲನೆ ವೇಳೆ ಲೆಕ್ಕವಿಲ್ಲದ 14 ಲಕ್ಷದ ಆರವತ್ತಮೂರು ಸಾವಿರ ರೂಪಾಯಿ ಕ್ಯಾಶ್‌ ವಾಹನವೊಂದರಲ್ಲಿ ಪತ್ತೆಯಾಗಿದೆ. 

ಕಳೆದ 17 ತಾರೀಖು ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು, ಹೊಳೆಹೊನ್ನೂರು ರೋಡ್‌ನಲ್ಲಿ ಚಿಕ್ಕಲ್‌ ಬಳಿ ಚೆಕ್‌ ಪೋಸ್ಟ್‌ ನಿರ್ಮಿಸಿಕೊಂಡು ಸಿಟಿಗೆ ಎಂಟ್ರಿಯಾಗುವ ವಾಹನಗಳನ್ನ ತಪಾಸಣೆ ನಡೆಸ್ತಿದ್ದರು. 

ಮಧ್ಯಾಹ್ನ ಮೂರು ಗಂಟೆ ವೋಕ್ಸ್‌ವ್ಯಾಗನ್‌ ಕಾರೊಂದನ್ನ ಪೊಲೀಸರು ತಡೆದಿದ್ದಾರೆ. ಅದರಲ್ಲಿದ್ದವರ ನಡವಳಿಕೆ ಪೊಲೀಸರಿಗೆ ಅನುಮಾನ ಮೂಡಿಸಿದೆ. ಕೇಳಿದ ಪ್ರಶ್ನೆಗಳಿಗೆ ವಾಹನದಲ್ಲಿದ್ದವರು ಸಮರ್ಪಕ ಉತ್ತರ ಕೊಡದಿದ್ದಾಗ, ಪೊಲೀಸರು ಸಂಶಯದಿಂದ ವಾಹನವನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಕಂತೆ ಕಂತೆ ನೋಟು ಇರುವುದು ಕಾಣಿಸಿದೆ. 

ತಕ್ಷಣವೇ ಅಲರ್ಟ್‌ ಆದ ಪೊಲೀಸರು ವಾಹನದಲ್ಲಿದ್ದ ಮೂವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಇಬ್ಬರು ದಾವಣಗೆರೆ, ಮತ್ತೊಬ್ಬಾತ ಮಂಗಳೂರು ಕಡೆಯವರು ಎಂದು ತಮ್ಮ ಹೆಸರು ವಿವರ ಅಡ್ರೆಸ್‌ ತಿಳಿಸಿದ್ದಾರೆ. ಅಲ್ಲದೆ ಗ್ರಾನೈಟ್‌ ಖರೀದಿಸಲು ಹಣ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಆದರೆ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನ ತೋರಿಸಿ ಎಂದಾಗ ವಾಹನದಲ್ಲಿದ್ದವರು ದಾಖಲೆಗಳು ಇಲ್ಲ ಎಂದಿದ್ದಾರೆ. ಆ ಬಳಿಕ ಪೊಲೀಸರು ಹಣವನ್ನ ಸೀಜ್‌ ಮಾಡಿದ್ದು, ದಾಖಲೆಗಳನ್ನ ತಂದು ತೋರಿಸುವುದಾಗಿ ಹೇಳಿ ಹೋದ ವಾಹನದಲ್ಲಿದ್ದ ವ್ಯಕ್ತಿಗಳು ವಾಪಸ್‌ ಬಂದಿಲ್ಲ. ಹೀಗಾಗಿ ಪೊಲೀಸರು ಕೋರ್ಟ್‌ ಅನುಮತಿ ಪಡೆದು ಕರ್ನಾಟಕ ಪೊಲೀಸ್‌ ಆಕ್ಟ್‌ ಅಡಿಯಲ್ಲಿ ಸುಮುಟೋ ಕೇಸ್‌  ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸ್‌ ತನಿಖೆ ಮುಂದುವರಿದಿದೆ. 

ಬಂಧಿ ಮಿತ್ರ ಡಾ.ಪಿ ರಂಗನಾಥ್‌ IS BACK | ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ | ಬದಲಾವಣೆಗೆ ಕಾರಣ ಗೊತ್ತಾ?

ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Share This Article