MALENADUTODAY.COM |SHIVAMOGGA| #KANNADANEWSWEB
THIRTAHALLI/ SHIVAMOGGA /ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿ ಭಾಗಗಳಲ್ಲಿ ಪದೇ ಪದೇ ಕಾಣಿಸಿಕೊಳ್ತಿರುವ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಲಿದೆ. ನಾಳೆಯಿಂದಲೇ ಈ ಕಾರ್ಯಾಚರಣೆ ಆರಂಭವಾಗಲಿದೆ. ಸದ್ಯ ಕಾಡಾನೆ ದೇವಂಗಿ ಭಾಗದಲ್ಲಿದೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿದೆ. ಈ ಸಂಬಂಧ ನಾಲ್ಕು ಸಾಕಾನೆಗಳನ್ನು ಬಳಸಿ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಸಾಗರ್ , ಸೋಮಣ್ಣ ಹಾಗೂ ಬಾಲಣ್ಣ ಆನೆಗಳು ಕಾರ್ಯಾಚರಣೆಗೆ ಬಳಕೆಯಾಗುವ ಸಾಧ್ಯತೆ ಇದೆ.
*ಡಿಸಿ ಭೇಟಿ ವೇಳೆ, ಮಹಿಳೆ ಹೇಳಿದ ಸತ್ಯ/ ಹುಟ್ಟುವ ಮಗು ಗಂಡು ತಿಳಿಸಿದ ಆಸ್ಪತ್ರೆ ವಿರುದ್ಧ ಆರೋಗ್ಯ ಇಲಾಖೆ ಕ್ರಮ!*
ಸದ್ಯ ಕಾಡಾನೆ ಹಿಡಿಯುವ ಕಾರ್ಯಾಚರಣೆಯ ಪೇಪರ್ ವರ್ಕ್ಗಳು ಮುಗಿದಿದ್ದು ಅಧಿಕೃತ ಅನುಮತಿ ಸ್ಥಳೀಯ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಳೇಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ ಎನ್ನಲಾಗುತ್ತಿದೆ. ಸದ್ಯ ಸಕ್ರೆಬೈಲ್ ಆನೆ ಬಿಡಾರದಲ್ಲಿ ಆನೆಗಳ ಆಯ್ಕೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ. ಇನ್ನೂ ಬಹದ್ದೂರ್, ಸಾಗರ್, ಬಾಲಣ್ಣ, ಸೋಮಣ್ಣ ಆನೆಗಳು ಈಗಾಗಲೇ ಹಲವು ಖೆಡ್ಡಾ ಆಪರೇಷನ್ಗಳಲ್ಲಿ ಪಾಲ್ಗೊಂಡಿವೆ. ಚಿಕ್ಕಮಗಳೂರು , ಹಾವೇರಿ ಸೇರಿದಂತೆ ಹಲವು ಆಪರೇಷನ್ಗಳಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವಲ್ಲಿ ಬಿಡಾರದ ಆನೆಗಳು ಯಶಸ್ವಿಯಾಗಿವೆ. ಹೀಗಾಗಿ ನಾಳಿನ ಕಾರ್ಯಾಚರಣೆಗೂ ಇದೇ ಆನೆಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಮಣಿಪುರದಲ್ಲಿ ರಿಪ್ಪನ್ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews Sagar Taluk News, Sagar News, Deputy Commissioner’s Village Stay,
