SHIVAMOGGA | MALENADUTODAY NEWS | Aug 21, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ, ಸಾಲಬಾಧೆ ಕಾರಣ ಎನ್ನಲಾಗಿದೆ. ಧನಂಜಯಪ್ಪ (73) ಆತ್ಮಹತ್ಯೆ ಮಾಡಿಕೊಂಡವರು
ಕಳೆದ ಸೋಮವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದ ಅವರು ವಾಪಸ್ ಬಂದಿರಲಿಲ್ಲ. ಹೀಗಾಗಿ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆ ಬಳಿಕ ಅಡಕೆ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಇವರು ವಿವಿಧ ಮೂಲಗಳಿಂದ ಒಟ್ಟು 12 ಲಕ್ಷ ರೂ. ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಸಾಲವನ್ನ ತೀರಿಸಲು ಇವರಿಗೆ ಸಾಧ್ಯವಾಗಿರಲಿಲ್ಲ. ಕೊಳೆರೋಗ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲು ಬಿಟ್ಟಿರಲಿಲ್ಲ. ಈ ಸಲವು ಅಡಿಕೆಗೆ ಕೊಳೆರೋಗ ಕಾಣಿಸಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದ ಹಿರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ

ಇನ್ನಷ್ಟು ಸುದ್ದಿಗಳು
-
ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್‌ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ