ಎಮ್ಮೆ ಮೇಯಿಸಲು ಹೋಗಿದ್ದ ಬಾಲಕರಿಬ್ಬರು ನೀರು ಪಾಲು

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಎಮ್ಮೆ ಮೇಯಿ ಸಲು ಹೋಗಿದ್ದ ಇಬ್ಬರು ಬಾಲ ಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.  ತಾಲೂಕಿನ ಹಾರೇಗೊಪ್ಪ ಬಿ.ಕ್ಯಾಂಪ್‌ನಲ್ಲಿ  ನಿನ್ನೆ  ಸೋಮವಾರ  ಈ ಘಟನೆ ನಡೆದಿದೆ.

9ನೇ ತರಗತಿ ವಿದ್ಯಾರ್ಥಿ ಗಂಗಾಧರ (15) 6ನೇ ತರಗತಿ ವಿದ್ಯಾರ್ಥಿ ಸೂರ್ಯ (12) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದವರು, ಸಿಡುಗಿನಹಾಳ್ ಮರಾಠಿ ಕ್ಯಾಂಪ್ ಗ್ರಾಮದವರು

ನಿನ್ನೆ ಬೆಳಗ್ಗೆ ಮೂವರು ಬಾಲಕರು ಎಮ್ಮೆ ಮೈತೊಳೆಯಲು ಕೆರೆಗೆ ತೆರಳಿದ್ದಾರೆ. ಅಲ್ಲಿ, ಕೆರೆಗೆ ಇಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣ ಇನ್ನೊಬ್ಬ ಬಾಲಕ ಗ್ರಾಮಸ್ಥರಿಗೆ ಓಡಿಹೋಗಿ ವಿಷಯ ತಿಳಿಸಿದ್ದಾನೆ. ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಬಾಲಕರು ಮುಳುಗಿದ್ದರು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು, ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. 

ಇನ್ನೂ ಶಾಲೆಗೆ ಹೋಗಬೇಕಿದ್ದ ವಿದ್ಯಾರ್ಥಿಗಳು, ಎಮ್ಮೆಗೆ ಮೈ ತೊಳೆಯಲು ಹೋಗಿದ್ದೆ ಘಟನೆಗೆ ಕಾರಣವಾಯ್ತು ಎನ್ನಲಾಗಿದ್ದು, ಅತ್ತ ವಿಷಯ ತಿಳಿಯುತ್ತಲೇ ಸಂಸದ ಬಿವೈ ರಾಘವೇಂದ್ರರವರು ಸ್ಥಳಕ್ಕೆ ಬಂದು ಸಾಂತ್ವನ ಹೇಳಿದ್ದಾರೆ. 

READ | ಮಾಡಾಳ್ ಲೋಕಾ ರೇಡ್​ ಎಫೆಕ್ಟ್! ಚೆನ್ನಗಿರಿ ಕ್ಷೇತ್ರಕ್ಕೆ ಜೀವಪರವಾಗುತ್ತಾರಾ ಡಾ.ಧನಂಜಯ್ ಸರ್ಜಿ!? ಏನಿದು ಚರ್ಚೆ!?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Leave a Comment