ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

Malenadu Today
MALENADUTODAY.COM  |SHIVAMOGGA| #KANNADANEWSWEB
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನ್ಯೌಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕೇಸ್​ವೊಂದು ರಿಜಿಸ್ಟರ್ ಆಗಿದೆ. ಪರಿಚಯಸ್ಥನೊಬ್ಬನ ಜೊತೆ ಇನ್ನಿಬ್ಬರು ಜಗಳವಾಡ್ತಿರೋದನ್ನ ನೋಡಿದ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಹೋಗಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ. 
ಉಮೇಶ್ ಎಂಬವರು ಹಲ್ಲೆಗೊಳಗಾಗಿದ್ದು, ಅವರಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಿಗೆ ಪರಿಚಯವಿದ್ದ  ಸಾಗರ್ ಹಾಗೂ ಇತರರು ಜೊತೆ ಜಗಳವಾಡುತ್ತಿದ್ದ ಅದನ್ನು ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಸಾಗರ್​, ಜಗಳದಲ್ಲಿ ಇನ್ನೊಬ್ಬರ ಪರವಹಿಸ್ತೀಯಾ ಎಂದು ಹಲ್ಲೆ ಮಾಡಿದ್ಧಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. 
Share This Article