ಟ್ರೆಂಡು, ಫ್ಯಾಶನ್​, ಗತ್ತು , ಗಮತ್ತು ಅಂತಾ ಇಂತಹ ಕೆಲಸ ಮಾಡದಿರಿ! ಕೋರ್ಟ್​ನಿಂದಲೇ ಬೀಳುತ್ತೆ ದಂಡ! ಭದ್ರಾವತಿ ಯುವಕ ಕಟ್ಟಬೇಕಾಯ್ತು 6500 ಪೆನಾಲ್ಟಿ!

Malenadu Today

MALENADUTODAY.COM | SHIVAMOGGA  | #KANNADANEWSWEB

ಬೈಕ್ ಬಣ್ಣ, ಸೈಲೆನ್ಸರ್ ಬದಲಿಸಿದವನಿಗೆ 6500 ರೂ ದಂಡ ವಿಧಿಸಿದ ನ್ಯಾಯಾಲಯ

ಬೈಕ್‌ನ ಬಣ್ಣವನ್ನು ಬದಲಿಸಿದ್ದಷ್ಟೆ ಅಲ್ಲದೆ ಸೈಲೆನ್ಸರ್‌ನ್ನು ಆಲ್ಟರ್ ಮಾಡಿಸಿ, ಕರ್ಕಶ ಶಬ್ದ ಬರುವಂತೆ ಮಾಡಿಸಿದ್ದ ಪ್ರಕರಣ ಸಂಬಂಧ  ನ್ಯಾಯಾಲಯ 6500 ರೂ. ದಂಡ ವಿಧಿಸಿದೆ. ಭದ್ರಾವತಿಯ ಯುವಕನಿಗೆ  ಕಳೆದ  28-02-2023 ರಂದು ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಧೀಶರಾದ ಯತೀಶ್ ರವರು ಆರೋಪಿ ಗಗನ್, 25 ವರ್ಷ, ರೂ 6,500/- ದಂಡ ವಿಧಿಸಿದ್ದಾರೆ. 

READ |ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?

ಭದ್ರಾವತಿಯ ಹೊಸಮನೆ ನಿವಾಸಿ ಗಗನ್  ತನ್ನ ಬೈಕ್​ನ್ನ ಆಲ್ಟರ್ ಮಾಡಿಸಿದ್ದ. ಅಲ್ಲದೆ  ಆರ್‌ಸಿಯಲ್ಲಿ ನಮೂದಾಗಿದ್ದ ಕಲರ್​ ಚೇಂಜ್ ಮಾಡಿದ್ದ ಆತ ಕರ್ಕಶ ಶಬ್ದ ಬರುವಂತ ಸೈಲೆನ್ಸರ್ ಅಳವಡಿಸಿದ್ದ. 

ಇದನ್ನ ಜಯಶ್ರೀ ಸರ್ಕಲ್​ನಲ್ಲಿ ಗಮನಿಸಿದ ಪೊಲೀಸರು ಈತನನ್ನ ತಡೆದಾಗ, ಈತ ಹೆಲ್ಮೆಟ್ ಸಹ ಹಾಕಿರಲಿಲ್ಲ. ಈ ಸಂಬಂಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೋಟಾರು ವಾಹನ ಕಾಯ್ದೆ ಅಡಿ ಕೇಸ್ ದಾಖಲಿಸಿ, ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ರು. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು 6500 ರೂ ದಂಡ ವಿಧಿಸಿದ್ದಾರೆ.

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Share This Article