ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಿನ್ನೆ ಬಂದಿಳಿದ 2ನೇ ವಿಮಾನದಲ್ಲಿದ್ದವರು ಯಾರು ಗೊತ್ತೆ!? ಇಲ್ಲಿದೆ ವರದಿ

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಿನ್ನೆ ಏರ್​ಫೋರ್ಸ್​ನ ಮತ್ತೊಂದು ವಿಮಾನ ಲ್ಯಾಂಡ್ ಆಗಿದೆ. ಮೊದಲು ಸಲ ಬಂದಿಳಿದಿದ್ದ ವಿಮಾನಕ್ಕಿಂತಲೂ ಈ ವಿಮಾನ ಇನ್ನಷ್ಟು ಅತ್ಯಾದುನಿಕ ಹಾಗೂ ಹೈ ಸೆಕ್ಯುರಿಟಿ ವಿಮಾನವಾಗಿತ್ತು. ಇನ್ನೊಂದು ವಿಶೇಷ ಅಂದರೆ,  Shivamogga Airportಗೆ  ನಿನ್ನೆ ಬಂದಿಳಿದ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪಡೆಯ ಮೊದಲ ತಂಡ ಆಗಮಿಸಿದೆ

READ :   ತೀರ್ಥಹಳ್ಳಿ ರಸ್ತೆಯಲ್ಲಿ ಪಲ್ಟಿಯಾಗಿ ಉಲ್ಟಾ ನಿಂತ ಮಾರುತಿ 800 ಕಾರು

ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ತಂಡ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಏರ್​ಫೋರ್ಟ್​ನಲ್ಲಿ ಇದೇ 27 ರಂದು ನಡೆಯಲಿರುವ ಕಾರ್ಯಕ್ರಮಗಳ ಭದ್ರತೆಯನ್ನು ನೋಡಿಕೊಳ್ಳಲಿದೆ. ಮೂಲಗಳ ಪ್ರಕಾರ,  ಏರ್​ಫೋರ್ಸ್​ ಕ್ಯಾರಿಯರ್ ವಿಮಾನದಲ್ಲಿ ದೆಹಲಿಯಿಂದ ಬಂದ ಎಸ್​ಪಿಜಿ ಟೀಂನೊಂದಿಗೆ ನಾಲ್ಕು ವಿಶೇಷ ಕಾರುಗಳು ಸಹ ಬಂದಿದೆ. 

ಈ ತಂಡ ಪ್ರಧಾನಿ ಬಂದು ಬೆಳಗಾವಿಗೆ ಹೋಗುವರೆಗೂ ಏರ್​ಫೋರ್ಟ್​ ಹಾಗೂ ಕಾರ್ಯಕ್ರಮ ನಡೆಯಲಿರುವ ಸುತ್ತಮುತ್ತಲಿನ ಪ್ರದೇಶದ ಭದ್ರತೆಯನ್ನು ಕೈಗೊಳ್ಳಲಿದೆ. ಈ ಟೀಂಗೆ ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಶಿವಮೊಗ್ಗ ಪೊಲೀಸ್ ಇಲಾಖೆ ಸಾಥ್ ನೀಡಲಿದೆ. 

Leave a Comment