ಸೊರಬ: ತಾಲೂಕಿನ ಕುಪ್ಪಗಡ್ಡೆ ಗ್ರಾಪಂ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಕ್ಷತಾ ಸಂತೋಷ್ ಕುಮಾರ್ ಆಯ್ಕೆ

MALENADUTODAY.COM | SHIVAMOGGA  | #KANNADANEWSWEB

ಸೊರಬ : ತಾಲೂಕಿನ ಕುಪ್ಪಗಡ್ಡೆ ಗ್ರಾಮ ಪಂಚಾಯಿತಿಯ 3 ನೇ ಅವಧಿಯ ಅಧ್ಯಕ್ಷ ಗಾದಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಕ್ಷತಾ ಸಂತೋಷ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.13 ಸದಸ್ಯರ ಬಲವುಳ್ಳ ಗ್ರಾಮ ಪಂಚಾಯಿತಿಯಲ್ಲಿ 9 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಕಾಂಗ್ರೆಸ್‌ನ ಅಕ್ಷತಾ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಜಿ. ರಾಜಶೇಖರ್ ಕುಪ್ಪಗಡ್ಡೆ ಮಾತನಾಡಿ, ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಅವರ ಚಿಂತನೆಯಂತೆ ಎಲ್ಲಾ ಜನಾಂಗದವರಿಗೂ ಅಧಿಕಾರ ದೊರೆಯಬೇಕು ಎಂಬ ಉದ್ದೇಶದಿಂದ ಅಧಿಕಾರ ಹಂಚಿಕೆ ಮಾಡಿ 3ನೇ ಅವಧಿಗೆ ಅಕ್ಷತಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಸರಕಾರಿ ಸೌಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಪಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನೂತನ ಅಧ್ಯಕ್ಷೆ ಅಕ್ಷತಾ ಸಂತೋಷ್ ಕುಮಾರ್, ಉಪಾಧ್ಯಕ್ಷೆ ಮಮತಾ ರೇವಣಪ್ಪ, ಸದಸ್ಯರಾದ ಕಮಲಾಕ್ಷಿ ಸತೀಶ್ ಕುಮಾರ್, ವಿದ್ಯಾ ಗುರುರಾಜ್, ವಿನೋದಮ್ಮ ಹಿರಿಯಪ್ಪ, ಭಾರತಿ, ನೂರ್ ಅಹ್ಮದ್, ಹೆಚ್.ಎಸ್.ಕೇಶವ್, ವೈ.ಕೆ.ಮೋಹನ್ ಪ್ರಮುಖರಾದ ರೇವಣಪ್ಪ, ಕೃಷ್ಣಪ್ಪ, ಸಂತೋಷ್ ಕೊರಕೋಡು, ನಾಗರಾಜ್, ಪ್ರಭಾಕರ್, ಮಾಲತೇಶ್, ಹನುಮಂತಪ್ಪ, ಬಂಗಾರಪ್ಪ, ಪರಶುರಾಮ್, ರಾಮು, ಹುಳ್ಯಪ್ಪ, ಚಂದ್ರಶೇಖರ್ ಮತ್ತಿತರರಿದ್ದರು.

Leave a Comment