ಅರಶಿನ ಬಣ್ಣದ ಪೌಡರ್ ಹಾಕಿ, ಕುಕ್ಕರ್​ನಲ್ಲಿಟ್ಟ ಚಿನ್ನ ಅರ್ಧಗಂಟೆಯಲ್ಲಿ ಮಾಯ! ಹೇಗಾಗಿದ್ದು ಓದಿ ನೋಡಿ! ಸಾರ್ವಜನಿಕರೇ ಜಾಗೃತೆ!

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗದಲ್ಲಿ ಇವತ್ತಿಗೂ ಚಿನ್ನದ ಪಾಲಿಶ್ (gold polish) ಹೆಸರಲ್ಲಿ ಬಂಗಾರ ಕದಿಯುವ ಕೃತ್ಯಗಳು ನಿಂತಿಲ್ಲ. ಜನರೆಷ್ಟೆ ಜಾಗೃತರಾದರೂ ಸಹ ಕಳ್ಳರು, ಕಣ್ಮಿಟುಕಿಸುವುದರಲ್ಲಿ ಯಾಮಾರಿಸಿ ಹೋಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಪೊಲೀಸ್ (shivamogga police) ಸ್ಟೇಷನ್​ ಒಂದರಲ್ಲಿ ನಿನ್ನೆ ಎಫ್​ಐಆರ್ ದಾಖಲಾಗಿದೆ. ಅದರಲ್ಲಿರುವ ಪ್ರಕಾರ ನಡೆದಿದ್ದು ಇಷ್ಟು. 

ಮೊನ್ನೆ ಬೆಳಗ್ಗೆ ಸ್ಟೇಷನ್​ ವ್ಯಾಪ್ತಿಯ ನಿವಾಸಿಯೊಬ್ಬರ ಮನೆಗೆ ಬಂದ ಇಬ್ಬರು ಅಪರಿಚಿತರು, ನಾವು ಕಂಪನಿಯಿಂದ ಬಂದಿದ್ದೇವೆ,  ಉಚಿತವಾಗಿ ಬಂಗಾರದ ಆಭರಣಗಳಿಗೆ ಪಾಲಿಶ್ ಮಾಡಿಕೊಡುತ್ತೇವೆ ಎಂದಿದ್ದಾರೆ. ಆದಾಗ್ಯು ಮನೆಯ ಒಡತಿಗೆ ಅನುಮಾನ ಬಂದಿದೆ. ಹಾಗಾಗಿ ಹೊರಗೆಡೆಯೇ ನಿಲ್ಲಿಸಿ ವಿಚಾರಿಸಿದ್ದಾರೆ. ಈ ನಡುವೆ  ಎಂದು  ಬಿಳಿ ಬಣ್ಣದ ಪೌಡರ್ ಕೊಟ್ಟ ಅಪರಿಚಿತರು ಕೊಟ್ಟು ನಿಮ್ಮ ಚಿನ್ನದ ಬಳೆಗೆ ಹಾಕಿ ಎಂದಿದ್ದಾರೆ. ಅದರಂತೆ ಮಹಿಳೆ ಹಾಕಿದ್ದಾರೆ. ಅದು ಹೊಳೆಯಲು ಆರಂಭಿಸಿದೆ. ಇದು ಕೊಂಚ ಅಚ್ಚರಿ ಮೂಡಿಸಿದೆ. 

Malenadu Today

 READ | BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

ಇಷ್ಟನ್ನೆ ಬಂಡವಾಳ ಮಾಡಿಕೊಂಡ ಅಪರಿಚಿತರು ನಿಮ್ಮ ಕೈಯ್ಯಲಿರುವ ಬಳೆ ಮತ್ತು ಉಂಗುರಗಳನ್ನು ಬಿಚ್ಚಿ ಒಂದು ಕುಕ್ಕರ್ ನಲ್ಲಿ ಹಾಕಿ ಅದಕ್ಕೆ ನಾವು ಪೌಡರ್ ನ್ನು ಕೊಡುತ್ತೇವೆಂದು ಎಂದಿದ್ದಾರೆ. ಮನೆಯ ಒಡತಿಯು ಇದನ್ನ ನಂಬಿ 2,05,000 ಮೌಲ್ಯದ ಆಭರಣಗಳನ್ನ ಕುಕ್ಕರ್​ನಲ್ಲಿಟ್ಟು ಕೊಟ್ಟಿದ್ದಾರೆ. ಇದಕ್ಕೆ ಅಪರಿಚಿತರು ಬಿಳಿ ಮತ್ತು ಅರಿಶಿಣ ಬಣ್ಣದ ಪೌಡರ್  ಹಾಕಿ, ನೀರು ಕೊಡಿ ಎಂದು ಕೇಳಿದ್ದಾರೆ. ಆದರೆ ನೀರು ತಂದು ಕೊಡುವುದರಲ್ಲಿ ಅಪರಿಚಿತರು ತಮ್ಮ ಕೆಲಸ ಮುಗಿಸಿದ್ದರು. ಬಳಿಕ, ಮನೆಯ ಒಡತಿಗೆ ಕುಕ್ಕರ್ ಕೊಟ್ಟು ಅರ್ಧಗಂಟೆ ಕುದಿಸಿ ನೋಡಿ ಎಲ್ಲಾ ಹೊಳೆಯುತ್ತಿರುತ್ತದೆ ಎಂದು ಹೇಳಿ ಹೋಗಿದ್ದಾರೆ. ಆದರೆ ಆನಂತರ ನೋಡಿದರೆ ಅದರಲ್ಲಿ ಬಂಗಾರವೇ ಮಾಯವಾಗಿತ್ತು. 

Malenadu Today

ನಾಗರಿಕರೇ, ಎಷ್ಟೆ ಒಳ್ಳತನದ ಮಾತನಾಡಿದರು ಸಹ ಮನೆಗೆ ಬರುವ ಅಪರಿಚತರನ್ನು ಸುಲಭಕ್ಕೆ ನಂಬಲು ಹೋಗದಿರಿ, ಯಾವುದೋ ಒಂದು ನೆಪದಲ್ಲಿ ಬರುವವರನ್ನ ಅನುಮಾನ ಬಂದರೇ ಸ್ಥಳೀಯ ಬೀಟ್ ಪೊಲೀಸರಿಗೋ ಅಥವಾ 112 ಗೋ ಮಾಹಿತಿ ಕೊಟ್ಟು ಪೊಲೀಸರಿಗೂ ಇಂತಹ ಘಟನೆಗಳು ನಡೆಯದಂತೆ ತಡೆಯಲು ಸಹಕರಿಸಿ. 

 READ | BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು