ಎಂಥಾ..ಎಂಥಾ ಹಾರಾನೋ? ಅಡಿಕೆ ತಟ್ಟೆ, ನೀರಿನ ಬಾಟ್ಲಿ, ಕಲ್ಲಂಗಡಿ ! ಹಾರಗಳಲ್ಲೇ ಅಭಿಮಾನ ಮೆರೆದ ಕಾರ್ಯಕರ್ತರು| ವಿಡಿಯೋ ನೋಡಿ

MALENADUTODAY.COM | SHIVAMOGGA  | #KANNADANEWSWEB

ಬಿಜೆಪಿ ಶಕ್ತಿ ಕೇಂದ್ರದ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯು ಅದ್ದೂರಿಯಾಗಿ ಸಾಗುತ್ತಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯ ಯಾತ್ರೆ ಭದ್ರಾವತಿಯಲ್ಲಿ ನಿನ್ನೆ ಯಶಸ್ವಿಯಾಗಿದೆ. ವಿಶೇಷವಾಗಿ ನೆಚ್ಚಿನ ನಾಯಕನಿಗೆ ಬೃಹತ್ ಗಾತ್ರದ ಹಾರಗಳು ಮಾಜಿ ಸಿಎಂರರನ್ನ ಸ್ವಾಗತಿಸದವು, 

ಪಂಚರತ್ನ ಯಾtತ್ರೆ ಸಾಗುತ್ತಿದ್ದ ಭದ್ರಾವತಿ ತರಿಕೇರಿ ಮಾರ್ಗದಲ್ಲಿ ಸಂಚಾರ ದಟ್ಟಣ ಹೆಚ್ಚಾಗಿತ್ತು..   ಕಾರೆಹಳ್ಳಿ,ಕೆಂಚಮ್ಮನಹಳ್ಳಿ, ಮಾವಿನಕೆರೆ ಟಾಸ್ಕೆಂಟ್ ನಗರ., ಹರೆಹಳ್ಳಿ ಮಾರುತಿ ನಗರ ಶಿವಾನಿ ಕ್ರಾಸ್ ಗೌರಾಪುರ, ಅಂತರಗಂಗೆ ರಾಜಗೊಂಡನ ಹಳ್ಳಿ. ಅಶ್ವಥನಗರ, ಶಿವಾಜಿ ವೃತ್ತ, ರಂಪಪ್ಪ ವೃತ್ತ ಮಾಥವಚಾರ್ ವೃತ್ತ ಹಾಲಪ್ಪ ವೃತ್ತ ಅಂಡರ್ ಬ್ರೀಡ್ಜ್ ಕೆಎಸ್ಆರ್ಸಿ ಡಿಪೋ.ಯಾತ್ರೆ ಸಾಗಿ, ಕನಕ ಮಂಟಪದಲ್ಲಿ ಅಂತ್ಯಗೊಂಡಿತು. ದಾರಿಯುದ್ದಕ್ಕೂ ವಿವಿಧ ಬಗೆಯ ಬಹುಗಾತ್ರದ ಹಾರಗಳನ್ನು ಕ್ರೇನ್ ಬಳಸಿ, ಹೆಚ್.ಡಿ.ಕೆಯವರಿಗೆ ಕಾರ್ಯಕರ್ತರು ಹಾಕಿದರು. ಅಡಿಕೆ ತಟ್ಟೆಯ ಹಾರ, ರೆಡ್ ರೋಸ್ ಹಾರ,, ಕಲ್ಲಂಗಡಿ ಹಣ್ಣಿನ ಹಾರ,  ವಾಟರ್ ಬಾಟಲಿ ಹಾರ,ದುಂಡುಮಲ್ಲಿಗೆ ಹೂವಿನ ಬಹುಗಾತ್ರದ ಹಾರವಿಶೇಷವಾಗಿ ಗಮನ ಸೆಳೆಯಿತು. 

READ | BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

ಇನ್ನೂ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,ಪಂಚರತ್ನ ಯೋಜನೆ ಮೂಲಕ ಶಿಕ್ಷಣ ಆರೋಗ್ಯ ಉದ್ಯೋಗ ಕೃಷಿ ಗೆ  ಹೆಚ್ಚು ಆದ್ಯತೆ ನೀಡಲಾಗಿದೆ. ಸಂಧ್ಯಾಕಾಲದಲ್ಲಿ ವಯೋವೃದ್ಧರಿಗೆ 5 ಸಾವಿರ ನೀಡುತ್ತೇವೆ  ಸ್ತ್ರಿ ಶಕ್ತಿ ಸ್ವ ಸಹಾಯ ಸಂಘಗಳ ಸಾಲಮನ್ನಾ ಮಾಡುತ್ತೇವೆ. ವಿಎಸ್ ಐ ಎಲ್ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರ್ಖಾನೆ ಪುನಶ್ಚೇತನ ಮಾಡುತ್ತೇವೆ.ಎಂಪಿಎಂ ಕಾರ್ಖಾನೆ ರೀತಿ ಆಗಲು ಬಿಡುವುದಿಲ್ಲ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಗೌಡ ಅವರನ್ನ ಬೆಂಬಲಿಸಿ  ಎಂದು ಹೆಚ್.ಡಿ.ಕೆ ಜನತೆಯಲ್ಲಿ ಮನವಿ ಮಾಡಿದರು. 

READ | ಒಂದೇ ಬ್ಯಾನರ್​ನಲ್ಲಿ ಒಂದಾದ ಇಬ್ಬರು ನಾಯಕರು! ತೀರ್ಥಹಳ್ಳಿಯಲ್ಲಿ ಕಿಮ್ಮನೆರತ್ನಾಕರ್​ ಮತ್ತು ಆರ್​ಎಂ.ಮಂಜುನಾಥ್​ ಗೌಡರ ಜೋಡೆತ್ತಿನ ಹೋರಾಟ

ಕನಕ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಪಾಜಿ ಗೌಡರನ್ನ ಹಾಗೂ ಅವರ ಹೋರಾಟ ಬಡವರ ಬಗ್ಗೆ ಇದ್ದ ಕಾಳಜಿಯನ್ನ ನಾನು ಸ್ಮರಿಸುತ್ತೇನೆ.ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದ ಮಾಜಿ ಸಿಎಂ ನಾಡಿನ ಜನರ ಆಶೀರ್ವಾದ ದೊಂದಿಗೆ ಸರ್ಕಾರ ಬಂದರೆ ಪಂಚರತ್ನ ಯೋಜನೆಗಳು ಜಾರಿ ಮಾಡುತ್ತೇವೆ. ತೆರಿಗೆ ಹಣ ಲೂಟಿ ಮಾಡಿ ಇದೀಗ ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ನೀಡಲು ಹೊರಟಿದ್ದಾರೆ. ಉತ್ತಮ ಶಿಕ್ಷಣ ಇಲ್ಲ ಆರೋಗ್ಯ ವ್ಯವಸ್ಥೆ ಇಲ್ಲ . ರೈತರು ಇಂದಿಗೂ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಮನೆ ಇಲ್ಲ ಶೌಚಾಲಯ ವ್ಯವಸ್ಥೆ ಇಲ್ಲ. ಇಂಥ ಸಮಸ್ಯೆಗಳ ನಿವಾರಣೆಗೆ ಪಂಚರತ್ನ ಯೋಜನೆಗಳನ್ನ ಹಾಕಿಕೊಂಡಿರುವೆ. ಬಡವರ ಪರವಾದ ಪಕ್ಷ ಯಾವುದಾದರು ಇದ್ದರೆ ದೇವೇಗೌಡರು ಕಟ್ಟಿದ ಜಾತ್ಯಾತೀತ ಜನತಾ ದಳ ಮಾತ್ರ. ನಿತ್ಯ ನನ್ನ ಬಳಿ ಬಡವರು ಆರೋಗ್ಯ ಸಮಸ್ಯೆ ಶಿಕ್ಷಣಕ್ಕೆ ಆರ್ಥಿಕ ನೆರವು ಕೇಳಿಕೊಂಡು ಬರುತ್ತಾರೆ ಅವರೆಲ್ಲಾ ಬಡವರು. ರೈತರ ಬದುಕು ಉತ್ತಮವಾಗಬೇಕು . ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರು

ಮೈಸೂರು ಮಹರಾಜರು ಸ್ಥಾಪಿಸಿದ ಕಾರ್ಖಾನೆಗಳನ್ನೇ ಮುಚ್ಚುತ್ತಿದ್ದಾರೆ.

ನಾನು ಎರಡು ಬಾರಿ ಸಿಎಂ ಆದರೂ ಜನರ ದುಡ್ಡನ್ನ ಹೊಡೆದು ಶಿವಮೊಗ್ಗದಲ್ಲಿ ಕಟ್ಟಿದ್ದಂತ ಶಾಪಿಂಗ್ ಮಾಲ್ ವಿದ್ಯಾಸಂಸ್ಥೆ ಕಟ್ಟಿಲ್ಲ. ಎಲ್ಲಿಂದ ಬಂತು ಅವರಿಗೆ ಇದಕ್ಕೆಲ್ಲಾ ಹಣ. ಪ್ರಾಮಾಣಿಕ ರಾಜಕಾರಣಿಗಳನ್ನ ಕೊಟ್ಟ ಶಿವಮೊಗ್ಗ ಇಂದು ಬಡವರು ಬಡವರಾಗಿದ್ದಾ ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ಸ್ವಾಭಿಮಾನದಿಂದ ಬದುಕುವಂತ ಕಾರ್ಯಕ್ರಮ ಜಾರಿಗೆ ತರುವೆ . ಕೊಟ್ಟ ಮಾತಿಗೆ ತಪ್ಪಿದರೆ ಜಾತ್ಯಾತೀತ ಜನತಾ ದಳವನ್ನೇ ವಿಸರ್ಜನೆ ಮಾಡುವೆ  ಎಂದರು. 

ಈ ಸರ್ಕಾರ ಮಾಡಿರುವ ಸಾಲ ನಿಮ್ಮ ತಲೆ ಮೇಲೆ ಇದೆ. ತೆರಿಗೆ ಹಣವನ್ನ ಲೂಟಿ ಮಾಡಿದ್ದಾರೆ. ರಾಜ್ಯದ ಜನರ ಆಶೀರ್ವಾದಿಂದ ಮುಖ್ಯಮಂತ್ರಿ ಆಗಿಲ್ಲ . ಒಮ್ಮೆ ಸಂಪೂರ್ಣ ಬೆಂಬಲ ನೀಡಿ ಸರ್ಕಾರ ರಚನೆಗೆ ಅವಕಾಶ ಕೊಡಿ . ಕ್ಷೇತ್ರದ 20 – 25 ಹಳ್ಳಿಗಳಿಗೆ ಭೇಟಿ ನೀಡುತ್ತಿರುವುದು ಸ್ವಾತಂತ ಸರ್ಕಾರ ರಚನೆ ಮಾಡಲು. ಅಂದು ರೈತರ ಸಾಲ ಮನ್ನಾ ಮಾಡಲು ಮುಂದಾದಗ ಮಾಜಿ ಸಿಎಂ ಯಡಿಯೂರಪ್ಪ ಎಲ್ಲಿದೆ ಹಣ ಎಂದರು. ವಿಮಾನ ನಿಲ್ದಾಣ ಸ್ಥಾಪಿಸಿದ್ದಾರೆ ನೀವು ಓಡಾಡಲು ಆಗುತ್ತಾ. ಯಡಿಯೂರಪ್ಪ ಈಶ್ವರಪ್ಪ ಅವರ ಮಕ್ಕಳು ಓಡಾಡುತ್ತಾರೆ. ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡಿ. ರೈತರ ಸಾಲ ಮನ್ನಾ ಮಾಡಿದೆ ನನಗೆ ಕಮೀಷನ್ ಬಂತ..ಕಮೀಷನ್ ಬರುವಂತ ಕೆಲಸ ಮಾಡಲ್ಲ ನಾನು. 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು ರೈತರ ಸಂಕಷ್ಟ ನಿವಾರಣೆ ಆಗಲಿ ಎಂದು. 26 ಲಕ್ಷ ಕುಟುಂಬದಲ್ಲಿ 2  ಲಕ್ಷ ಕುಟುಂಬಕ್ಕೆ ಸಾಲಮನ್ನಾ ಮಾಡಿಲ್ಲ. ಮತ್ತೆ ಅಧಿಕಾರಕ್ಕೆ ಬಂದರೆ ಬಾಕಿ ಉಳಿದ 2 ಲಕ್ಷ ಕುಟುಂಬದವರ ಸಾಲ ಮನ್ನಾದ ಹಣ ಬಿಡುಗಡೆ ಮಾಡುವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಾಥಮಿಕ ಹಂತದಿಂದ ಪಿಯು ವರೆಗೆ ಉನ್ನತ ಶಿಕ್ಷಣ ಉದ್ದೇಶ ಜೆಡಿಎಸ್ ಹೊಂದಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ವೈದ್ಯರು ಇರುವ ಆಸ್ಪತ್ರೆ ನಿರ್ಮಾಣ. ಮುಂಗಾರು ವೇಳೆ ಬಿತ್ತನೆಗೆ ಪ್ರತಿ ಎಕೆರೆಗೆ 10 ಸಾವಿರ ಪ್ರೋತ್ಸಾಹ ಧನ ನೀಡುವೆ. ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡುತ್ತೇವೆ. ಭದ್ರಾವತಿಯಲ್ಲಿರುವ ಬಗರ್ ಹುಕುಂ ಸಮಸ್ಯೆಗೆ ಪರಿಹಾರ ನೀಡುವೆ. ನಮ್ಮ ಸರ್ಕಾರ ಬಂದರೆ ಹಕ್ಕುಪತ್ರ ನೀಡುತ್ತೇವೆ.  ಸಿದ್ದರಾಮಯ್ಯ ಆಡಳಿತಾಧಿಯಲ್ಲಿ  3 ಸಾವಿರ ವಿಎಸ್ ಐ ಎಲ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕಾರ್ಖಾನೆ ನಡೆಸಲು ಹಣ ನೀಡಲಿಲ್ಲ ಮುಚ್ಚಲು ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ರಾಜ್ಯ ಸರ್ಕಾರದಿಂದಲೇ ಕಾರ್ಖಾನೆ ನಡೆಸುವುತ್ತೇವೆ. 125 ಸ್ಥಾನ ಗೆದ್ದೇ ಗೆಲ್ಲುವ ವಿಶ್ವಾಸವಿದೆ ಎಂದು ಹೆಚ್ ಡಿಕೆ ಹೇಳಿದ್ದಾರೆ.

ಎಲ್ಲೂ ನೋಡಲು ಸಿಗದಂತಹ, ಇದೇ ಮೊದಲ ಸಲ ಅಡಿಕೆ ತಟ್ಟೆಗಳ ಮೂಲಕ ಬೃಹತ್ ಹಾರ ತಯಾರಿಸಿ ಮಾಜಿ ಸಿಎಂ ಜೆಡಿಎಸ್​ನ ಹೆಚ್​ಡಿ ಕುಮಾರಸ್ವಾಮಿಗೆ ಹಾಕಿದ ಅಭಿಮಾನಿಗಳು! ಸ್ಥಳ : ಭದ್ರಾವತಿ #ShivamoggaNews #HDKumaraswamy #Kumaraswamy #JDS #pancharathnarathayatre pic.twitter.com/WgYOKMKtOY

— malenadutoday.com (@CMalenadutoday) February 22, 2023

 ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ. ಎಂಪಿಎಂ, ವಿ ಐ ಎಸ್ ಐಲ್ ಕಾರ್ಖಾನೆ ಮುಚ್ಚಲು ಜೆಡಿಎಸ್ ಬಿಡುವುದಿಲ್ಲ ಎಂದು ಹೇಳಿದರು. ಮೇ ನಲ್ಲಿ ನಮ್ಮ ಸರ್ಕಾರ ಬಂದರೆ ಜೂನ್ ನಲ್ಲಿ ಕಾರ್ಖಾನೆ ಆರಂಭಿಸುತ್ತೇವೆ. ಕಾರ್ಖಾನೆ ಮುಚ್ಚಿದರೆ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. 30 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸುತ್ತೇವೆ. ಮಣ್ಣಿನ ಮಗ ಕುಮಾರಣ್ಣನ ಸರ್ಕಾರ ಬಂದರೆ ಬಡವರ ಸಂಕಷ್ಟ ನಿವಾರಣೆ ಆಗುತ್ತದೆ. ಉಚಿತ ಶಿಕ್ಷಣ ಆರೋಗ್ಯ ನೀಡುವುದು ಜೆಡಿಎಸ್ ಸಂಕಲ್ಪ ಮಾಡಿದೆ  ಎಂದು ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಹೇಳಿದ್ದಾರೆ.

Malenadu Today

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು