2021 ರ ಸೆಪ್ಟೆಂಬರ್ ತಿಂಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಿಟ್ಲಗೋಡು ಗ್ರಾಮ, ಅದಕ್ಕೆ ಹೊಂದಿಕೊಂಡಿರುವ ಕಾಡು, ಆ ಅರಣ್ಯ ಪ್ರದೇಶದಲ್ಲಿ ಒಂದು ಶಿಫ್ಟ್ ಡಿಸೈರ್ ಕಾರು ಪೂರ್ತಿ ಸುಟ್ಟುಹೋಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಕ್ಕಿಂತ ಅಚ್ಚರಿ ಅಂದರೆ, ಆ ಕಾರಿನಲ್ಲಿ ಒಂದು ಶವ ಸುಟ್ಟ ಇದ್ದಿಲಿನ ರೂಪದಲ್ಲಿ ಕಾಣ ಸಿಕ್ಕಿತ್ತು. dear readers , ಇದು ದೃಶ್ಯ ಸಿನಿಮಾ ಸ್ಟೈಲ್ನಲ್ಲಿ ಕೊಲೆಯೊಂದನ್ನ ಮುಚ್ಚಿಹಾಕಲು ಹೋಗಿ ಮನೆ ಮಂದಿಯೆಲ್ಲಾ ಅಂದರ್ ಆದ ಸ್ಟೋರಿ!. ಲಾಂಟೆನಾ ಬೆಳೆದಿದ್ದ ಆ ಕಾಡಿನ ಏರಿಯಾದಲ್ಲಿ ಕಾರೊಂದು ಸುಟ್ಟು ಹೋಗಿದ್ದಕ್ಕೆ ಏನು ಕಾರಣ ಇರಬಹುದು. ಓವರ್ ಸ್ಪೀಡ್ನಲ್ಲಿ ಬಂದು ಎಡವಟ್ಟಾಗಿರಬಹುದಾ!? ನೋ ಚಾನ್ಸ್? ವೆಹಿಕಲ್ ರನ್ ಆಗೋದೆ ಕಷ್ಟ ಅನ್ನುವ ಸ್ಥಳದಲ್ಲಿ, ಸ್ಪೀಡ್ ಡ್ರೈವಿಂಗ್ ಸಾಧ್ಯವೇ ಇಲ್ಲ! ಖುದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಹಾಗೊಂದು ಚಾನ್ಸನ್ಸ್ ಇರಬಹುದು! ಹೀಗಂತ ತೀರ್ಥಹಳ್ಳಿ ಪೊಲೀಸರು ಡೌಟ್ ಮೇಲೆ ತನಿಖೆ ಆರಂಭಿಸಿದ್ರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು
ಈ ಮಧ್ಯೆ ಅಂದಿನ ಎಸ್ಪಿ ಲಕ್ಷ್ಮೀಪ್ರಸಾದ್ ಪ್ರಕರಣವನ್ನು ಬೇರೆಯದ್ದೆ ಆ್ಯಂಗಲ್ನಲ್ಲಿ ಯೋಚಿಸಿದ್ರು. ಸ್ಪಾಟಿಗೆ ವಿಸಿಟ್ ಕೊಟ್ಟಿದ್ದ ಅವರು, ಇನ್ವೇಸ್ಟಿಗೇಷನ್ಗೆ ದಿ ಬೆಸ್ಟ್ ಎನ್ನುವ ಟೀಂ ರೆಡಿ ಮಾಡಿದ್ರು. ತಂಡ ರಚನೆಯಾಗಿ ಜಸ್ಟ್ ಒಂದು ವಾರದಲ್ಲಿ ಆರೋಪಿಗಳು ಅಂದರ್ ಆಗಿದ್ದರು. ಅಲ್ಲಿ ನಡೆದಿದ್ದು ಆಕ್ಸಿಡೆಂಟ್ ಅಲ್ಲ, ಪ್ರೀ ಪ್ಲ್ಯಾನ್ ಮರ್ಡರ್ ಎಂಬುದು ಬಟಾ ಬಯಲಾಗಿತ್ತು. ಕಾರಿನ ರಿಜಿಸ್ಟ್ರೇಷನ್ ನಂಬರ್ನಿಂದ ಕಾರು ಮಾಲಿಕರು ಯಾರು? ಅಲ್ಲಿ ಸತ್ತವರು ಯಾರು ಎಂಬುದು ಪೊಲೀಸರಿಗೆ ಗೊತ್ತಾಗಿತ್ತು. ಅಲ್ಲಿ ಸುಟ್ಟು ಕರಕಲಾಗಿದ್ದ ವ್ಯಕ್ತಿ ಆನಂದಪುರ ಭಾಗದ ಒಂದು ಗ್ರಾಮದವರಾಗಿದ್ದರು. ಆದಾಗ್ಯು ಮೃತರು ಅವರೇ ಎನ್ನುವುದಕ್ಕೆ ಡಿಎನ್ಎ ಪರೀಕ್ಷೆಗೂ ಪೊಲೀಸರು ಮುಂದಾಗಿದ್ದರು. ಬಾಡಿ ಐಡೆಂಟಿಫೈ ಆಗುತ್ತಲೇ ಇನ್ವೆಸ್ಟಿಗೇಶನ್ ಟೀಂನ ಅನುಮಾನದ ಕಣ್ಣು ತಿರುಗಿದ್ದು ಮೃತನ ಕುಟುಂಬಸ್ಥರ ಮೇಲೆ
ಕುಟುಂಬದವರ ಮೇಲೆಯೇ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದೇಕೆ?
ಕ್ರೈಂ ಸೀನ್ಗಳಲ್ಲಿ ತುಂಬಾ ದೂರದ ಲಿಂಕ್ಗಳು ಇರೋದಿಲ್ಲ. ಸಂಬಂಧಪಟ್ಟವರಿಂದಲೇ ಅಪರಾಧಗಳು ಸಂಭವಿಸುತ್ತಿರುತ್ತದೆ. ಅದರಲ್ಲಿಯು ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಕ್ರೈಂಗಳು ಅದು ನಡೆದಷ್ಟೆ ವೇಗವಾಗಿ ಅದರ ರಹಸ್ಯಗಳು ಅಷ್ಟೆ ಬೇಗನೇ ಬಯಲಾಗುತ್ತವೆ. ಅದೇ ರೀತಿಯಲ್ಲಿ ಮಿಟ್ಲುಗೋಡು ಕಾಡಿನಲ್ಲಿ ಕಾರಿನ ಬೆಂಕಿಗೆ ಬಲಿಯಾದವನ ಕಥೆಯನ್ನು ಬಿಡಿಸುತ್ತಾ ಹೋದ ಪೊಲೀಸರಿಗೆ ಆತನ ಪತ್ನಿಯ ಮೇಲೆ ಮೊದಲು ಅನುಮಾನ ಮೂಡಿತ್ತು. ಏಕೆಂದರೆ, ಮೃತನ ಪತ್ನಿ, ಆತನ ಹಿರಿಯ ಮತ್ತು ಕಿರಿಯ ಮಗ ಜೊತೆಗೆ ಅಕ್ಕನ ಮಗನ ಸ್ಟೇಟ್ಮೆಂಟ್ಗಳು ತಾಳೆಯಾಗುತ್ತಿರಲಿಲ್ಲ. ಈ ಗೊಂದಲಗಳನ್ನೆಲ್ಲಾ ಒಟ್ಟುಗೂಡಿಸಿ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ಸತ್ಯ ಆಚೆಬಿದ್ದಿತ್ತು.

ಪತ್ನಿ ಹಾಗು ಮಕ್ಕಳೇ ಸೇರಿ ಮಾಡಿದ್ರು ಕೊಲೆ
ಹೌದು, ನಿಜ, ಅಲ್ಲಿ ಪತ್ನಿ ಹಾಗೂ ಮಕ್ಕಳೇ ಮನೆ ಯಜಮಾನನಿಗೆ ಗುಂಡಿ ತೋಡಿದ್ದರು. ಮಿಟ್ಲುಗೋಡು ಕಾಡಲ್ಲಿ , ಸಂಸ್ಕಾರ ಕ್ರಿಯೆಯು ಇಲ್ಲದೆ ಸುಟ್ಟುಹೋಗಿದ್ದ ಆ ವ್ಯಕ್ತಿಗೆ ಅನೈತಿಕ ಸಂಬಂಧವಿತ್ತಂತೆ. ಅದೇ ಕಾರಣಕ್ಕೆ ಇದ್ದುಬದ್ದುದ್ದೆನ್ನಲ್ಲಾ ಕಳೆದುಕೊಳ್ಳುತ್ತಿದ್ದಂತೆ. ಈತನ ಈ ಖಯಾಲಿ ಮನೆಯನ್ನ ಬೀದಿಗೆ ತರಿಸುತ್ತೆ ಎಂಬ ಕಾರಣಕ್ಕೆ ಗೃಹಲಕ್ಷ್ಮೀ ಹಾಗೂ ಸುಪುತ್ರರು ಮತ್ತು ಕಳ್ಳುಬಳ್ಳಿಯ ಸಂಬಂಧಿಕ ಒಟ್ಟಾಗುತ್ತಾರೆ. ಯಜಮಾನನ ಜಾಗವನ್ನೆ ಖಾಲಿ ಮಾಡಿಸಿದರೆ, ಭವಿಷ್ಯವಾದರೂ ಚೆನ್ನಾಗಿರಬಹುದು ಎಂದು ಸ್ಕೆಚ್ ರೂಪಿಸುತ್ತಾರೆ.
26-09-21 ರ ಬೆಳಿಗ್ಗೆ ಸಾಗರ ತಾಲ್ಲೂಕಿನ ಆ ಒಂದು ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ ಆರೋಪಿಗಳು ಸೀದಾ ಮನೆಗೆ ಬರುತ್ತಾರೆ. ಅಲ್ಲಿಯೇ ಸ್ಥಳಿಯವಾಗಿ ತಂತಿ ಬಿಗಿಯುವ ರಾಡನ್ನು ಎತ್ತಿಟ್ಟುಕೊಳ್ಳುತ್ತಾರೆ. ಕೊಲೆಗೊಂದು ಸಿದ್ಧತೆ ಪೂರ್ಣಗೊಳ್ಳುತ್ತದೆ. ಮನೆ ಮಾಲೀಕನ ಮನೆಗೆ ಬರುತ್ತಲೇ ಆತನ ತಲೆಗೆ ಬಲವಾದ ಏಟು ಕೊಟ್ಟು ನೆಲಕ್ಕೆ ಉರುಳಿಸುತ್ತಾರೆ ಆರೋಪಿಗಳು. ಆನಂತರ ತಮ್ಮ ಮೊಬೈಲ್ಗಳನ್ನು ಆಫ್ ಮಾಡಿಕೊಂಡು ಶಿಫ್ಟ್ ಕಾರಿನಲ್ಲಿ ತಮ್ಮವನ ಶವ ಹಾಗೂ ಪೆಟ್ರೋಲ್ ಕ್ಯಾನ್ ಇಟ್ಟುಕೊಂಡು ಮಿಟ್ಲುಗೋಡು ಕಾಡಿಗೆ ಬರುತ್ತಾರೆ. ಆಗ ರಾತ್ರಿ ಸುಮಾರು 10.30 . ಅಲ್ಲಿ ಯಾರು ಇಲ್ಲದ್ದನ್ನ ಗಮನಿಸಿ ಕಾರಿನ ಡ್ರೈವಿಂಗ್ ಸೀಟ್ನಲ್ಲಿ ಆತನನ್ನ ಕೂರಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾರೆ. ಅಲ್ಲಿಂದ ದಾರಿಮಧ್ಯೆ ಆತನ ಮೊಬೈಲ್ ಬಿಸಾಡಿ, ಮನೆಗೆ ವಾಪಸ್ ಬರುತ್ತಾರೆ. ಸಾಕ್ಷ್ಯನಾಶಕ್ಕಾಗಿ ಇಡೀ ಮನೆಯನ್ನು ಪಿನಾಯಿಲ್ ಹಾಕಿ ಕ್ಲೀನ್ ಮಾಡುತ್ತಾರೆ. ಧರಿಸಿದ್ದ ಬಟ್ಟೆ ಹಾಕಿದ್ದ ಚಪ್ಪಲಿ ಹೀಗೆ ಒಂದನ್ನು ಬಿಡದೆ ಸುಟ್ಟುಹಾಕುತ್ತಾರೆ. ಇಷ್ಟೆಲ್ಲಾ ಮಾಡಿ, ಸೈಲೆಂಟ್ ಆಗಿ ತಮ್ಮ ಪಾಡಿ ತಾವಿರುತ್ತಾರೆ ಆರೋಪಿಗಳು. ಆದರೆ, ಪೊಲೀಸರಿಗೆ ಇದೇ ಫಸ್ಟ್ ಡೌಟ್ ಆಗಿ ಕಾಡಿತ್ತು, ಮೃತನ ಮೂಲ ಹುಡುಕಿ ಪೊಲೀಸರೇ ಹೋಗುವರೆಗೂ ಆತನ ಕುಟುಂಬಸ್ಥರು, ಆತನ ನಾಪತ್ತೆಯ ಬಗ್ಗೆ ಏಕೆ ತಲೆಕೆಡಿಸಿಕೊಂಡಿಲ್ಲ. ಈ ಮೌನವೇಕೆ ಎಂದುಕೊಂಡ ಪೊಲೀಸರಿಗೆ ಕ್ರೈಂಸ್ಟೋರಿ ಬಿಡಿಸುವುದು ದೊಡ್ಡಕಷ್ಟವೇನಾಗಿರಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಆರೋಪಿಗಳು ಕಾರಿನ ನಂಬರ್ ಪ್ಲೇಟ್ ಕಿತ್ತಿದ್ದರೂ ಅದನ್ನ ಅಲ್ಲಿಯೇ ಬಿಸಾಡಿ ಬಂದಿದ್ದು ಮೊದಲ ಕ್ಲ್ಯೂ ಆಗಿತ್ತು.
ಜೆಪಿ ಸ್ಟೋರಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
