sagara marikamba jatre ಕಾಪಾಡು ತಾಯಿ! : ಸಾಗರ ಮಾರಿಕಾಂಬೆ ಜಾತ್ರೆಗೆ ವಿದ್ಯುಕ್ತ ಚಾಲನೆ! ದೃಷ್ಟಿಬೊಟ್ಟು ಇಟ್ಟು ಮಾಂಗಲ್ಯ ಧಾರಣೆ!

Malenadu Today

MALENADUTODAY.COM | SHIVAMOGGA NEWS |SAGARA TALUK

sagara marikamba jatre ಸಾಗರ ಮಾರಿಕಾಂಬಾ ಜಾತ್ರೆ  ವಿದ್ಯುಕ್ತವಾಗಿ ಆರಂಭವಾಗಿದೆ. ಸಾಗರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಇಡೀ ಸಾಗರ ಪಟ್ಟಣವೇ ಸಿಂಗಾರಗೊಂಡಿದೆ. ಎಲ್ಲ ಕಡೆಯಲ್ಲಿಯೂ ಜಾತ್ರೆಯ ವೈಭವ  ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ದೇವಿಯ ದರ್ಶನ ಪಡೆಯಲಿದ್ದಾರೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ ಜನವರಿ 31ರ ರಾತ್ರಿ ಅಂಕ ಹಾಕುವ ಮುಖಾಂತರ ಜಾತ್ರೆಯ ಆಚರಣೆಗೆ ಚಾಲನೆ ನೀಡಲಾಯಿತು. ಎರಡು ದಿನ ಮುಂಚಿತವಾಗಿ ಭಾನುವಾರ ಫೆಬ್ರವರಿ 5ರಿಂದ ದಿಂದ ಪೂಜಾ ಕಾರ್ಯಗಳು ಚಾಲನೆಗೊಂಡಿವೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ಮುಗಿದ ಬೆನ್ನಲ್ಲೆ, 9 ಮನೆಗಳಿಂದ ಘಟೇವು ತರಲಾಯ್ತು. ನಂತರ ಇವತ್ತು ಬೆಳಗಿನ ಜಾವ ಮಹಾಗಣಪತಿ ದೇವಸ್ಥಾನದಲ್ಲಿ ದೇವಿಯ ಮಾಂಗ್ಯಲ್ಯ ಪೂಜೆ ನಡೆದು, ಪುರೋಹಿತರ ಮನಯೆಲ್ಲಿ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ತಾಯಿ ಮನೆ ಆವರಣಕ್ಕೆ, ಬಾಸಿಂಗ, ಮಾಂಗಲ್ಯಗಳನ್ನು ತರಲಾಯ್ತು, ಬೆಳಗ್ಗೆ  5 ಗಂಟೆಗೆ ಸಲ್ಲುವ ಬ್ರಾಹ್ಮಿ ಲಗ್ನದಲ್ಲಿ ದೇವಿಗೆ ಭಾಸಿಂಗ ಕಟ್ಟಿ, ಮಾಂಗಲ್ಯ ಧರಿಸಿ, ದೃಷ್ಟಿ ಬೊಟ್ಟು ಇಡುವುದರೊಂದಿಗೆ ಮಾರಿಜಾತ್ರೆ ವಿದ್ಯುಕ್ತ ಚಾಲನೆ ನೀಡಲಾಯ್ತು. 

Sagara Marikambe : ಸಾಗರ ಮಾರಿಕಾಂಬೆ ಜಾತ್ರೆಗೆ ಇವತ್ತಿನಿಂದ ಧಾರ್ಮಿಕ ಪೂಜೆ ! ಪ್ರಕ್ರಿಯೆ, ಪದ್ದತಿ, ವಿಧಾನ ಏನು? ಪ್ರಸಿದ್ಧ ಉತ್ಸವದಲ್ಲಿ ಯಾವಾಗ ಏನೇನು ನಡೆಯಲಿದೆ? ವಿವರ ಇಲ್ಲಿದೆ

ಇನ್ನೂ ಮಾರಿಕಾಂಬೆಯ ದರ್ಶನ ಪಡೆಯಲು ನಿನ್ನೆ ರಾತ್ರಿಯಿಂದಲೇ ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಮೊದಲ ಪೂಜೆ ಕೊಟ್ಟು ಸಾವಿರಾರು ಭಕ್ತರು ಪುನೀತರಾದರು. ಇನ್ನೂ ಇವತ್ತು ( ಫೆ. 7 )  ರಾತ್ರಿ 10ಕ್ಕೆ ಪೋತರಾಜನಿಂದ ಚಾಟಿ ಸೇವೆ ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯಲಿದ್ದು, ಇದೇ ದಿನ ರಾತ್ರಿ ದೇವಿಯ ದಂಡಿನ ಮೆರವಣಿಗೆಯು ಪ್ರಸಿದ್ಧ ಜಾನಪದ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಸಾಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಸಾಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಹಾಗೂ ಕಲಾತಂಡಗಳು ಆಗಮಿಸಿ ಪಾಲ್ಗೊಳ್ಳಲಿವೆ. ಫೆ. 8ರ ಬೆಳಗ್ಗೆ ಮಾರಿಕಾಂಬಾ ದೇವಿಯ ಗಂಡನ ಮನೆ ದೇವಸ್ಥಾನದಲ್ಲಿ ದೇವಿಯ ಕೂರಿಸಲಾಗುತ್ತದೆ. ಎಂಟು ದಿನಗಳ ಕಾಲ ಫೆಬ್ರವರಿ 15ರವರೆಗೂ ದೇವಿಯ ದರ್ಶನ ಮಾಡಲು ಸಾರ್ವಜನಿಕರಿಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article