ಕಿಮ್ಮನೆ ರತ್ನಾಕರ್​ ಮತ್ತು R.M. ಮಂಜುನಾಥ್ ಗೌಡರ ಕೈಗಳನ್ನು ಕಾಂತಾರ ಸ್ಟೈಲ್​ನಲ್ಲಿ ಹಿಡಿದು ಒಂದು ಮಾಡಿದ್ರಾ ಕಾರ್ಯಕರ್ತರು!?

Malenadu Today

MALENADUTODAY.COM | SHIVAMOGGA NEWS |THIRTHAHALLI TALUK

ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ (Thirtahalli congress) ಸಾಕಷ್ಟು ಬೆಳವಣಿಗಳು ನಡೆಯುತ್ತಿವೆ. ಜಿಲ್ಲಾಧ್ಯಕ್ಷ ಸುಂದರೇಶ್​ರವರು, ಇಲ್ಲಿನ ಕಾಂಗ್ರೆಸ್​ ಮುಖಂಡರಾದ ಕಿಮ್ಮನೆ ರತ್ನಾಕರ್ (kimmane ratnakar) ಹಾಗೂ ಆರ್​ಎಂ ಮಂಜುನಾಥ್​ ಗೌಡರ ನಡುವಿನ ಭಿನ್ನಮತ ಶಮನ ಮಾಡುವ ಸಂಧಾನ ಮಾಡಿದ್ದರು. ಅಲ್ಲದೆ ಇಬ್ಬರು ನಾಯಕರು ಒಗ್ಗಟ್ಟಿನಿಂದ ಸಾಗುತ್ತಾರೆ ಎಂದು ಸುದ್ದಿಗೋಷ್ಟಿಯಲ್ಲಿ ಪ್ರಕಟಿಸಿದ್ದರು. 

Sagara Marikambe : ಸಾಗರ ಮಾರಿಕಾಂಬೆ ಜಾತ್ರೆಗೆ ಇವತ್ತಿನಿಂದ ಧಾರ್ಮಿಕ ಪೂಜೆ ! ಪ್ರಕ್ರಿಯೆ, ಪದ್ದತಿ, ವಿಧಾನ ಏನು? ಪ್ರಸಿದ್ಧ ಉತ್ಸವದಲ್ಲಿ ಯಾವಾಗ ಏನೇನು ನಡೆಯಲಿದೆ? ವಿವರ ಇಲ್ಲಿದೆ

ಇದರ ಬೆನ್ನೆಲ್ಲೆ ಇದೀಗ ಕಾಂಗ್ರೆಸ್​ ಕಾರ್ಯಕರ್ತರು ಕಾಂತಾರ ಸಿನಿಮಾದ ಲಾಸ್ಟ್​ ಸೀನ್​ ಮಾದರಿಯಲ್ಲಿ ಇಬ್ಬರು ನಾಯಕರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಗಾಡರಗದ್ದೆ ನರಸಿಂಹ ಸ್ವಾಮಿಯ ದೇವಾಲಯದ ಜಾತ್ರೆ 

ಹೌದು, ಇವತ್ತು ತೀರ್ಥಹಳ್ಳಿಯ ನಾಲೂರು ಸಮೀಪ ಬರುವ ಗಾಡರಗದ್ದೆಯ ಹುರುಳಿ ಎಂಬ ಗ್ರಾಮದ ನರಸಿಂಹ ಸ್ವಾಮಿ ದೇವಸ್ಥಾನದ ಜಾತ್ರೆ ನಡೆಯುತ್ತಿತ್ತು. ಸುಮಾರು 2-3 ಸಾವಿರ ಜನರು ಜಾತ್ರೆಯಲ್ಲಿ ಸೇರಿದ್ದರು. ಈ ಜಾತ್ರೆ 10 ನಿಮಿಷದ ಅಂತರದಲ್ಲಿ ಆರ್​ಎಂ ಮಂಜುನಾಥ್ ಗೌಡರು ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ರವರು ಭೇಟಿಕೊಟ್ಟಿದ್ದರು. ಬೇರೆ ಬೇರೆಯಾಗಿ ಬಂದಿದ್ದ ಮುಖಂಡರು ಪರಸ್ಪರ ಮುಖಾಮುಖಿಯಾಗುವ ಸಂದರ್ಭ ಸಹಜವಾಗಿಯೇ ಎದುರಾಗಿತ್ತು. 

ಈ ವೇಳೇ ದೇವರ ದರ್ಶನ ಪಡೆದ ಬಳಿಕ, ಕಾರ್ಯಕರ್ತರು ಹಾಗೂ ಸ್ಥಳೀಯರು ಇಬ್ಬರು ನಾಯಕರ ಮುನಿಸು ನಿವಾರಿಸಿದ್ದರಷ್ಟೆ ಅಲ್ಲದೆ ಯಾರಿಗೆ ಟಿಕೆಟ್ ಸಿಕ್ಕರೂ ನಾವು ಕೆಲಸ ಮಾಡುತ್ತೇವೆ,  ಭಿನ್ನಮತ ಬೇಡ, ಒಗ್ಗಟ್ಟಿನಿಂದ ಸಾಗೋಣ ಎಂದು ನಾಯಕರಲ್ಲಿ ವಿನಂತಿ ಮಾಡಿದ್ರು. ಅಲ್ಲದೆ ನಾಯಕರಿಬ್ಬರ ಕೈಗಳನ್ನು ಹಿಡಿದು ತಮ್ಮ ಎದೆ ಮೇಲಿಟ್ಟುಕೊಂಡು  ಮುಖಂಡರೊಬ್ಬರು ಒಗ್ಗಟ್ಟಿನಿಂದ ಸಾಗೋಣ ಎಂಬ ಸಂದೇಶವನ್ನು ನೀಡಿದರು.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article