ಹೊಟ್ಟೆ ತುಂಬಾ ಕುಡಿದು ಬ್ಯಾರ್​ ಸಿಬ್ಬಂದಿಯ ತಲೆವೊಡೆದ ಗಿರಾಕಿಗಳು! ಹೊಸನಗರ ತಾಲ್ಲೂಕಿನಲ್ಲಿ ನಡೆದ ಘಟನೆ ವಿವರ ಇಲ್ಲಿದೆ

Malenadu Today

MALENADUTODAY.COM | SHIVAMOGGA NEWS |HOSANAGARA TALUK 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್ (ripponpet police station) ವ್ಯಾಪ್ತಿಯಲ್ಲಿ ಬರುವ ಬಾರ್​ವೊಂದರಲ್ಲಿ ಬಿಲ್ ವಿಚಾರಕ್ಕಾಗಿ ಹೊಡೆದಾಟ ನಡೆದಿದೆ. ಕುಡಿದು ಬಿಲ್​ ನೀಡುವ ವೇಳೆ ಕ್ಯಾಶಿಯರ್​ ಜೊತೆಗೆ ಜಗಳವಾಡಿದ ಇಬ್ಬರು ಹೊಡೆದಾಟ ನಡೆಸಿದ್ದಾರೆ. ರಿಪ್ಪನ್​ಪೇಟೆ ಸಮೀಪದ  ಕೋಡೂರಿನ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಹೊಡೆದಾಟ ನಡೆದಿದ್ದು, ಬಾರ್​ನಲ್ಲಿ ವಸ್ತುಗಳನ್ನು ದ್ವಂಸಗೊಳಿಸಿರುವ ಕಿಡಿಗೇಡಿಗಳು, ರಕ್ತ ಬರುವಂತೆ ಹೊಡೆದಾಡಿದ್ದಾರೆ. 

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

ಕಳೆದ ಗುರುವಾರ ನಡೆದ ಘಟನೆ ಸಂಬಂದ ರಿಪ್ಪನ್​ಪೇಟೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.  ಎಣ್ಣೆ ಕುಡಿದು ಟೈಟಾಗಿ, ಕ್ಯಾಶಿಯರ್​ ಜೊತೆಗೆ ಜಗಳ ತೆಗೆದ ಕ್ರಾಂತಿ ಹಾಗೂ ಸುದರ್ಶನ ಎಂಬವವರು, ದೇವರಾಜ್ ಹಾಗೂ ಷಣ್ಮುಖ ಎಂಬಿಬ್ಬರಿಗೆ ಗಂಭೀರ ಗಾಯಗಳನ್ನ ಮಾಡಿದ್ದಾರೆ. ಗಾಯಾಳುಗಳಿಗೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ. 

ಇನ್ನೂ ಘಟನೆಯಲ್ಲಿ ಬಾರ್​ ತುಂಬಾ ರಕ್ತ ಚೆಲ್ಲಾಡಿದ್ದು, ಹಲವು ವಸ್ತುಗಳು ಧ್ವಂಸಗೊಂಡಿವೆ. ಇದರಿಂದ ಸಾಕಷ್ಟು ನಷ್ಟವಾಗಿದೆ ಎಂದು ಬಾರ್ ಮಾಲೀಕರು ಪೊಲೀಸರ ಬಳಿಯಲ್ಲಿ ತಿಳಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಎಫ್​ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ. 

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article