traffic fine ಬಾಕಿ ಕಟ್ಟಲು ಸರ್ಕಾರದಿಂದ 50 ಪರ್ಸೆಂಟ್ ಡಿಸ್ಕೌಂಟ್! ಯಾರಿಗೆ ಅವಕಾಶ!? ಎಲ್ಲಿವರೆಗೂ ಅವಕಾಶ

Malenadu Today

MALENADUTODAY. COM | SHIVAMOGGA NEWS | 3 FEBRUARY 2023

BENGALURU : ಫೈನ್ ಹಾಕಿ ಮನೆಗೆ ಫೋಟೋ ಸಮೇತ ಕಳಿಸುವ ಇ-ಚಲನ್​ ವಿಷಯದಲ್ಲಿ ಸರ್ಕಾರ ಗುಡ್​ ನ್ಯೂಸ್​ವೊಂದನ್ನ ಕೊಟ್ಟಿದೆ. ಫೈನ್ ( traffic fine )​  ಬಾಕಿ ಇದೆಯಲ್ಲಪ್ಪ ಕಟ್ಟೋದು ಹೇಗೆ ಅಂತಾ  ತಲೆಕೆಡಿಸಿಕೊಳ್ಳುತ್ತಿದ್ದವರಿಗೆ ದಂಡದ ಶೇಕಡಾ 50 ರಷ್ಟು  discount​ ನೀಡಿದೆ. ಹೌದು,  ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್‌ (e challan) ಮೂಲಕ ವಿಧಿಸಿದ ದಂಡ ಪಾವತಿಗೆ ರಿಯಾಯಿತಿ ನೀಡಲಾಗಿದೆ ಫೆ.11ರೊಳಗೆ ಇ -ಚಲನ್​ ನ ದಂಡನವನ್ನ ಭರ್ತಿ ಮಾಡಿದರೆ, ಶೇಕಡಾ 50 ರಷ್ಟು ರಿಯಾಯಿತಿ ಸಿಗಲಿದೆಯಂತೆ.  ಈ ಸಂಬಂಧ  ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ಕಳೆದ ಜ.27ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯವನ್ನು ಇದೀಗ ಜಾರಿಗೆ ತರಲಾಗಿದೆ. 

Power cut : ಸಾರ್ವಜನಿಕರ ಗಮನಕ್ಕೆ: ನಾಳೆ ಶಿವಮೊಗ್ಗದ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್​ ಇರೋದಿಲ್ಲ! ವಿವರ ಇಲ್ಲಿದೆ

ರಾಜ್ಯಾದ್ಯಾಂತ ಫೆಬ್ರವರಿ 11ರೊಳಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ “ಒಂದು ಬಾರಿಯ ಕ್ರಮವಾಗಿ’ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಫೆಬ್ರವರಿ 2 ರಂದು ಆದೇಶ ಹೊರಡಿಸಿದೆ.

ಇದನ್ನ ಓದಿಒ: *ಇನ್​ಸ್ಪೆಕ್ಟರ್​ಗಳ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಪಿಎಸ್‌ಐ ಗಳ ವರ್ಗಾವಣೆ*

ರಾಜ್ಯದ ಎಲ್ಲಾ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಟ್ರಾಫಿಕ್​ ಉಲ್ಲಂಘನೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಾವಿರ ಕೋಟಿಗೂ ಹೆಚ್ಚು ದಂಡ ಬರಬೇಕಿದೆ, ಇದರಲ್ಲಿ ಶೇ 80 ರಷ್ಟು ಪ್ರಕರಣಗಳು ಬೆಂಗಳೂರು ಕಮಿಷನರೇಟ್‌ನಲ್ಲಿಯೇ ಬಾಕಿ ಇವೆ. ಈ ದಂಡ ವಸೂಲಿಗಾಗಿ  ಶೇ.50ರಷ್ಟು ರಿಯಾಯಿತಿ ನೀಡುವ ಸಂಬಂಧ ಸಾರಿಗೆ ಆಯುಕ್ತರು ಜನವರಿ 30 ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು ಅಧಿಕೃತ ಆದೇಶ ಹೊರಬಿದ್ದಿದೆ. 

Malenadu Today

*Shivamogga news : ಕಾಲೇಜು ಕ್ಯಾಂಪಸ್‌ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article