Sakrebail elephant camp : ಬೆಂಗಳೂರು ಗಣೇಶ, ಮಣಿಕಂಠನನ್ನ ಬಿಟ್ಟು ಶಿವ,ರವಿಯನ್ನು ಕರೆದುಕೊಂಡು ಮಧ್ಯಪ್ರದೇಶಕ್ಕೆ ಹೊರಟ ಟೀಂ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ನಡೆದಿದ್ದೇನು?

Sakrebail elephant camp : ಶಿವಮೊಗ್ಗದ ಪ್ರಖ್ಯಾತ ಸಕ್ರೆಬೈಲ್​ ಆನೆ ಬಿಡಾರದಿಂದ ನಾಲ್ಕು ಆನೆಗಳು ಮಧ್ಯಪ್ರದೇಶಕ್ಕೆ ತೆರಳಬೇಕಾಗಿತ್ತು. ಈ ನಡುವೆ ಎರಡು ಆನೆಗಳ ವರ್ಗಾವಣೆಯನ್ನು ಕೈಬಿಟ್ಟು ಉಳಿದ ಎರಡು ಆನೆಗಳನ್ನು ಇವತ್ತು ಆನೆಬಿಡಾರದಿಂದ ಅರಣ್ಯ ಇಲಾಖೆ ಶಿಫ್ಟ್ ಮಾಡುತ್ತಿದೆ. ಸಕ್ರೆಬೈಲ್ ಎಲಿಫೆಂಟ್ ಕ್ಯಾಂಪ್​ನ ರವಿ ಮತ್ತು ಶಿವ ಆನೆಗಳನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಈ ಆನೆಗಳನ್ನು ಮಧ್ಯಪ್ರದೇಶದ Kanha Tiger Reserveಗೆ ಶಿಫ್ಟ್ ಮಾಡಲಾಗುತ್ತಿದೆ.

ಒಟ್ಟು 14 ಆನೆಗಳನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡುವ ಪ್ರಸ್ತಾಪಕ್ಕೆ ಈ ಹಿಂದೆಯೇ ಒಪ್ಪಿಗೆ ನೀಡಲಾಗಿತ್ತು. ಅದರಂತೆ ನಡೆದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಇವತ್ತು ಸುಮಾರು 20 ಜನರ ತಂಡ ಆನೆಗಳನ್ನು 2 ಲಾರಿಗಳಲ್ಲಿ ಆನೆಗಳನ್ನು ಶಿಫ್ಟ್ ಮಾಡುತ್ತಿದೆ. ಈ ಬಗ್ಗೆ  malenadutoday.com ಈ ಮೊದಲು ಸುದ್ದಿ ಮಾಡಿತ್ತು ಅದರ ವಿವರ ಇಲ್ಲಿದೆ ಮೊದಲು 12 ನಂತರ 4 ಆನೆಗಳು ಉತ್ತರ ಭಾರತಕ್ಕೆ ಶಿಫ್ಟ್​, ಈಗ 14 ಆನೆ ಮಧ್ಯಪ್ರದೇಶಕ್ಕೆ ರವಾನಿಸಲು ಸಿದ್ಧತೆ! ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

Sakrebail elephant camp : ಬಿಡಾರದಲ್ಲಿ ಮೂಡಿದ ಆತಂಕ 

ಕಾಡಾನೆಗಳನ್ನು ತಂದು ಪಳಗಿಸಿ, ಅವುಗಳನ್ನ ಜೋಪಾನ ಮಾಡುತ್ತಿರುವ ಸಕ್ರೆಬೈಲ್ ಆನೆ ಬಿಡಾರದಲ್ಲಿ ಈ ಆನೆಗಳ ವರ್ಗಾವಣೆ ಒಂದು ರೀತಿಯ ಆತಂಕ ಮೂಡಿಸಿದೆ. ಈ ಹಿಂದೇ ಉತ್ತರ ಪ್ರದೇಶಕ್ಕೆ ಆನೆಗಳು ರವಾನೆಯಾಗುತ್ತಿದ್ದಾಗ ಇದ್ದಂತಹ ಆತಂಕವೇ ಇದೀಗ ಮತ್ತೊಮ್ಮೆ ಮಡುಗಟ್ಟಿದೆ. ಉತ್ತರ ಭಾರತದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಿವಿಧ ಕೆಲಸಗಳಿಗೆ ಸಾಕಾನೆಗಳು ಬಳಕೆಯಾಗಲಿವೆ. ಬೀಟಿಂಗ್​ಗಾಗಿ, ಹುಲಿ ಸೆರೆ ಕಾರ್ಯಾಚರಣೆ ಸೇರಿದಂತೆ ವಿವಿಧ ಉಪಯೋಗಗಳು ಈ ಆನೆಗಳಿಂದ ಅಲ್ಲಿಂದ ಸಿಬ್ಬಂದಿ ಪಡೆದುಕೊಳ್ಳಲಿದ್ದಾರೆ. ಆದರೆ ಶಿಬಿರದಲ್ಲಿನ ಮುಖ್ಯವಾದ ಆನೆಗಳೇ ಶಿಬಿರದಿಂದ ಹೊರಟು ಹೋದರೆ ಅದರ ಪರಿಣಾಮ ಶಿಬಿರದ ಮೇಲಾಗುವ ಸಾದ್ಯತೆ ಇದೆ ಎನ್ನುತ್ತಿದ್ದಾರೆ ವನ್ಯಜೀವಿ ಪ್ರೇಮಿಗಳು.

ನಾಲ್ಕು ಆನೆಗಳ ಪೈಕಿ ಎರಡಕ್ಕೆ ಕೊಕ್  

2 ಲಾರಿಗಳಲ್ಲಿ 25 ವರ್ಷದ ರವಿ ಹಾಗೂ ಆರು ವರ್ಷದ ಶಿವ ಆನೆಯನ್ನು ಮಧ್ಯಪ್ರದೇಶಕ್ಕೆ ಸಾಗಿಸಲಾಗುತ್ತಿದೆ. ಇನ್ನೂ 35 ವರ್ಷದ ಮಣಿಕಂಠ ಮತ್ತು ಗಲಾಟೆ ಆನೆ ಎಂದೇ ಕುಖ್ಯಾತಿಗಳಿಸಿರುವ ಬೆಂಗಳೂರು ಗಣೇಶ (36)ನ್ನ (ಗಣೇಶನ ಬಗೆಗಿನ ವರದಿ ಇಲ್ಲಿದೆ) ವರ್ಗಾವಣೆಯಿಂದ ಕೈ ಬಿಡಲಾಗಿದೆ. ಶಿವ ಆನೆಯು ಬಿಡಾರದಲ್ಲಿ ಎಲ್ಲರ ಗಮನಸೆಳೆಯುತ್ತಿದ್ದ ಆನೆಯಾಗಿದೆ. ಈ ಆನೆಯನ್ನೆ ಮಧ್ಯಪ್ರದೇಶಕ್ಕೆ ರವಾನೆ ಮಾಡಲಾಗುತ್ತಿದೆ. ಇದು ಪ್ರವಾಸಿಗರಲ್ಲಿಯು ಬೇಸರ ಮೂಡಿಸಿದೆ. 

Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

Leave a Comment