ಈ ಸಲ ಅಧಿಕಾರ ಹಿಡಿಯಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಒಂದಲ್ಲ ಒಂದು ಆಶ್ವಾಸನೆಗಳನ್ನು ಜನರ ಮುಂದಿಡುತ್ತಿದೆ. ಇದಕ್ಕೆ ಪೂರಕವಾದ ಪ್ರಣಾಳಿಕೆಯನ್ನೆ ಬಿಡುಗಡೆ ಮಾಡುತ್ತಿದೆ. ಈ ಮಧ್ಯೆ ಚುನಾವಣಾ ಪ್ರಣಾಳಿಕಯೆಲ್ಲಿ ನೀಡಿರುವ ಭರವಸೆಗಳ ಈಡೇರಿಸುವ ಬಗ್ಗೆ ಪ್ರತಿ ಮನೆಗೂ ‘ಗ್ಯಾರಂಟಿ ಕಾರ್ಡ್’ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ತಿಳಿಸಿದ್ದಾರೆ.
*ಹೊಲಕ್ಕೆ ಬಿದ್ದ ಬೆಂಕಿ! 10 ಲಕ್ಷ ರೂಪಾಯಿ ನಷ್ಟ!*
ನಿನ್ನೆ ಈ ಸಂಬಂಧ ಮಾತನಾಡಿದ ಅವರು ವರಿಷ್ಠರು ಈಗಾಗಲೇ ಘೋಷಣೆ ಮಾಡಿರುವಂತೆ ಎಲ್ಲಾ ಬಡ ಮತ್ತು ಮಧ್ಯಮ ವರ್ಗದವರ ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು.ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿಯವರ ಘೋಷಣೆ ಯ೦ತೆ ಮನೆ ಜವಾಬ್ದಾರಿ ನಿರ್ವಹಿಸುವ ಪ್ರತಿ ಕುಟುಂಬ ಯಜಮಾನಿಗೆ ತಿಂಗಳಿಗೆ 2 ಸಾವಿರ ರು. ನೀಡಲಾಗುವುದು ಎಂದರು
ಅಲ್ಲದೆ ಈ ಸಂಬಂಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನರ ಮನೆ ಮನೆಗೆ ಹೋಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಹಿ ಇರುವ ಗ್ಯಾರಂಟಿ ಕಾರ್ಡ್ ನೀಡಲಾಗುವುದು ಎಂದರು
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com