ಶಿವಮೊಗ್ಗದ ವಿನೋಬನಗರ ಪೊಲೀಸರು (vinoba nagara police station shivamogga) ಕೇವಲ 24 ಗಂಟೆಯಲ್ಲಿ ಕಳ್ಳತನ ಪ್ರಕರಣವೊಂದರ ಆರೋಪಿಯನ್ನು ಹಿಡಿದಿದ್ದಾರೆ. ಕಳೆದ 27 ರಂದು ನಡೆದಿದ್ದ ಘಟನೆಯ ಸಂಬಂಧ ಕೇಸ್ ದಾಖಲಿಸಿಕೊಂಡು 28 ನೇ ತಾರೀಖು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಿನಾಂಕಃ 27-01-2023 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಕೊಳ ಗ್ರಾಮದ ವಾಸಿ ಮಾಣಿಕ್ಯಂ ರವರು ತಮ್ಮ ಮನೆಗೆ ಬೀಗವನ್ನು ಹಾಕಿ, ಬೀಗದ ಕೀ ಯನ್ನು ಮನೆಯ ಆವರಣದಲ್ಲಿನ ನೀರಿನ ಮೋಟಾರ್ ಕೆಳಗೆ ಇಟ್ಟು ಹೋಗಿದ್ದರು.
BREAKING NEWS : ಶಿವಮೊಗ್ಗ ಜಿಲ್ಲಾ ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ವರ್ಗಾವಣೆ!
ಆದರೆ ಈ ಬೀಗದ ಕೈ ಇರುವಿಕೆಯನ್ನು ಗಮನಿಸಿದ್ದ ಕಳ್ಳರು, ಬೀಗದ ಕೀಯನ್ನು ತೆಗೆದುಕೊಂಡು, ಮನೆಯ ಬಾಗಿಲನ್ನು ತೆರೆದು ಒಳಗೆ ಹೋಗಿ, ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಚೈನು ಮತ್ತು ನಗದು ಹಣವನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಕಲಂ 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. ಅಲ್ಲದೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಆರೋಪಿತರ ಪತ್ತೆಗೆ ಐಒ ರವಿ ಎನ್ ಎಸ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡ ಕೇಸ್ ದಾಖಲಾದ 24 ಗಂಟೆಯ ಒಳಗಾಗಿ ಆರೋಪಿತರನ್ನು ಬಂಧಿಸಿದೆ
ಬಂಧಿತರು ಯಾರು?
- 1] ರಾಹುಲ್ ಎ.ಆರ್ ಬಿನ್ ಅಣ್ಣಪ್ಪ ಕೆ.ಆರ್, 26 ವರ್ಷ, ಶ್ರೀರಾಮ ಬಡಾವಣೆ ಆಂಜನೇಯ ದೇವಸ್ಥಾನದ ಹತ್ತಿರ ದಾವಣೆಗೆರೆ ಟೌನ್
- 2] ಗಣೇಶ ಬಿನ್ ಹಾಲೇಶಪ್ಪ, 28 ವರ್ಷ, ಬೊಮ್ಮನಕಟ್ಟೆ ಬಿ ಬ್ಲಾಕ್ ಕ್ಯಾಂಪ್ ಶಿವಮೊಗ್ಗ ಟೌನ್
ಇನ್ನೂ ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 1,09,250/- ರೂ ಗಳ 30 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 100 ಗ್ರಾಂ ತೂಕದ ಬೆಳ್ಳಿಯ ಚೈನ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com