shikaripura ಪೊಲೀಸರಿಂದ ಹಲ್ಲೆ ಆರೋಪ, ವಿಷ ಕುಡಿದ ಯುವಕ! ಜಾತಿ ಹೆಸರಲ್ಲಿ ನಡೆಯುತ್ತಿದೆಯಾ ನಿಂದನೆ? ಇಷ್ಟಕ್ಕೂ ಶಿಕಾರಿಪುರದಲ್ಲಿ ನಡೆದಿದ್ದು ಏನು?

Malenadu Today

ಶಾಲೆಯೊಂದರ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಶಿಕಾರಿಪುರದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನ ಸದ್ಯ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೂ ತೆಗೆದುಕೊಳ್ಳುತ್ತಿಲ್ಲ ಎಂದು ಸಂತ್ರಸ್ತ ಯುವಕನ ಕುಟುಂಬ ಆರೋಪಿಸಿದೆ. 

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಅರಶಿಣಗೇರಿಯಲ್ಲಿ ಎರಡು ದಿನದ ಹಿಂದೆ ಶಾಲೆಯೊಂದರ ವಾರ್ಷಿಕೋತ್ಸವ ನಡೆಯುತ್ತಿತ್ತು. ಈ ಸಮಾರಂಭವನ್ನು ನೋಡಲು ಸ್ಥಳೀಯ  ನಿವಾಸಿ ಸಚಿನ್ ಹಾಗೂ ಸ್ನೇಹಿತರು ತೆರಳಿದ್ದರು. ಈ ವೇಳೇ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪ. ಇನ್ನೂ ಇದೇ ವೇಳೇ ಗ್ರಾಮಸ್ಥರು ಹಲ್ಲೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಇದರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ನಡುವೆ ಸಚಿನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಊರಿನವರ ಮುಂದೆ ಹೊಡೆದಿದ್ದರಿಂದ ಅವಮಾನ ಆಗಿದೆ ಎಂದು ವಿಷ ಸೇವಿಸಿದ್ದಾಗಿ ಯುವಕ ಹೇಳಿದ್ದಾನೆ. 

TODAY NEWS : ಜನವರಿ 30 ಕ್ಕೆ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ ಇಲ್ಲಿದೆ! ಇವತ್ತಿನ ಇನ್ನಷ್ಟು ಸುದ್ದಿಗಳು ಇಲ್ಲಿವೆ

*#SAVEVISL : ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಫ್ಯಾಕ್ಟರಿ ಉಳಿಸಲು ಧರಣಿ ಕುಳಿತ ವಿನಯ್ ಗುರೂಜಿ!| ಭದ್ರಾವತಿಯಲ್ಲಿ ಭುಗಿಲೆದ್ದ ಹೋರಾಟ*

ಇನ್ನೂ ಯುವಕನ ಕುಟುಂಬಸ್ಥರು ಇದೇ ರೀತಿ ಈ ಹಿಂದೆಯು ಹಲ್ಲೆ ನಡೆದಿದ್ದು, ತಮ್ಮ ಮೇಲೆ ಟಾರ್ಗೆಟ್ ಮಾಡಿ ಹಲ್ಲೆ ನಡೆಸಲಾಗುತ್ತಿದೆ. ಸದ್ಯ ಶಿಕಾರಿಪುರ ಪೊಲೀಸರು ಕಂಪ್ಲೇಂಟ್ ಕೂಡ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಕೀಳುಜಾತಿ ಎಂದು ನಿಂದಿಸಿ, ತಮ್ಮನ್ನ ಕೀಳಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ. 

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article