Shivamogga news : ವಿದ್ಯಾರ್ಥಿ ಸಾವಿಗೆ ನಿಜವಾಗಲೂ ಕಾರಣವಾಗಿದ್ದು ಏನು? ಆತನಿಗೆ ಹೊಡೆದಿದ್ದು ಯಾರು?

Shivamogga News :  ಶಿವಮೊಗ್ಗ ನಗರದಲ್ಲಿ ನಿನ್ನೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಆತ್ಮಹತ್ಯೆಗೆ ಕಾರಣವೇನು ಎಂಬುದು ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. PACE  ಕಾಲೇಜಿನ ವಿದ್ಯಾರ್ಥಿ ವಿಶ್ವಾಸ್​ರ ಆತ್ಮಹತ್ಯೆಗೆ ಕಾರಣವೇನು? ಕಾಲೇಜಿನಲ್ಲಿ ನಡೆದ ಘಟನೆಯೇ? ಅಥವಾ ಕಾಲೇಜಿನಲ್ಲಾದ ಅವಮಾನವೇ? ಎಂಬ ಪ್ರಶ್ನೆ ಕಾಡುತ್ತಿದೆ.

ಪ್ರಕರಣದಲ್ಲಿ ವಿದ್ಯಾರ್ಥಿಯ ತಂದೆ ತನ್ನ ಮಗನಿಗೆ ಕಾಲೇಜಿನಲ್ಲಿ ಬ್ಯಾಗ್​ನೆಲ್ಲಾ ಸರ್ಚ್​ ಮಾಡಿದ್ದಾರೆ. ಆತನಿಗೆ ಹೊಡೆದಿದ್ದಾರೆ. ಅದರಿಂದಲೇ ಆತ ನೊಂದುಕೊಂಡಿದ್ದ ಎಂಬುದರ ಬಗ್ಗೆ ನನಗೆ ವಿಚಾರ ತಿಳಿದು ಬಂದಿದೆ. ಅದೇ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಮಾಧ್ಯಮಗಳ ಬಳಿಯಲ್ಲಿ ಮಾತನಾಡಿದ ಅವರು. ಘಟನೆಗೂ ಮೊದಲು ಕಾಲೇಜಿನಲ್ಲಿ ವಿದ್ಯಾರ್ಥಿಯ ಮೊಬೈಲ್​ ತಪಾಸಣೆ ಮಾಡಿದ್ದರ ಸಂದರ್ಭದಲ್ಲಿಯೇ ಏನೋ ನಡೆದಿದೆ ಎಂದಿದ್ದಾರೆ. ಇನ್ನೂ ವಿದ್ಯಾರ್ಥಿಯ ಸ್ನೇಹಿತರು ಸಹ ಆತ ಕಾಲೇಜಿನಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಮನನೊಂದಿದ್ದ ಎಂಬುದಾಗಿ  ಮಾತನಾಡುತ್ತಿದ್ಧಾರೆ. 

ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ:  ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್

ಸಹಪಾಠಿಗಳ ಎದುರು ವಿದ್ಯಾರ್ಥಿಯನ್ನು ಅವಮಾನ ಮಾಡಲಾಯ್ತಾ? ಆ ಕಾಲೇಜಿನಲ್ಲಿ ನಡೆದ ಘಟನೆಯ ಹಿನ್ನೆಲೆ ಮತ್ತು ಉದ್ದೇಶವೇನಿತ್ತು? ಮೊಬೈಲ್ಗೆ​ ಕಾಲೇಜಿನ ಆವರಣದಲ್ಲಿ ನಿರ್ಬಂಧವಿರುತ್ತದೆ! ಆದರೆ ಅದರ ಪತ್ತೆಗಾಗಿ ಹೀನಾಯವಾಗಿ ನಡೆದುಕೊಳ್ಳಲಾಗಿತ್ತಾ? ಸದ್ಯ ಪೋಷಕರು ಹಾಗೂ ಸಂಬಂಧಿಕರ ಪ್ರಕಾರ, ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅಂಶವೇ ಶುದ್ಧಸುಳ್ಳು. ಆತ ಟ್ಯಾಲೆಂಟೆಡ್ ವಿದ್ಯಾರ್ಥಿ ಆಗಿದ್ದ. ಆತನಿಗೆ ಪರೀಕ್ಷೆ ಸಮಸ್ಯೆಯೇ ಆಗಿರಲಿಲ್ಲ. ಕಾಲೇಜಿನಲ್ಲಿ ನಡೆದಿರುವ ಘಟನೆಯೇ ಆತನ ಸಾವಿಗೆ ಕಾರಣ ಎನ್ನಲಾಗುತ್ತಿದೆ. 

#justiceforvishwas : ವಿಶ್ವಾಸ್​ ಸಾವಿನ ಬಗ್ಗೆ ತಂದೆ ಹೇಳಿದ್ದೇನು? ಆರೋಪವೇನು?

ಜಸ್ಟೀಸ್​ ಫಾರ್​ ವಿಶ್ವಾಸ್​ 

ಇನ್ನೂ ಸಾಮಾಜಿಕ ಜಾಲತಾಣದಲ್ಲಿ #justice for Vishwas ಎಂಬ ಹ್ಯಾಶ್​ಟ್ಯಾಗ್​ನಲ್ಲಿ ವಿಶ್ವಾಸ್​ನ ಪರವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮಕ್ಕಳ ಖಾಸಗಿ ಇನ್​ಸ್ಟಾಗ್ರಾಮ್​ನ ಪಾಸ್​ವರ್ಡ್​​ಗಳನ್ನು ಕಾಲೇಜಿನಲ್ಲಿ ಬಳಸಿ ನೋಡುತ್ತಾರೆ, ವೈಯಕ್ತಿಕ ಖಾಸಗಿ ತನಕ್ಕೆ ಬೆಲೆ ಇಲ್ಲದಂತಾಗಿದೆ. ವಿಶ್ವಾಸ್​ ವಿಚಾರದಲ್ಲಿ ಕಥೆಯೊಂದನ್ನ ಕಟ್ಟಿ ಹಣೆಯಲಾಯ್ತು. ರಾಜಕೀಯದ ಬೆಂಬಲ ಇರುವ ಕಾಲೇಜಿನಲ್ಲಿ ಬಹಳಷ್ಟು ನಡೆಯುತ್ತಿದೆ. ಅದೇ ಕಾರಣಕ್ಕೆ ಆತ ಜೀವಕಳೆದುಕೊಂಡ. ಆತನ ಸಾವಿಗೆ ನ್ಯಾಯ ಸಿಗುತ್ತದಾ ಎಂದು ಪ್ರಶ್ನಿಸಲಾಗಿದೆ. ಪ್ರತಿಷ್ಟಿತ ಹೆಸರು ಇಟ್ಟುಕೊಂಡು ನಡೆಸಲಾಗುವ  ಶಿಕ್ಷಣ ಸಂಸ್ಥೆಗಳಲ್ಲಿ ರೂಲ್ಸ್​ಗಳದ್ದೆ ದರ್ಬಾರ್​ ನಡೆಯುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಸಿಗುವ ಮಾನವೀಯತೆಯ ಜರೂರು ಅಂತಹ ಶಿಕ್ಷಣ ಸಂಸ್ಥೆಗಳಿಗೆ ಅವಶ್ಯಕವಾಗಿದೆ. ಇನ್ನೂ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯ ಸಾವಿಗೆ ಕಾರಣವನ್ನು ಶಿವಮೊಗ್ಗ ಪೊಲೀಸರು ನಿಜವಾಗಲೂ ಹುಡುಕುತ್ತಾರಾ?ಇನ್ನಷ್ಟೆ ಗೊತ್ತಾಗಬೇಕಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment