ರಿಪ್ಪನ್ ಪೇಟೆಯಲ್ಲಿ ವಾಹನದಿಂದ ಬಿದ್ದು ಸಾವು
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಣಬಂಧೂರು ಶಾಲೆ ಬಳಿಯಲ್ಲಿ ಟಾಟಾ ಏಸ್ ವಾಹನದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ಧಾರೆ. ಇಲ್ಲಿನ ನಿವಾಸಿ ರಾಘವೇಂದ್ರ ಮೃತರು. ತೋಟಕ್ಕೆ ದರಗು ತೆಗೆದುಕೊಂಡು ಬರುತ್ತಿದ್ದಾಗ ಏಸ್ನಲ್ಲಿ ಹಿಂದೆ ಕುಳಿತಿದ್ದ ರಾಘವೇಂದ್ರರವರು ಕೆಳಕ್ಕೆ ಬಿದ್ದಿದ್ಧಾರೆ. ವಾಹನ ಚಲಿಸುತ್ತಿದ್ಧಾಗಲೇ ಬಿದ್ದಿದ್ದರಿಂದ ಜಾಸ್ತಿ ಪೆಟ್ಟಾಗಿದೆ. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ಧಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್ ಸರ್ಕಿಟ್-ಬೆಂಕಿ/ ಶರತ್ ಸಾವು, ಮಗು ಸ್ಥಿತಿ ಗಂಭೀರ
ನಾಪತ್ತೆಯಾದ ಸ್ವಾಮಿ ಹೋಗಿದ್ದೆಲ್ಲಿಗೆ?
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಎಂದು ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಕಂಪ್ಲೆಂಟ್ ಕೊಟ್ಟ ಬಳಿಕ ಮರಳಿ ಮನೆಗೆ ವಾಪಸ್ ಆಗಿದ್ದಾರೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗಿದ್ದ ವ್ಯಕ್ತಿ ಪಂಪೆಯಲ್ಲಿಯೇ ವಾಪಸ್ ಆಗಿದ್ದರು. ಆದರೆ, ಅವರು ಮನೆಗೆ ಬಂದಿರಲಿಲ್ಲ. ಹಾಗಾಗಿ ಕುಟುಂಬಸ್ಥರು ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದರು. ಈ ಮಧ್ಯೆ ದೂರು ನೀಡಿದ ಮೂರು ದಿನ ಬಳಿಕ ವ್ಯಕ್ತಿಯು ವಾಪಸ್ ಆಗಿದ್ದಾರೆ.
ಶಿವಮೊಗ್ಗದಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡ/ಮಗನನ್ನ ಉಳಿಸಿ, ಪ್ರಾಣ ಬಿಟ್ಟ ತಂದೆ/ ಜೀವ ತೆಗೆದ ಹೊಗೆ/ ವಿಡಿಯೋ ವರದಿ
ಶಿವಮೊಗ್ಗದಲ್ಲಿ ಆ ಕಾಲೇಜಿನಲ್ಲಿ ನಡೀತಾ ಹೊಡೆದಾಟ?
ಇನ್ನೊಂದೆಡೆ ಶಿವಮೊಗ್ಗ ನಗರದ ಕಾಲೇಜ್ವೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳ ನಡುವಿನ ಹೊಡೆದಾಟಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದಾಗ್ಯು ಶಿವಮೊಗ್ಗ ಪೊಲೀಸರು ಈ ಸಂಬಂದ ಪರಿಶೀಲನೆ ನಡೆಸ್ತಿದ್ದಾರೆ.
ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು
ಗುಡ್ಡೇಕೇರಿಯಲ್ಲಿ ಹೊಂಡಕ್ಕೆ ಬಿದ್ದ ಕಾರು
ಇತ್ತ ಶಿವಮೊಗ್ಗ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಗುಡ್ಡೇಕೇರಿ ಬಳಿಯಲ್ಲಿ ಓಮಿನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಇನ್ನೂ ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನು ಓದಿ : ಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ…ಗಿಲ್ಲಕ್ಕೋ/ ಶಿವಣ್ಣನ ಟಗರು ಡ್ಯಾನ್ಸ್ಗೆ , ಬಿಂದಾಸ್ ಆಗಿ ಕುಣಿದ ಲೇಡಿಸ್ ಫ್ಯಾನ್ಸ್