ಇವರು ಯಾವ ತಪ್ಪು ಮಾಡದಿದ್ದರೂ ಆರೋಪಿಗಳಾದರು. ಅಪರಾಧಿಗಳಾದವರು. ಕೆಳ ನ್ಯಾಯಾಲಯಗಳು ನೀಡಿದ ತೀರ್ಪನ್ನು ಪ್ರಶ್ನಿಸಿ ಜೈಲಿನಲ್ಲಿದ್ದುಕೊಂಡೇ ಸುಪ್ರಿಂ ಕೋರ್ಟ್ ಮೆಟ್ಟಲೇರಿದರು. ಕರ್ತವ್ಯದ ಅರ್ದ ಆಯಸ್ಸನ್ನು ವಿಚಾರಣೆ,,ಕೋರ್ಟ್, ಕಛೇರಿ ಅಲೆದಾಟದಲ್ಲೇ ಕಳೆದರು. ನಿವೃತ್ತಿಯಾದ ನಂತರವಾದ್ರು ಪೆನ್ಷನ್ ತೆಗೆದುಕೊಂಡು ನೆಮ್ಮದಿಯಿಂದಿರಬಹುದು ಅಂದುಕೊಂಡಿದ್ದ ಇವರಿಗೆ ಸರ್ಕಾರ ಪೆನ್ಶನ್ ಕೂಡ ಕಟ್ ಮಾಡಿತು. ಪೊಲೀಸ್ ಅಧಿಕಾರಿಗಳೆಲ್ಲಾ ಸೇಫ್ ಆಗಿ,ಕೇವಲ ಸಿಬ್ಬಂದಿಗಳು ಮಾತ್ರ ಬಲಿಪಶುಗಳಾದ ಈ ಪ್ರಕರಣದ ಪ್ಲಾಶ್ ಬ್ಲಾಕ್ ಸ್ಟೋರಿ ಒಮ್ಮೆ ಓದ್ಲೇ ಬೇಕು.

ಈ ಪೋಟೋದಲ್ಲಿ ದಾಖಲೆಗಳ ಪುಸ್ತಕಗಳನ್ನು ಹಿಡಿದುಕೊಂಡು ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಇವರೆಲ್ಲಾ 1988 ರಲ್ಲಿ ಶಿವಮೊಗ್ಗ ನಗರವನ್ನೇ ಬೆಚ್ಚಿಬೀಳಿಸಿದ್ದ ಇಬ್ಬರು ರೌಡಿಗಳ ಲಾಕಪ್ ಡೆತ್ ಕೇಸಿನಲ್ಲಿ ಕರ್ತವ್ಯ ಲೋಪದಡಿ ಅಪರಾಧಿಗಳಾಗಿದ್ದವರು. ಸೆರೆವಾಸ ಅನುಭವಿಸಿ,ಹೊರಬಂದವರು.
ಇದನ್ನ ಸಹ ಓದಿ :BREAKING NEWS / ಹೊಸ ವರ್ಷದ ಪಾರ್ಟಿ ಸಂದರ್ಭದಲ್ಲಿ ಗನ್ಫೈರ್/ ಓರ್ವ ಗಂಭೀರ/ ಗುಂಡು ಹಾರಿಸಿವನು ಸಹ ಸಾವು/ NEW YEAR ನ ಮೊದಲ ಕ್ರೈಂ
ಡ್ಯೂಟಿಯ ಬಹುಪಾಲು ಸಮಯವನ್ನು ಕೋರ್ಟ್ ಕಛೇರಿ ಎಂದು ಅಲೆದಾಡಿದ ಇವರಿಗೆ ಕೋರ್ಟ್ ಕಛೇರಿಗಿಂತಲೂ, ಪೊಲೀಸ್ ಇಲಾಖೆಯೊಳಗೆ ಹಿರಿಯ ಅಧಿಕಾರಿಗಳು ನೀಡಿದ ಕಿರುಕುಳ ಮಾನಸಿಕ ಹಿಂಸೆ ಇವರ ಬದುಕನ್ನೇ ಮೂರಬಟ್ಟೆಯನ್ನಾಗಿಸಿತು.ಲಾಕಪ್ ಡೆತ್ ಆದ ಸಂದರ್ಭದಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ಯಾರ್ಯಾರು ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರೋ ಅವರೆಲ್ಲಾ ಕೇಸ್ ನಲ್ಲಿ ಪಿಟ್ ಆಗಿ ಹೋಗಿದ್ದರು.
ರೌಡಿಗಳಿಗೆ ಹೊಡೆದವರಾರೋ..,ಬಡಿದವರಾರೋ ಗೊತ್ತಿಲ್ಲ..ಮಾಡದ ತಪ್ಪಿಗಾಗಿ ಶಿಕ್ಷೆ ಅನುಭವಿಸಿ ಬಂದಿದ್ದಾರೆ. 24 ವರ್ಷಗಳ ಸುಧೀರ್ಘ ತನಿಖೆ,ಕೋರ್ಟ್ ಅಂತಾ ಅಲೆಯುವ ಹೊತ್ತಿಗೆ ಇವರೆಲ್ಲಾ ನಿವೃತ್ತಿಯಾಗಿದ್ದರು. ನಿವೃತ್ತಿ ನಂತರ ಇವರೆಲ್ಲಾ ತಾತ್ಕಾಲಿಕ ವೇತನ ಪಡೆಯುತ್ತಿದ್ದರು. ಆದರೆ ಸರ್ಕಾರ ಇವರೆಲ್ಲರ ಪೆನ್ಶನ್ ವಜಾಗೊಳಿಸಿ ಆದೇಶ ನೀಡಿತ್ತು..
ಆಶಾಭಟ್ ಮಾತು ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್
80ರ ದಶಕದಲ್ಲಿ ಶಿವಮೊಗ್ಗದ ಕ್ರೈಂ ಗಳಿಗೆ ಮೆಗ್ಗಾನ್ ಆಸ್ಪತ್ರೆಯ ಬಯಲೇ ಅಡ್ಡವಾಗಿತ್ತು.
1987 ರಲ್ಲಿ ಶಿವಮೊಗ್ಗ ನಗರದಲ್ಲಿ ಹೆಣ್ಣು ಮಕ್ಕಳು ನಿರ್ಭೀತಿಯಿಂದ ರಸ್ತೆಗಳಲ್ಲಿ ಓಡಾಡುವ ಸ್ಥಿತಿಯಲ್ಲಿರಲಿಲ್ಲ. ಕೊಲೆ ಸುಲಿಗೆ,ದರೋಡೆ ಅತ್ಯಾಚಾರ ನಗರದಲ್ಲಿ ತಾಂಡವವಾಡುತ್ತಿತ್ತು. ಇದಕ್ಕೆ ಕಾರಣವಾಗಿದ್ದು ರಾಜಕುಮಾರ್, ನಲ್ಲಕುಮಾರ್, ಪುರುಷೋತ್ತಮ, ಪ್ರಕಾಶ್ ಮತ್ತು ಗುರುಮೂರ್ತಿ ಎಂಬವರ ಅಟ್ಟಹಾಸ.
ಇವರ ಉಪಟಳಕ್ಕೆ ಶಿವಮೊಗ್ಗ ನಗರವೇ ತಲ್ಲಣಗೊಂಡಿತ್ತು. ಮೆಗ್ಗಾನ್ ಆಸ್ಪತ್ರೆಯ ಹಿಂಬಾಗವೇ ಈ ರೌಡಿಗಳ ಚಟುವಟಿಕೆಗೆ ಕಾರ್ಯಸ್ಥಾನವಾಗಿತ್ತು. ಬಸ್ ಸ್ಟಾಂಡ್ ಎದುರು ಗಂಡನನ್ನು ಕಟ್ಟಿಹಾಕಿ ಪತ್ನಿಯನ್ನು ಅತ್ಯಾಚಾರ ಗೈದ ಪಾತಕಿಗಳು ಇವರಾಗಿದ್ದರು. ಅತ್ಯಾಚಾರಕ್ಕೊಳಗಾದ ಅದೆಷ್ಟೋ ಮಹಿಳೆಯರು ಕೇಸು ಕೊಟ್ಟಿರಲಿಲ್ಲ. ನೊಂದ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಹಿಳೆಯರು ಪೊಲೀಸ್ ಠಾಣೆಗೆ ಬಂದು ಅಳಲು ತೋಡಿಕೊಳ್ಳುವುದು ಬಿಟ್ಟರೆ,ದೂರು ಮಾತ್ರ ನೀಡುತ್ತಿರಲಿಲ್ಲ.ಇವರನ್ನು ಬಂಧಿಸಲು ಹೋದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಅದೆಷ್ಟೋ ಉದಾಹರಣೆಗಳಿವೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ,ತಪ್ಪಿಸಿಕೊಂಡೇ ಓಡಾಡುತ್ತಿದ್ದ ರಾಜಕುಮಾರ್ ಹಾಗು ಈತನ ಸಹಚರರ ವಿರುದ್ಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ 32 ರಿಂದ 40 ಕೇಸುಗಳಷ್ಟೆ ದಾಖಲಾಗಿದ್ದವು. ಬಹುತೇಕ ಪ್ರಕರಣಗಳು ಬೆಳಕಿಗೆ ಬರಲಿಲ್ಲ.ರಾಜಕುಮಾರ್ ಗ್ಯಾಂಗ್ ಬಂಧಿಸುವುದು ಇಲಾಖೆಗೆ ಸವಾಲಿನ ಕೆಲಸವಾಗಿತ್ತು.
ಇದನ್ನು ಸಹ ನೋಡಿ : ನಮ್ಮೂರ ಹುಡುಗಿಯ ಯಶಸ್ಸಿನ ಕಥೆ ಗೊತ್ತಾ/ ಆಶಾಭಟ್ ಹೇಳಿದ ಸಕ್ಸಸ್ ಸೀಕ್ರೆಟ್
ಉತ್ತರ ಪ್ರದೇಶ ಎಂಪಿ ಪುತ್ರನಿಗೆ ಶಿಲ್ಪಬಾರ್ ಬಳಿ ಚಾಕು ಇರಿದ ಪಾತಕಿಗಳು
1987 ಡಿಸಂಬರ್ 31 ರಂದು ರಾಜಕುಮಾರ್ ಗ್ಯಾಂಗ್ ಶಿವಮೊಗ್ಗದ ಶಿಲ್ಪ ಬಾರ್ ನಲ್ಲಿ ಇಂಜಿನಿಯರ್ ಕಾಲೇಜು ವಿದ್ಯಾರ್ಥಿ ಪ್ರಕಾಶ್ ಎಂಬುವನಿಗೆ ಚಾಕು ಇರಿದು ಪರಾರಿಯಾಗಿತ್ತು. ಪ್ರಕಾಶ್ ಉತ್ತರ ಪ್ರದೇಶದ ಎಂಪಿ ಪುತ್ರನಾಗಿದ್ದರಿಂದ ಸಹಜವಾಗಿಯೇ ಪೊಲೀಸರ ಮೇಲೆ ರೌಡಿ ಗ್ಯಾಂಗ್ ಬಂಧಿಸಲು ಒತ್ತಡ ಹೆಚ್ಚಿತ್ತು. ರೌಡಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಯಿತು.
ಖಚಿತ ಸುಳಿವಿನ ಮೇರೆಗೆ ದೊಡ್ಡಪೇಟೆ ಪೊಲೀಸರು ಶಸ್ತ್ರಸಜ್ಜಿತರಾಗಿಯೇ ಸುಜಾತ ಹೋಟೆಲ್ ಗೆ ದಾಳಿ ಇಡುತ್ತೆ.ಆರೋಪಿಗಳು ಶಸ್ತ್ರಸಜ್ಜಿತರಾಗಿ ಬಂದ ಪೊಲೀಸರನ್ನು ಕಂಡು ದಂಗಾಗಿ ಹೋಗ್ತಾರೆ. ಪೊಲೀಸ್ರು ರಾಜಕುಮಾರ್ ಮತ್ತು ಆತನ ಗ್ಯಾಂಗ್ ನಲ್ಲಿದ್ದ ಪ್ರಕಾಶ್ ಪರಶುರಾಮ್,ನಲ್ಲಕುಮಾರ್,ಪುರುಷೋತ್ತಮ,ಗುರುಮೂರ್ತಿಯನ್ನು ಬಂಧಿಸಿದ್ದರು.
ಇದನ್ನು ಸಹ ನೋಡಿ: ಅಮ್ಮ ಓದಿದ್ದ ಸ್ಕೂಲ್ಗೆ ಸೆಲೆಬ್ರಿಟಿಯಾಗಿ ಬಂದ ಮಗಳು ಆಶಾಭಟ್ ಹೇಳಿದ್ದೇನು/ ವಿಡಿಯೋ ನೋಡಿ
ಠಾಣೆಯಲ್ಲಿ ಆರೋಪಿಗಳಿಗೆ ಥರ್ಡ್ ಡಿಗ್ರಿ ಟಾರ್ಚರ್.
13-01-1988 ರೌಡಿ ಗುರುಮೂರ್ತಿ ರಾಜ್ ಕುಮಾರ್ ಸಾವು
ಅಂದು ಸುಜಾತ ಹೋಟೆಲ್ ನಲ್ಲಿ ಬಂಧಿಸಿದ ಆರೋಪಿಗಳನ್ನು ಠಾಣೆಗೆ ಕರೆತಂದಾಗ, ಪೊಲೀಸ್ ಗಂಗಾಧರಪ್ಪ,ಮೋಹನ್ ಸಿಂಗ್ ಇದ್ದರು. ಆರೋಪಿಗಳನ್ನು ಠಾಣೆಗೆ ಕರೆತಂದ ಸಂದರ್ಭದಲ್ಲಿ ರೌಡಿಗಳಿಗೆ ಪೊಲೀಸರು ವರ್ಕೌಟ್ ಮಾಡಿದ್ದಾರೆ. 13-01-1988 ರಂದು ರೌಡಿ ರಾಜಕುಮಾರ್ ಮತ್ತು ಗುರುಮೂರ್ತಿ ಸಾವನ್ನಪ್ಪುತ್ತಾರೆ. ಆರೋಪಿಗಳನ್ನು ಸುಮಾರು 13 ದಿನಗಳ ಕಾಲ ಕಾನೂನು ಬಾಹಿರವಾಗಿ ಕಸ್ಟಡಿಯಲ್ಲಿಟ್ಟುಕೊಂಡು ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ ಗಂಭೀರ ಆರೋಪವನ್ನು ಪೊಲೀಸರು ಎದುರಿಸಬೇಕಾಯಿತು.

ಇಬ್ಬರ ಲಾಕಪ್ ಡೆತ್ ಸುದ್ದಿ ಹಬ್ಬುತ್ತಿದ್ದಂತೆ ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಾಗುತ್ತೆ. ವಿಚಾರಣಾದೀನ ಖೈದಿಗಳ ಸಾವಿಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳೇ ಕಾರಣ.ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತ ಕುಟುಂಬಸ್ಥರು ಆಗ್ರಹಿಸಿತ್ತಾರೆ. ಇತ್ತ ರೌಡಿಗಳ ಸಾವಿನ ಸುದ್ದಿ ಹರಡುತ್ತಿದ್ದಂತೆ ಮಹಿಳೆಯರು ಗಾಂಧಿಬಜಾರ್ ನಲ್ಲಿ ಹಾಲು ಹಂಚಿ ಸಂಭ್ರಮಿಸುತ್ತಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಒಟ್ಟು 9 ಮಂದಿ ವಿರುದ್ಧ ಸುಧೀರ್ಘ ವಿಚಾರಣೆ ನಡೆಯುತ್ತದೆ. ಪ್ರಕರಣ ಸಿಓಡಿ ತನಿಖೆಗೆ ಒಳಪಡುತ್ತದೆ.1996 ರಲ್ಲಿ ಶಿವಮೊಗ್ಗ ಸೆಷನ್ ಕೋರ್ಟ್ ಎಸ್ಸೈ ಗಂಗಾಧರಪ್ಪ, ಪೇದೆ ಮೋಹನ್ ಸಿಂಗ್, ಹೆಡ್ ಕಾನ್ ಸ್ಟೇಬಲ್ ಗಳಾದ ಹೆಚ್.ಆರ್ ಮಂಜಪ್ಪ, ಕೆಕೆ ನಾಗೇಂದ್ರ, ಎಸ್ಸೈ ಕೆ.ಹೆಚ್,ಶೇಖರಪ್ಪ,ವೀರಭದ್ರಪ್ಪ,ಬಸಪ್ಪ,ಹನುಮಂತಪ್ಪ ರಿಗೆ ಜೀವಾವಧಿ ಶಿಕ್ಷೆ ಮತ್ತು ಎಸ್ಸೈ ಗಂಗಾಧರಪ್ಪ,ಗೆ 3 ವರ್ಷ ಕಠಿಣ ಶಿಕ್ಷೆ ನೀಡಿ ತೀರ್ಪು ನೀಡುತ್ತದೆ. ಇದು ಶಿವಮೊಗ್ಗ ಪೊಲೀಸ್ ಇಲಾಖೆಗೆ ಕರಾಳ ದಿನವಾಗಿತ್ತು.ಆದರೆ ಆ ದಿನ ಕೋರ್ಟ್ ಎದುರು ಮೃತ ಕುಟುಂಬಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು
ಲಾಕಪ್ ಡೆತ್ ಕೇಸಿನಲ್ಲಿ ಅಮಾಯಕ ಪೊಲೀಸರ ಹೆಸರು ಥಳಕು
ಆದರೆ ಲಾಕಪ್ ಡೆತ್ ಕೇಸಿನಲ್ಲಿ ಕೆಲವು ಅಮಾಯಕ ಪೊಲೀಸ್ ಪೇದೆಗಳ ಹೆಸರುಗಳು ತಳಕು ಹಾಕಿಕೊಂಡಿದ್ದವು. ಎಸ್ಸೈ ಬಸಪ್ಪ, ಮೋಹನ್ ಸಿಂಗ್ ಸೇರಿದಂತೆ ಸುಮಾರು 5 ಮಂದಿ ಯಾವ ತಪ್ಪು ಮಾಡದಿದ್ದರೂ.ಲಾಕಪ್ ಡೆತ್ ಆದ ಸಂದರ್ಭದಲ್ಲಿ ಠಾಣೆಯಲ್ಲಿ ವಿವಿಧ ಹಂತದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳಾಗಿದ್ದರು. ಎಸ್ಸೈ ಬಸಪ್ಪ ರೌಡಿಗಳ ಮೈ ಮುಟ್ಟಿದವರಲ್ಲ.
ಅಂದು ಠಾಣೆಯಲ್ಲಿ ಸ್ಟೇಷನ್ ಹೆಡ್ ಆಗಿದ್ದು.ಮಾರನೆ ದಿನ ಡೈರಿ ರೈಟರ್ ಆಗಿದ್ದೆ ತಪ್ಪಾಗಿ ಹೋಯಿತು. ಪ್ರಕರಣದಲ್ಲಿ ಆರೋಪಿ-9 ಎಂಬುದು ದಾಖಲಾಗಿತ್ತೇ ವಿನಃ,ಬಸಪ್ಪ ಎಂದು ಹೆಸರಿರಲಿಲ್ಲ.ಇವರ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಕೂಡ ನಡೆಯಲಿಲ್ಲ.ಎ-9 ಎಂದೇ ಅಡಿಷನ್ ಚಾರ್ಚ್ ಶೀಟ್ ನಲ್ಲಿ ಪಿಟ್ ಆದ ಬಸಪ್ಪ, ಒಂದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಾರೆ.

ತೀರ್ಥಹಳ್ಳಿಗೆ ಮತ್ತೆ ಬಂದ ಕಾಡಾನೆ/ ನಿನ್ನೆ ಏನೆಲ್ಲಾ ಆಟಾಟೋಪ ನಡೆಸಿದೆ ನೋಡಿ
ರೌಡಿ ನಲ್ಲಕುಮಾರ್ ಮತ್ತು ಪ್ರಕಾಶ್ ನನ್ನು ಮಾಫಿ ಸಾಕ್ಷಿ ಮಾಡಿದ ಪೊಲೀಸ್ ಅಧಿಕಾರಿಗಳು
ಹಾಗೆ ನೋಡಿದ್ರೆ ಲಾಕಪ್ ಡೆತ್ ಕೇಸಿನಲ್ಲಿ ಅಧಿಕಾರಿಗಳು ಬೆಲೆತೆತ್ತಬೇಕಾಗುತ್ತದೆ. ಈ ಪ್ರಕರಣದಲ್ಲಿ ರೌಡಿ ನಲ್ಲಕುಮಾರ್ ಮತ್ತು ಪ್ರಕಾಶ್ ನನ್ನು ಪೊಲೀಸರು ಮಾಫಿ ಸಾಕ್ಷಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅಂದು ಸಾಕ್ಷಿಗಳ ಮನವೊಲಿಸಲು ಅಧಿಕಾರಿಗಳು ಇಡೀ ಪೊಲೀಸ್ ಇಲಾಖೆಯ ಪ್ರತಿ ಸಿಬ್ಬಂದಿಯಿಂದ 100 ರೂಪಾಯಿ ದೇಣಿಗೆ ಸಂಗ್ರಹಿಸುತ್ತಾರೆ.
ನಮ್ಮ ವಿರುದ್ಧ ಸಾಕ್ಷಿ ಹೇಳದಂತೆ ಆಗಿನ ಕಾಲದಲ್ಲಿಯೇ ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದಾರೆ. ಹಣವನ್ನು ಪಡೆದರೂ, ನಲ್ಲಕುಮಾರ್ ಕೋರ್ಟ್ ನಲ್ಲಿ ಪೊಲೀಸರ ಪರವಾಗಿ ಸಾಕ್ಷಿ ಹೇಳಲಿಲ್ಲ.ಅವನ ಹೇಳಿಕೆಯಿಂದ ಅಧಿಕಾರಿಗಳು ಬಚಾವ್ ಆದ್ರು, ಸಿಬ್ಬಂದಿಗಳ ಕೈ ಹಿಡಿತೀವಿ ಅಂದ ಅಧಿಕಾರಿಗಳು ನಂತರ ಕೈ ಎತ್ತಿದರು.
ಕುರುವಳ್ಳಿಯಲ್ಲಿ ಕಾಣಿಸಿದ್ದ ಕಾಡಾನೆಯ ಬಗೆಗಿನ ಸುದ್ದಿ ಇಲ್ಲಿದೆ ಓದಿ : BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ
ಎಲ್ಲರೂ ಸೋತು ಸುಣ್ಣವಾದರೂ,ಪೆನ್ಷನ್ ಗಾಗಿ ಕಾನೂನು ಹೋರಾಟ ಮುಂದುವರೆಸಿದ ಬಸಪ್ಪ.
ಹೌದು 1996 ರಲ್ಲಿ 9 ಮಂದಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಜೀವವಾಧಿ ಶಿಕ್ಷೆಯಾದಾಗ,ತೀರ್ಪನ್ನು ಪ್ರಶ್ನಿಸಿ,ಅಪರಾಧಿಗಳು ಹೈಕೋರ್ಟ್ ಮೆಟ್ಟಲೇರಿದರು.ವಿಚಾರಣೆ ಕೈಗೆತ್ತಿಕೊಂಡ ದ್ವೀಸದಸ್ಯ ಪೀಠ ಭಿನ್ನ ಅಭಿಪ್ರಾಯ ಮಂಡಿಸಿ ತೀರ್ಪನ್ನು ನೀಡಿತು. ಜಸ್ಟೀಸ್ ಸಲ್ಡಾನ್ ಇಡೀ ಪ್ರಕರಣವನ್ನೇ ವಜಾಗೊಳಿಸಿ ಆದೇಶ ನೀಡಿದರೆ, ಜಸ್ಟೀಸ್ ಪದ್ಮರಾಜ್ ಆರೋಪಿಗಳು, ಕರ್ತವ್ಯ ನಿರ್ಲಕ್ಷ ತೋರಿದ ಕಾರಣಕ್ಕೆ ಲಾಕಪ್ ಡೆತ್ ಆಗಿದೆ ಎಂದು ಒಂದು ವರ್ಷ ಕಠಿಣ ಸಜೆ 5 ಸಾವಿರ ದಂಡ ವಿಧಿಸಿ ತೀರ್ಪು ನೀಡುತ್ತಾರೆ.

ತೀರ್ಪನ್ನು ಪ್ರಶ್ನಿಸಿ, ಅಪರಾಧಿಗಳು ಜೈಲಿನಲ್ಲಿದ್ದುಕೊಂಡೆ ಸುಪ್ರಿಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ. ಆದರೆ ಸುಪ್ರಿಂ ಕೋರ್ಟ್ ವಕೀಲರು, ಕೇಸಿಗೆ ಹಾಜರಾಗದ ಕಾರಣ 2010 ರಲ್ಲಿ ಸುಪ್ರಿಂಕೋರ್ಟ್ ಕೇಸು ವಜಾಗೊಳಿಸಿ,ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುತ್ತದೆ. ಒಂದು ವರ್ಷ ಕಠಿಣ ಶಿಕ್ಷೆ, 5 ಸಾವಿರ ದಂಡ ವಿಧಿಸಿ ತೀರ್ಪು ನೀಡುತ್ತದೆ. ಸುಪ್ರಿಂ ತೀರ್ಪಿನಂತೆ ಇವರೆಲ್ಲಾ ಪರಪ್ಪನ ಅಗ್ರಹಾರದಲ್ಲಿ ಒಂದು ವರ್ಷ ಕಾರಾಗೃಹವಾಸ ಅನುಭವಿಸುತ್ತಾರೆ.ಸುಮಾರು 23 ವರ್ಷಗಳ ಕಾನೂನು ಹೋರಾಟ ನಡೆಸಿದ್ರು,ಇವರು ಕೊನೆಗೂ ಜೈಲುವಾಸ ಅನುಭವಿಸಬೇಕಾಗಿ ಬಂತು.
ಅಂತಿಮ ತೀರ್ಪು ಪ್ರಕಟವಾಗುತ್ತಿದ್ದಂತೆ ವೇತನ ತಡೆ ಹಿಡಿದ ಪೊಲೀಸ್ ಇಲಾಖೆ.
ಲಾಕಪ್ ಡೆತ್ ಕೇಸು ಆದ ಸಂದರ್ಭದಲ್ಲಿ 10 ವರ್ಷಗಳ ಕಾಲ ಪೊಲೀಸರು ಅಮಾನತ್ತಿನಲ್ಲಿದ್ದರು. ಅರ್ದ ಸಂಬಳ ಬರುತ್ತಿತ್ತು.ಇವರೆಲ್ಲೂ ನಿವೃತ್ತಿಯಾದ ನಂತರವೂ ಪೆನ್ಷನ್ ಪಡೆಯುತ್ತಿದ್ದರು. ಆದರೆ 2010 ರಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಅಂದು ಎಸ್ಪಿಯಾಗಿದ್ದ ಮುರುಗನ್ ಪ್ರಕರಣದಲ್ಲಿದ್ದ 8 ಮಂದಿಯ ಪೆನ್ಷನ್ ತಡೆ ಹಿಡಿಯುವಂತೆ ಅಕೌಂಟ್ ಜನರಲ್ ಗೆ ಪತ್ರ ಬರೆಯುತ್ತಾರೆ.
ಅದರಂತೆ ಇವರೆಲ್ಲರ ಪೆನ್ಷನ್ ತಡೆಹಿಡಿಯಲಾಗುತ್ತದೆ.ಇದಕ್ಕೆ ಅವರೆಲ್ಲರೂ ಸರ್ಕಾರಕ್ಕೆ ಅಪೀಲ್ ಹೋಗುತ್ತಾರೆ.ನಂತರ ಬರುವ ಎಸ್ಪಿ ರಮಣಗುಪ್ತಾ,ಮುರುಗನ್ ಆದೇಶ ಮರುತಿದ್ದುಪಡಿ ಮಾಡುತ್ತಾರೆ. ನಿವೃತ್ತಿಯಾದ ಸಿಬ್ಬಂದಿಗಳಿಗೆ ವಜಾಗೊಳಿಸಲು ಇಲಾಖೆಯಲ್ಲಿ ಅವಕಾಶವಿಲ್ಲ. ಸರ್ಕಾರವೇ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ.ಇವರಿಗೆ ತಾತ್ಕಾಲಿಕ ಪೆನ್ಷನ್ ನೀಡಬೇಕು ಎಂದು ಮತ್ತೆ ಎಜೆ ಗೆ ಪತ್ರ ಕಳುಹಿಸುತ್ತಾರೆ.

ಅಂತೆಯೇ ಕೆಕೆ ನಾಗೇಂದ್ರ,ಕೆ.ಹೆಚ್ ಶೇಖರಪ್ಪ,ವೀರಭದ್ರಪ್ಪ,ಬಸಪ್ಪ,ಹನುಮಂತಪ್ಪ ರಿಗೆ ತಾತ್ಕಾಲಿಕ ಪೆನ್ಷನ್ ಬರುತ್ತದೆ.ಆದರೆ ಸರ್ಕಾರ ಮಟ್ಟದಲ್ಲಾಗಬೇಕಾದ ಮುಂದಿನ ಕ್ರಮದ ಬಗ್ಗೆ ಅಂದು ಐಜಿಯಾಗಿದ್ದ ಶಂಕರಬಿದರಿ ಮತ್ತು ಹತಾವುಲ್ಲಾ ತನಿಖೆ ನಡೆಸಿ,ಇವರೆಲ್ಲರೂ ಜೈಲುವಾಸ ಅನುಭವಿಸಿದ್ದಾರೆ. ಈಗ ನಿವೃತ್ತಿಯಾಗಿದ್ದು,ಅವರಿಗೆ ಜೀವನಾಧಾರ ಭತ್ಯೆ ನೀಡಬಹುದೆಂದು ದಾವಣಗೆರೆ ಐಜಿಯವರಿಗೆ ಪತ್ರ ಕಳುಹಿಸುತ್ತಾರೆ.
ಆದರೆ ದಾವಣಗೆರೆ ಐಜಿಯಾಗಿದ್ದ ಸಂದೇಶ್ ಸಹಾಯ್ ಮುರುಗನ್, ಆದೇಶವನ್ನೇ ಎತ್ತಿಹಿಡಿದು,ಪೆನ್ಷನ್ ತಡೆಹಿಡಿಯುತ್ತಾರೆ,ಮತ್ತೆ ಸರ್ಕಾರಕ್ಕೆ ಅಪೀಲ್ ಹೋಗುವ ಧರ್ಮಪ್ಪನವರ ಅರ್ಜಿ ಪರಿಶೀಲಿಸುವ ಸರ್ಕಾರದ ಜಂಟಿ ಕಾರ್ಯದರ್ಶಿ ರವಿಶಂಕರ್ ಅರ್ಜಿ ವಜಾಗೊಳಿಸಿ,5 ಮಂದಿಯ ಪೆನ್ಷನ್ ಹಣವನ್ನು ತಡೆಯುವಂತೆ ಆದೇಶ ಹೊರಡಿಸುತ್ತಾರೆ.
ಹೊಸ ವರ್ಷದ ಸಂಭ್ರಮದ ನಡುವೆ ಹೊತ್ತಿ ಉರಿದ ಮರಗಳು
ಲಾಕಪ್ ಡೆತ್ ಕೇಸಿನಲ್ಲಿ ಬೇರೆ ಸಿಬ್ಬಂದಿಗಳಿಗೆ ಸಿಕ್ಕಿದೆ ನ್ಯಾಯ.
ಈ ಲಾಕಪ್ ಡೆತ್ ಪ್ರಕರಣದಲ್ಲಿ 9 ನೇ ಆರೋಪಿಯಾಗಿದ್ದ ಎಸ್ಸೈ ಬಸಪ್ಪ,ಆರೋಪಿಯಾಗಿದ್ದು ಬಿಟ್ಟರೆ ನ್ಯಾಯಾಲಯದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ.ಯಾವ ಆರೋಪದಡಿ ಎಂದು ಚಾರ್ಟ್ ಶೀಟ್ ನಲ್ಲಿ ನಮೂದಿಸಿಲ್ಲ.ಯಾರು ಇವರ ವಿರುದ್ಧ ಸಾಕ್ಷಿ ನುಡಿದಿಲ್ಲ.ಹೀಗಿದ್ದು ಬಸಪ್ಪ ಪ್ರಕರಣದಲ್ಲಿ 9 ನೇ ಆರೋಪಿಯಾಗಿ ಶಿಕ್ಷೆ ಅನುಭವಿಸಿದರು.
ಸೆರೆವಾಸ ಅನುಭವಿಸಿದ ಬಹುತೇಕ ಮಂದಿ ಇಲಾಖೆಯ ಸಹವಾಸವೇ ಬೇಡವೆಂದು ಸುಮ್ಮನಾಗಿ ಬಿಟ್ರು.ಆದರೆ ಬಸಪ್ಪ ಮಾತ್ರ ನಾನು ಯಾವು ತಪ್ಪು ಮಾಡಿಲ್ಲ.ಆದರೂ ಅಪರಾಧಿ ಆದೆ.ಆದರೆ ಸರ್ಕಾರದಿಂದ ಬರಬೇಕಾದ ಜೀವನಾಂಶ ಭತ್ಯೆ ಪಡೆದೇ ತಿರುವುದಾಗಿ ಟೊಂಕಕಟ್ಟಿ ನಿಂತಿ,ಪತ್ರ ಚಳುವಳಿ ಮುಂದುವರೆಸಿದ್ರು.ಸರ್ಕಾರ ಭತ್ಯೆ ನೀಡದಿದ್ದರೆ, ನಮ್ಮನ್ನು ಮತ್ತೆ ವಾಪಸ್ಸು ಜೈಲಿಗೆ ಕಳುಹಿಸಲಿ.ಅಲ್ಲಾದರೂ ಊಟ ಸಿಗುತ್ತದೆ ಎಂದು ಬಸಪ್ಪ ವಿನಂತಿಸಿದ್ದು,ನಿಜಕ್ಕೂ ನೋವಿನ ಸಂಗತಿ

ರಾಣೆಬೆನ್ನೂರು ಲಾಕಪ್ ಡೆತ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಸಿಬ್ಬಂದಿಗಳಿಗೆ 6 ತಿಂಗಳ ಶಿಕ್ಷೆ ವಿಧಿಸಿ,ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತ ಆದೇಶ ನೀಡಿರುವ ನಿದರ್ಶನ ಕಣ್ಣಮುಂದಿತ್ತು.ಆದರೆ ಈ ಕೇಸ್ನಲ್ಲಿ ಅಪಾಧಿತ ನೌಕರರು 23 ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿ ಸೆರೆವಾಸ ಸೇರಿ, ಮುಂಬಡ್ತಿ ಆರ್ಥಿಕ ನಷ್ಟಗಳಿಂದ ಹಿನ್ನಡೆ ಅನುಭವಿಸಿದ್ದರು. ಪ್ರಕರಣದಲ್ಲಿ ಕಾನೂನು ಇಲಾಖೆ ಅಬಿಪ್ರಾಯ ಪಡೆದು ಸಂಪುಟದಲ್ಲಿ ನಿರ್ಣಯ ಮಾಡಿ,ಪೊಲೀಸರಿಗೆ ನ್ಯಾ ಕೊಡುವ ಮೂಲಕ ಆತ್ಮಸ್ಥೈರ್ಯ ತುಂಬಬಹುದಿತ್ತು.ಆದರೆ ಅದು ಈವರೆಗೂ ನಡೆದಿಲ್ಲ ಎಂಬುದೇ ವಿಪರ್ಯಾಸ.
ಇದನ್ನು ಸಹ ನೋಡಿ: ಅಮ್ಮ ಓದಿದ್ದ ಸ್ಕೂಲ್ಗೆ ಸೆಲೆಬ್ರಿಟಿಯಾಗಿ ಬಂದ ಮಗಳು ಆಶಾಭಟ್ ಹೇಳಿದ್ದೇನು/ ವಿಡಿಯೋ ನೋಡಿ
