ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಮೀಪದ ಸಣ್ಣಮನೆ ಬಳಿಯಲ್ಲಿ ಭೀಕರ ಆಪಘಾತವೊಂದು ಸಂಭವಿಸಿದೆ. ಜಲ್ಲಿ ತುಂಬಿದ್ದ ಲಾರಿಯೊಂದು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ.
ಜೋಗ ರಸ್ತೆ ಬಜಾಜ್ ಷೋರೂಮ್ ಬಳಿ . ಹಿಂಬದಿಯಿಂದ ಬಂದು KA15 5474, ನಂಬರಿನ ಲಾರಿ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ.
ಸ್ಥಳೀಯರ ಪ್ರಕಾರ, ಹಿಗ್ಗಾಮುಗ್ಗಾ ಡ್ರೈವ್ ಮಾಡಿಕೊಂಡು ಬಂದಿದ್ದ ಚಾಲಕ, ಹಿಂದಿನಿಂದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದಾನೆ. ಆಗಷ್ಟೆ ಕಾಲೇಜಿಗೆ ಹೊರಟಿದ್ದ ಹಾಸ್ಟೆಲ್ವೊಂದರ ವಿದ್ಯಾರ್ಥಿನಿಯರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ಧಾರೆ.
ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?
ಮೂವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿ ಎನ್ನಲಾಗುತ್ತಿದೆ.
ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ
ಘಟನೆ ಸಂಬಂಧ ಸಾಗರ ಟೌನ್ ಪೊಲೀಸರು ಸ್ತಳಕ್ಕೆ ಆಗಮಿಸಿದ್ದ ಪರಿಶೀಲನೆ ನಡೆಸಿದ್ಧಾರೆ. ಇನ್ನೂ ಈ ಭಾಗದಲ್ಲಿ ಲಾರಿಗಳ ಓಡಾಟದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು,
ಸ್ಪೀಡ್ ಲಿಮಿಟ್ ಇಲ್ಲದೇ ಲಾರಿಗಳು ಓಡಾಡುತ್ತಿವೆ. ಅದರಲ್ಲಿಯು ಕಾಲೇಜುಗಳ ಸಮೀಪ, ಶಾಲೆಗಳ ಸಮೀಪ ಇಂತಹ ವೇಗದ ಲಾರಿಗಳಿಗೆ ಪೊಲೀಸರು ಸಹ ಕಡಿವಾಣ ಹಾಕುತ್ತಿಲ್ಲ ಎಂದು ಆರೋಪಿಸಿದ್ಧಾರೆ.
ಈ ಸುದ್ದಿಯ ಇನ್ನಷ್ಟು ಅಪ್ಡೇಟ್ಸ್ ಇಲ್ಲಿದೆ ಓದಿ : ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ/ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್
