Goback ರೋಹಿತ್ ಚಕ್ರತೀರ್ಥ/ ಏನಿದು ಅಭಿಯಾನ/ ತೀರ್ಥಹಳ್ಳಿಗೆ ಬರುವುದಕ್ಕೆ ವಿರೋಧವೇಕೆ? ಇಲ್ಲಿದೆ ಪೂರ್ತಿ ವಿವರ

Malenadu Today

ಶಿವಮೊಗ್ಗ ದಲ್ಲಿ ಸದ್ಯ ಗೋ ಬ್ಯಾಕ್​ (Goback) ರೋಹಿತ್ ಚಕ್ರತೀರ್ಥ ಅಭಿಯಾನ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ವರದಿ ಇಲ್ಲಿದೆ. ನಾಳೆ ಅಂದರೆ ಡಿಸೆಂಬ್​ 28 ಕ್ಕೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದಕ್ಕೆ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸಲಾಗಿದೆ. ಕುವೆಂಪು  ಸಾಹಿತ್ಯ ಮತ್ತು  ರಾಷ್ಟ್ರೀಯತೆ ಬಗ್ಗೆ ರೋಹಿತ್ ಚಕ್ರ ತೀರ್ಥರವರ ಭಾಷಣ ನಿಕ್ಕಿಯಾಗಿದೆ. 

ಕಂತೆ ಕಂತೆ ದುಡ್ಡು, ತೊಲಗಟ್ಲೆ ಬಂಗಾರ ದಾರೀಲೆ ಸಿಕ್ಕಿತು/ ಅದೃಷ್ಟದ ನಿದಿಗೆ ಆಸೆ ಪಡೆದ ಕಾವೇರಿ ಮಾಡಿದ್ದೇನು ಓದಿ/

Goback ರೋಹಿತ್ ಚಕ್ರತೀರ್ಥ

ಆದರೆ ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಬರುವುದು ಬೇಡ ಎಂದು ಭಾರೀ ವಿರೋಧ ವ್ಯಕ್ತವಾಗುತ್ತಿದೆ. ತೀರ್ಥಹಳ್ಳಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ವಿವಿಧ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ವಿರೋಧಕ್ಕೆ ಕಾರಣವೇನು? 

ರೋಹಿತ್ ಚಕ್ರತೀರ್ಥ ರವರು  2017ರ ಮಾರ್ಚ್‌ನಲ್ಲಿ ನಾಡಕವಿ ಕುವೆಂಪು ಅವರು ಬರೆದಿದ್ದ ನಾಡಗೀತೆಯ ಸಾಲುಗಳನ್ನು ಬೇರೆಯದ್ದೆ ರೀತಿಯಲ್ಲಿ ಬಳಸಿದ್ದರು.  ಅಂದು ಅವರ ಫೋಸ್ಟ್​ನಲ್ಲಿ “ಜೈ ಕಾಂಗ್ರೆಸ್ ಜನನಿಯ ತನುಜಾತೆ ಜಯಹೇ ಅರೇಬಿಕ್ ಮಾತೆ…..ಜೈ ಸುಂದರ ಮಟನ್ ಅಂಗ್ಢಿಗಳ ಸಾಲೇ” ಎಂದು ಬರೆಯಲಾಗಿತ್ತು. ಇದು ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಕುವೆಂಪು ಅಭಿಮಾನಿಗಳು ಮತ್ತು ನೆಟ್ಟಿಗರು ವಿರೋಧಿಸಿದ್ದರು. ಕುವೆಂಪು ಅವರನ್ನು ಅವಮಾನಿಸುವ ಮೂಲಕ ರೋಹಿತ್ ಚಕ್ರತೀರ್ಥ ವಿಕೃತಿ ಮೆರೆದಿದ್ಧಾರೆ ಎಂದು ದೂರಿದ್ದರು. ಶಿಕ್ಷಣ ಇಲಾಖೆಯ ಮೂಲಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ಬಳಿಕ ಈ ವಿವಾದ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ನಾಡಗೀತೆಗೆ ಅವಮಾನ ಮಾಡಿದ್ಧಾರೆ ಎಂದು ಹಲವರು ಆಕ್ರೋಶ ಹೊರಹಾಕಿದ್ದರು. ಮೇಲಾಗಿ ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ನಾರಾಯಣಗುರು ಸೇರಿದಂತೆ ಹಲವರು ಮಹನೀಯರಿಗೆ ಅವಮಾನ ಮಾಡಲಾಗಿದೆ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. 

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಕುವೆಂಪುಗೆ ಅವಮಾನ ಮಾಡಿದವರು, ತೀರ್ಥಹಳ್ಳಿಗೆ ಬರುವುದು ಬೇಡ

ಸದ್ಯ ಇದೇ ಕಾರಣ ತೀರ್ಥಹಳ್ಳಿಯಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥರವರು ಬರುವುದು ಬೇಡ ಎಂದು ಆಕ್ರೋಶ  ಹೊರಹಾಕಲಾಗುತ್ತಿದೆ. ರಾಷ್ಟ್ರಕವಿ ಕುವೆಂಪುರವರನ್ನು ಅವಹೇಳನ ಮಾಡಿದ ವ್ಯಕ್ತಿಯನ್ನು ತೀರ್ಥಹಳ್ಳಿಗೆ ಕರೆಸಿ ಕಾರ್ಯಕ್ರಮ ಮಾಡಲು ಬಿಜೆಪಿಯುವರು ಹೊರಟಿದ್ದು, ಈ ಕಾರ್ಯಕ್ರಮಕ್ಕೆ ರೋಹಿತ್​ ಚಕ್ರತೀರ್ಥರವರು ಬರುವುದು ಬೇಡ  ನಮ್ಮ ನಾಡಿನ ಮೇರು ಕವಿಯನ್ನು ಚಕ್ರತೀರ್ಥ ಅವಮಾನ ಮಾಡಿದ್ದಾರೆ.  ಕುವೆಂಪು ಅವರ ಜನ್ಮದಿನ ಡಿ. 29 ಕ್ಕೆ ಇದ್ದು ಅದರ ಹಿಂದಿನ ದಿನ ಇಂತಹವರು ಕುವೆಂಪು ಅವರ ಜನ್ಮಸ್ಥಳಕ್ಕೆ ಬರುತ್ತಿರುವುದನ್ನು ನಾವು ಒಪ್ಪುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ್ ಹೆಗ್ಡೆ ಆರೋಪಿಸಿದ್ದಾರೆ. 

ತುರ್ತು ಸುದ್ದಿ/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ 15 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಕಾಲಿಡಬಾರದು

ಇನ್ನೊಂದೆಡೆ,  ಭಾರತ ಜನನಿಯ ತನುಜಾತೆ ಎನ್ನುವ ಕವಿತೆಯನ್ನು ಯಾರು ಭಾರತಕ್ಕೆ ದೇಶಕ್ಕೆ ನೀಡಿದರೋ ಅಂತಹ ವ್ಯಕ್ತಿಯನ್ನು ಅವಮಾನ ಮಾಡಿ ಆ ಸಾಹಿತ್ಯವನ್ನೇ ತಿರುಚಿದ ವ್ಯಕ್ತಿಯನ್ನು ತೀರ್ಥಹಳ್ಳಿಗೆ ಕರೆಸುತ್ತಿದ್ದಾರೆ. ಚುನಾವಣೆಯ ಮತಕ್ಕಾಗಿ ಆತನನ್ನು ಕರೆಸುತ್ತಿದ್ದಾರೆ. ಆದರೆ ಕುವೆಂಪು ಅವರನ್ನು ಅವಮಾನ ಮಾಡಿದವನನ್ನು ಮತಕ್ಕಾಗಿ ಕರೆಸಬಾರದು. ರಾಜಕೀಯ ಅಜೆಂಡಾ ಏನೇ ಇದ್ದರೂ ಚುನಾವಣೆಯಲ್ಲಿ ತೋರಿಸಿ ಆದರೆ ಕುವೆಂಪು ಅವರ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಚಕ್ರತೀರ್ಥರನ್ನು ಆಯ್ಕೆ ಮಾಡಿದ್ದೆ ಡಬಲ್ ಇಂಜಿನ್ ಸರ್ಕಾರ ಮಾಡಿರುವ ತಪ್ಪು. ತನ್ನ ತಪ್ಪುಗಳನ್ನು ಬಿಜೆಪಿಯವರು ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ. ಕುವೆಂಪು ಅವರನ್ನು ಅವಮಾನ ಮಾಡಿರುವ ಚಕ್ರತೀರ್ಥ ಈ ತಾಲೂಕಿಗೆ ಕಾಲಿಡಬಾರದು ಎಂದು ತೀರ್ಥಹಳ್ಳಿಯ ನೆಂಪೆ ದೇವರಾಜ್​ ಆಕ್ರೋಶ ಹೊರಹಾಕಿದ್ಧಾರೆ. 

ಇದನ್ನು ಓದಿ : ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್​/ ದತ್ತ ಪೀಠಕ್ಕೂ ಭೇಟಿ!?

ವಿರೋಧಕ್ಕೆ ವಿರೋದ…

ಇನ್ನೊಂದೆಡೆ ಗೋ ಬ್ಯಾಂಕ್​ ಚಳುವಳಿಗು ವಿರೋಧ ವ್ಯಕ್ತವಾಗಿದೆ, ಕಾರ್ಯಕ್ರಮದ ಪರವಾಗಿ ಕೂಡ ಪ್ರತಿಕ್ರಿಯೆಗಳು ಬರುತ್ತಿದ್ದು, ಈ ಸಂಬಂಧ ಆರಗ ಜ್ಞಾನೇಂದ್ರ ಫ್ಯಾನ್ಸ್​ ಕ್ಲಬ್​ನಲ್ಲಿ ಈ ಬಗ್ಗೆ ಬರೆಯಲಾಗಿರುವ ಬರಹವು ಇಲ್ಲಿದೆ ಓದಿ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article