ಪ್ರಧಾನಿ ನರೇಂದ್ರ ಮೋದಿ ತಲೆಭಾಗಿ ನಮಿಸಿದ್ದ ಪದ್ಮಶ್ರೀ ಹೆಚ್​.ಆರ್.ಕೇಶವಮೂರ್ತಿ ಇನ್ನಿಲ್ಲ

Malenadu Today

ಪದ್ಮಶ್ರೀ ಹೆಚ್​.ಆರ್.ಕೇಶವಮೂರ್ತಿ (88) ಅವರು ಇವತ್ತು ನಿಧನರಾಗಿದ್ದಾರೆ.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶಿವಮೊಗ್ಗದ ಹೊಸಳ್ಳಿಯಲ್ಲಿಯಲ್ಲಿನ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ  ರಾಮಸ್ವಾಮಿ ಶಾಸ್ತ್ರಿ–ಲಕ್ಷ್ಮೀದೇವಮ್ಮರವರ ಮಗನಾಗಿ ಜನಿಸಿದ್ದ ಅವರು ಗಮಕ ಕಲೆಯಲ್ಲಿ ಪಾಂಡಿತ್ಯ ಸಂಪಾದಿಸಿದ್ದರು. 

ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ ಜಿದ್ದಿಗೆ ಬಿದ್ದವರಂತೆ ದ್ವೇಷಿಗಳಾದವರು…ನಟ ದರ್ಶನ್ ವಿಚಾರದಲ್ಲಿ ಒಗ್ಗಟ್ಟಿನ ಜಪ ಮಾಡಿದ್ದರ ಹಿಂದಿನ ಗುಟ್ಟೇನು?

ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಡುವುದನ್ನು ರೂಢಿಸಿಕೊಂಡಿದ್ದ ಕೇಶವ ಮೂರ್ತಿಯವರು, 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ಗಮಕವಾಡುವ ಮೂಲಕ  ʼಶತರಾಗಿʼ ಎಂಬ ಕೀರ್ತಿ ಪಡೆದಿದ್ದರು.

ಇದನ್ನು ಸಹ ಓದಿ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯ ಸಮೀಪ ಅಪಘಾತ/ ಓರ್ವನ ಸಾವು

ನಾಳೆ ಬೆಳಗ್ಗೆ 10 ಗಂಟೆ ವರೆಗೆ ಹೊಸಳ್ಳಿ ಸ್ವಗೃಹದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಧ್ಯಾಹ್ನ ಹೊಸಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮೃತರು ಪತ್ನಿ ರಾಜೇಶ್ವರಿ, ಮಗಳು ಉಷಾರವರನ್ನು ಅಗಲಿದ್ದಾರೆ.

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ  ಸಾಕಷ್ಟು ಪ್ರಸಿದ್ಧಿ ಪಡೆದಿರುವ ಜೋಡಿಯಾಗಿತ್ತು. ಇವರ  ಕುಮಾರವ್ಯಾಸ ಭಾರತದ 200 ಕ್ಯಾಸೆಟ್‌ಗಳು ಬಿಡುಗಡೆಯಾಗಿದ್ದವು.   ಫೆಬ್ರವರಿ 22, 1934 ರಂದು ಜನಿಸಿದ ಕೇಶವಮೂರ್ತಿಯವರು ವಾರಣಾಸಿ, ಕಾಲ್ಪುರ, ಜೈಪುರ, ಮುಂಬೈ, ಪುನಾ ಘರಾನಾಗಳಂತೆಯೇ  ತಮ್ಮದೆ ಶೈಲಿಯೊಂದನ್ನ ಹುಟ್ಟುಹಾಕಿದ್ದರು, ಅದು ಕೇಶವಮೂರ್ತಿ ಘರಾನಾ ಎಂದೇ ಖ್ಯಾತಿಪಡೆದುಕೊಂಡಿದೆ. ಇವರ ಸೋದರ ರಾಮಾಶಾಸ್ತ್ರಿಗಳು ಗಮಕ ಹಾಗೂ ಸಂಗೀತ ವಿದ್ವಾಂಸರು.  

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article