ಕಳಪೆ ಗೊಬ್ಬರದ ಬಗ್ಗೆ ವರ್ಷ ವರ್ಷ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈ ಸಲ ಶಿವಮೊಗ್ಗದಲ್ಲಿ ನಕಲಿ ಗೊಬ್ಬರದ (Fertilizer) ಬಗ್ಗೆ ಸುದ್ದಿಯಅಗಿದೆ. ಶಿವಮೊಗ್ಗದ ರೈತರೊಬ್ಬರು ಖರೀದಿಸಿದ ಗೊಬ್ಬರದಲ್ಲಿ ಬರೀ ಜೇಡಿಮಣ್ಣೆ ತುಂಬಿದ್ದು, ನೀರಿಗೆ ಹಾಕುತ್ತಲೇ ಮಣ್ಣು ಕರಗುತ್ತಿದೆ.
ಇದನ್ನು ಸಹ ಓದಿ : ಶಿವಮೊಗ್ಗದ ಕಾಚಿನ ಕಟ್ಟೆ ಸಮೀಪ ಬೈಕ್ ಕಾರು ಡಿಕ್ಕಿ/ ಸವಾರನ ಕಾಲು ಕಟ್
ಶಿವಮೊಗ್ಗದ ಪುರದಾಳಿನ ರೈತ ರಾಜಪ್ಪ ಎಂಬವರು ಅಡಿಕೆ ತೋಟಕ್ಕೆ ಹಾಕಲು ರಸಗೊಬ್ಬರವನ್ನು ಖರೀದಿಸಿದ್ದರು. ಈ ವೇಳೆ ಗೊಬ್ಬರ ಚೆನ್ನಾಗಿಯೇ ಇದೇ ಎಂದು ಡೀಲರ್ನವರು ಮಾರಾಟ ಮಾಡಿದ್ದಾರೆ. ಭೂಮಿಪುತ್ರ ಹೆಸರಿನ ಗೊಬ್ಬರ ಖರೀದಿಸಿದ್ದ ರೈತ ರಾಜಪ್ಪ, ಅದನ್ನು ಬಿಡಿಸಿ ತೋಟಕ್ಕೆ ಹಾಕುವಾಗ ಅವರಿಗೆ ಅನುಮಾನ ಬಂದಿದೆ. ಗೊಬ್ಬರ ಯಾಕೋ ಮಣ್ ಮಣ್ಣಾಗಿದೆಯಲ್ಲ ಅಂತಾ ನೋಡಿದ ಅವರು, ಅದನ್ನು ಪರೀಕ್ಷೆ ಮಾಡಲು ಚೂರು ನೀಡಿಗೆ ಹಾಕಿದ್ದಾರೆ. ಅಲ್ಲಿ ಗೊಬ್ಬರ ಕೆಲವೇ ಕ್ಷಣಗಳಲ್ಲಿ ಕರಗಿ ಮಣ್ಣು ಹೊರಬಿದ್ದಿದೆ.
ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್ – ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಪೆಷಲ್ ಟ್ರೈನ್ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ
ಇನ್ನೂ ಈ ಬಗ್ಗೆ ರಸಗೊಬ್ಬರ ಕೊಟ್ಟವರನ್ನು ಕೇಳಿದರೆ, ಬೇರೆ ಗೊಬ್ಬರ ಕೊಡುವುದಾಗಿ ಹೇಳಿದ್ದಾರಂತೆ. ಅಂದರೆ ಅಸಲಿಯೋ ನಕಲಿಯೋ ಎಂಬುದು ಕಂಪನಿಯವರಿಗೂ ಗೊತ್ತಿತ್ತೆ ಎಂಬ ಅನುಮಾನ ಮೂಡಿದೆ. ಹಾಗಾಗಿ ಅವರು ಅದನ್ನು ವಿಡಿಯೋ ಮಾಡಿ, ಗೊಬ್ಬರ ಖರೀದಿಸುವಾಗ ಎಚ್ಚರಿಕ ವಹಿಸಿ ಎಂದು ಇತರೇ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
