ನಡುರೋಡಿನ ಮಧ್ಯೆಯೇ, ಕುಸಿದ ಸಿಟಿಬಸ್​/ ಅಯ್ಯೋ ದೇವರೇ?

Malenadu Today

ವಿದೇಶಗಳಲ್ಲಿ ಇದ್ದಕ್ಕಿದ್ದ ಹಾಗೆ ರೋಡಿನ ನಡುವೆ ದೊಡ್ಡ ರಂದ್ರವಾದಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರ್ತೀರಿ, ಅದೇರೀತಿ ಬೆಂಗಳೂರಿನಲ್ಲಿ ಟಾರ್​ ರೋಡ್​ ಒಟ್ಟೆಯಾದ ಸುದ್ದಿಗಳು ಸಹ ಜೋರು ಸದ್ದು ಮಾಡಿದ್ದವು. ಇದೀಗ ಶಿವಮೊಗ್ಗದ ಸರದಿ. 

ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ

ಶಿವಮೊಗ್ಗದ ಮಿಳಘಟ್ಟದಲ್ಲಿ ನಿನ್ನೆಖಾಸಗಿ ಸಿಟಿ ಬಸ್​ವೊಂದು ನಡುರಸ್ತೆಯಲ್ಲಿ ಮಂಡಿಯೂರಿ ಕುಳಿತಂತೆ ನಿಂತುಬಿಟ್ಟಿತ್ತು. ಬಸ್​ನ ಮುಂದಿನ ಎರಡು ಟೈಯರ್​ಗಳು ರಸ್ತೆಯಲ್ಲಿ ಕುಸಿದು ಮುಂದಕ್ಕೂ ಹೋಗಲಾಗದೆ  ಬಸ್​ ಅಲ್ಲೆ ಸ್ಟಾಪ್​ ಆಗಿತ್ತು. ಏನಂದ್ರು ಗಾಡಿ ಮುಂದಕ್ಕೆ ಹೋಗದ ಕಾರಣ ಚಾಲಕ ಪ್ರಯಾಣಿಕರನ್ನ ಇಳಿಸಿ, ಬಸ್​ನ್ನ ಅಲ್ಲೆ ಬಿಟ್ಟು ಹೋಗಿದ್ದ. 

Malenadu Today

ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ

ಇಷ್ಟಕ್ಕೂ ಏಕೆ ಹೀಗಾಯ್ತು ಅಂತಾ ಕೇಳಿದರೆ, ರಸ್ತೆ ಅಗಲೀಕರಣ ಕಾಮಗಾರಿ ಅಂತಿದ್ದಾರೆ ಜನ. ಕಾಮಗಾರಿ ವಿಳಂಭವಾಗ್ತಿದೆ ಅದೇ ಕಾರಣಕ್ಕೆ ಹೀಗೆ  ಆಗ್ತಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಅರ್ಧಂಬರ್ಧ ಕಾಮಗಾರಿ ಮಾಡ್ತಿದ್ದಾರೆ ಎಂದು ದೂರಿದ್ಧಾರೆ. ಇನ್ನೊಂದೆಡೆ ಯುಜಿಡಿ ಕಾಮಗಾರಿಗಾಗಿ ಗುಂಡಿ ತೆಗೆದು ಸರಿಯಾಗಿ ಮಣ್ಣು ಮುಚ್ಚಿಲ್ಲ. ಅದಕ್ಕೆ ಮಣ್ಣು ಹುಗಿಯುತ್ತಿದೆ. ಸದ್ಯ  ಬಸ್​ ಅಲ್ಲೆ ಕುಸಿದು ನಿಂತಿದೆ. ಹೆಚ್ಚುಕಮ್ಮಿಯಾಗಿದ್ದರೇ ಯಾರು ಹೊಣೆ ಎಂದು ಕೆಲವರು ಕೇಳುತ್ತಿದ್ದಾರೆ. 

ಇದನ್ನು ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article