ಶಿವಮೊಗ್ಗ ಕೋಟೆ ಪೊಲೀಸರು (Kote Police Station) ನಿನ್ನೆ ಸಂಜೆ ದಿಢೀರ್ ಎಂಬಂತೆ ಶಿವಮೊಗ್ಗದ ರೋವರ್ಸ್ ಕ್ಲಬ್ ಮೇಲೆ ದಾಳಿ ನಡೆಸಿದ್ದಾರೆ. ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ಈ ದಾಳಿ ಕೈಗೊಂಡಿದ್ದರು.
ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್ಪಾಸ್ ಲಿಸ್ಟ್
ದಾಳಿ ಸಂದರ್ಭದಲ್ಲಿ ಕಾನೂನಿಗೆ ವಿರುದ್ಧವಾಗಿ ಇಸ್ಪೀಟ್ ಆಡುತ್ತಿದ್ದ 11 ಜನರನ್ನ ಬಂಧಿಸಲಾಗಿದೆ. ಜೊತೆಯಲ್ಲಿ ರೋವರ್ಸ್ ಕ್ಲಬ್ನ ಮ್ಯಾನೇಜರ್ರನ್ನ ಸಹ ದಸ್ತಗಿರಿ ಮಾಡಲಾಗಿದೆ. ಇನ್ನೂ ಈ ದಾಳಿ ವೇಳೆಯಲ್ಲಿ ಒಂದುವರೆ ಲಕ್ಷ ರೂಪಾಯಿ ಹಣ ಹಾಗೂ ಇಸ್ಪೀಟ್ ಕಾರ್ಡ್ಗಳನ್ನ ಜಪ್ತಿ ಮಾಡಲಾಗಿದೆ. ದಾಳಿ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸುಳಿವು ಮಾತ್ರ ಪೊಲೀಸ್ ಇಲಾಖೆಯಿಂದ ಹೊರಬಿದ್ದಿಲ್ಲ
ಇದನ್ನು ಸಹ ಒದಿ : ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp
