Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು!
ಸತ್ತವರನ್ನ ಎಷ್ಟು ದಿನ ತಾನೆ ನೆನೆಪಿಟ್ಟುಕೊಳ್ಳುತ್ತಾರೆ. ಅವರ ನೆನಪು ಮೆರೆಯದಿರಲಿ ಎಂದು ಫೋಟೋವೊಂದು ಗೋಡೆಯ ಮೊಳೆಗೆ ಹಾಕಿ, ಹಾರವೊಂದು ವಿಟ್ಟು, ಕರೆಂಟ್ನ ಬಲ್ಪೊಂದನ್ನು ಹಚ್ಚಿ ಬಿಟ್ಟರೆ, ಅದೇ ಅಗಲಿದವರಿಗೆ ಸಲ್ಲಿಸುವ ಶಾಶ್ವತ ಗೌರವ ಎನ್ನುತ್ತದೆ ಈ ಹೈಟೆಕ್ ಕಲಿಯುಗ.
ಇಂತಹ ಕಾಲದಲ್ಲೂ ಭದ್ರಾವತಿಯಲ್ಲಿ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹೂವು,ಹಾರ, ಬತ್ತಿ ಬೆಳೆಗಿ ಪೂಜಿಸುತ್ತಿದ್ದಾನೆ. ಭದ್ರಾವತಿ ಬಸ್ ನಿಲ್ದಾಣದ ಎದುರಲ್ಲಿರುವ ಆಟೋ ಸ್ಟಾಂಡ್ನಲ್ಲಿ ಅಪ್ಪಾಜಿ ಗೌಡರ ಫೋಟೋವೊಂದನ್ನ ಹಾಕಲಾಗಿದೆ. ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಅಪ್ಪಾಜಿಗೌಡರು ಇಹಲೋಕ ತ್ಯಜಿಸಿದ್ದರು. ಅಂದಿನಿಂದ ಮಾಜಿ ಎಂಎಲ್ಎಯವರ ಫೋಟೋಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾನೆ.
Malenadu today story / SHIVAMOGGA
ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ರಮೇಶ್ರಿಗೆ ಅಪ್ಪಾಜಿ ಗೌಡರು ಎಂದು ತುಂಬಾನೆ ಇಷ್ಟವಂತೆ. ಮೇಲಾಗಿ ರಮೇಶ್ರ ಕಷ್ಟಕ್ಕೆ ಅಪ್ಪಾಜಿಗೌಡರ ನೆರವು ಆಸರೆ ಸಹ ಸಿಕ್ಕಿತ್ತು. ಈ ಕಾರಣಕ್ಕೆ ನೆಚ್ಚಿನ ನಾಯಕನಿಗೆ, ಅವರು ಅಗಲಿದ ಮೇಲೂ, ಪೂಜ್ಯನೀಯ ಗೌರವವನ್ನು ಸಲ್ಲಿಸುತ್ತಿದ್ದಾರೆ.
ವಿಶೇಷ ಅಂದರೆ, ಇವತ್ತು ಅಪ್ಪಾಜಿ ಗೌಡರ ಜನ್ಮದಿನ, ಇವತ್ತು ವಿಶೇಷವಾಗಿ ರಮೇಶ್ ಮಾಜಿ ಶಾಸಕರ ಪೋಟೋಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಭದ್ರಾವತಿಯಲ್ಲಿ 25 ಲಕ್ಷಕ್ಕೂ ಅಧಿಕ ಹಣದಲ್ಲಿ, ಅಪ್ಪಾಜಿ ಗೌಡರ ಪ್ರತಿಮೆಯೊಂದು ತಯಾರಾಗುತ್ತಿದೆ. ಅದನ್ನು ಅಪ್ಪಾಜಿಯವರ ಪುಣ್ಯ ತಿಥಿಯಂದು ಸ್ಥಾಪಿಸಲಾಗುತ್ತದೆ.