Anjan kumar police/ ಅಂಜನ್ ಕುಮಾರ್..ತಗ್ಗೋ ಮಾತೇ ಇಲ್ಲ/ಬೆದರಿಕೆಗೆ ಬಗುತ್ತಾರೆಯೇ?/

Malenadu Today

Anjan kumar police/ ಬೆಂಗಳೂರು ಸಿಸಿಬಿ ಎಸ್ಐಟಿಯಲ್ಲಿ ಕೆಲಸ ಮಾಡಿ ಪೊಲೀಸ್ ಮಹಾ ನಿರ್ದೇಶಕರಿಂದಲೇ ಖಡಕ್ ತನಿಖಾಧಿಕಾರಿ ಎನಿಸಿಕೊಂಡಿರುವ ಅಂಜನ್ ಕುಮಾರ್ ಹೆಸರು ಕೇಳಿದ್ರೆ ಬೆಂಗಳೂರಿನ ಪಾತಕ ಲೋಕ ನಡುಗಿ ನೀರಾಗುತ್ತೆ.

ಡಿ.ಎಸ್.ಪಿ ಬಾಲರಾಜ್, ಇನ್ ಸ್ಪೆಕ್ಟರ್ ಅಂಜನ್ ಕುಮಾರ್, ಹಾಗು ಇನ್ ಸ್ಪೆಕ್ಟರ್ ಮಂಜುನಾಥ್ ಬೆಂಗಳೂರು ಸಿಸಿಬಿಯಲ್ಲಿ ಸಮರ್ಥವಾಗಿ ಕೆಲಸ ಮಾಡಿ, ಪಾತಕಿಗಳಿಗೆ ಬಿಸಿ ಮುಟ್ಟಿಸಿ, ಕ್ರೈಂ ರೇಟ್ ಕಂಟ್ರೋಲ್ ಮಾಡಿದವರು.

ಕೇವಲ ಮೂರು ಮಂದಿ ಅಧಿಕಾರಿಗಳು ಬೆಂಗಳೂರು ಕ್ರೈಂ ಲೋಕವನ್ನೇ ತಲ್ಲಣಗೊಳಿಸಿದ್ರು. ಡಿ.ಎಸ್ಪಿ ಬಾಲ್ ರಾಜ್ ಜ್ಞಾನಭಾರತಿ ರೇಪ್ ಕೇಸ್ ನ್ನು ತ್ವರಿತವಾಗಿ ಭೇದಿಸಿದ್ರು.

ಅವರ ತನಿಖಾ ಮಾದರಿಗೆ ಹೈಕೋರ್ಟ್ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕೇಸ್ ಸ್ಟಡಿ ಐಪಿಎಸ್ ಅಕಾಡೆಮಿಗೆ ರೆಫರ್ ಆಗಿದೆ. ಐಪಿಎಸ್ ಮಾಡುವ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಈ ತನಿಖಾ ಮಾದರಿಯನ್ನು ಅಭ್ಯಾಸ ಮಾಡುತ್ತಿದ್ದಾರೆ.

Malenadu Today
ಇನ್ ಸ್ಪೆಕ್ಟರ್ ಮಂಜುನಾಥ್ ಕೂಡ ದಕ್ಷ ಅಧಿಕಾರಿಯಾಗಿದ್ದು, ಯಾವ ರಾಜಕಾರಣಿಗಳಿಗೂ ಮಣೆ ಹಾಕದ ಅಧಿಕಾರಿ. ತಮ್ಮ ಕರ್ತವ್ಯದ ಅವಧಿಯಲ್ಲಿ ಸಾಕಷ್ಟು ಅಪರೂಪದ ಪ್ರಕರಣಗಳನ್ನು ಭೇದಿಸಿದ್ದಾರೆ. ಸಧ್ಯ ಈ ಮೂವರು ಅಧಿಕಾರಿಗಳು ಶಿವಮೊಗ್ಗ ನಗರದ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ. ಈ ಮೂವರು ಅಧಿಕಾರಿಗಳು ಯಾವ ರಾಜಕಾರಣಿಗಳ ಶಿಪಾರಸ್ಸು ಪತ್ರವನ್ನು ಪಡೆಯದೆ, ಡಿಜಿಯವರ ರೆಕ್ಮಂಡ್ ನಲ್ಲಿ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದೊಡ್ಡಪೇಟೆ ಪೊಲೀಸ್​ ಇನ್​ಸ್ಪೆಕ್ಟರ್​ ಅಂಜನ್​ ಕುಮಾರ್​

  • ಅದ್ರಲ್ಲೂ ದೊಡ್ಡಪೇಟೆ ಪೊಲೀಸ್ ಠಾಣೆಯ ಅಂಜನ್ ಕುಮಾರ್ ಬಗ್ಗೆ ಶಿವಮೊಗ್ಗದ ಜನತೆಗೆ ಹೇಳಲೇಬೇಕಾದ ಕೆಲವು ಸಂಗತಿಗಳಿವೆ.
    ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಬೆಂಗಳೂರಿನ ಐಎಂಎ ಹಗರಣ ಪ್ರಕರಣದಲ್ಲಿ ಎಸ್.ಐ.ಟಿ ನಲ್ಲಿ ಅಂಜನ್ ಕುಮಾರ್ ಫುಲ್ ಟೈಂ ಕೆಲಸ ಮಾಡಿದ್ದಾರೆ.
  • ಐಎಂಎ ಸಿಬಿಐ ತನಿಖೆಗೆ ಹೋದ್ರು ಕೂಡ.., ಸ್ಪೆಷವ್ ಆಫಿಸರ್ ಆಗಿದ್ದ ಅಂದಿನ ಡಿಸಿಯವರಿಗೆ ಅಸಿಸ್ಟೆನ್ಸ್ ಮಾಡಲು ಅಂಜನ್ ಕುಮಾರ್ ರವರನ್ನು ಸರ್ಕಾರವೇ ನೇಮಿಸಿತ್ತು.
  • ಬೆಂಗಳೂರಿನಲ್ಲಿ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸ್ಪೆಷನ್ ಎನ್ ಕ್ವೈರಿಗಳಲ್ಲಿ ಅಂಜನ್ ಕುಮಾರ್ ತನಿಖಾಧಿಕಾರಿಯಾಗಿದ್ರು.
  • ಇನ್ ಸ್ಪೆಕ್ಟರ್ ಮಂಜುನಾಥ್ ಕೂಡ ದಕ್ಷ ಅಧಿಕಾರಿಯಾಗಿದ್ದು, ಯಾವ ರಾಜಕಾರಣಿಗಳಿಗೂ ಮಣೆ ಹಾಕದ ಅಧಿಕಾರಿ. ತಮ್ಮ ಕರ್ತವ್ಯದ ಅವಧಿಯಲ್ಲಿ ಸಾಕಷ್ಟು ಅಪರೂಪದ ಪ್ರಕರಣಗಳನ್ನು ಭೇದಿಸಿದ್ದಾರೆ. ಸಧ್ಯ ಈ ಮೂವರು ಅಧಿಕಾರಿಗಳು ಶಿವಮೊಗ್ಗ ನಗರದ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿದ್ದಾರೆ. ಈ ಮೂವರು ಅಧಿಕಾರಿಗಳು ಯಾವ ರಾಜಕಾರಣಿಗಳ ಶಿಪಾರಸ್ಸು ಪತ್ರವನ್ನು ಪಡೆಯದೆ, ಡಿಜಿಯವರ ರೆಕ್ಮಂಡ್ ನಲ್ಲಿ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    • ಆರ್ಗನೈಸ್ಡ್ ಕ್ರೈಂ ವಿಂಗ್ ನಲ್ಲಿ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಗಂಭೀರ ಪ್ರಕರಣಗಳಿದ್ರೆ. ತನಿಖೆಗೆ ಹಿರಿಯ ಪೊಲೀಸರು, ಅಂಜನ್ ಕುಮಾರ್ ಹೆಸರು ಮುದ್ರೆ ಒತ್ತಲೇ ಬೇಕಾದ ಅನಿವಾರ್ಯತೆ ಇದೆ. ತಮ್ಮ ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ, ನಿಷ್ಠೆ, ಜಾತ್ಯಾತೀತವಾದವನ್ನು ಮೈಗೂಡಿಸಿಕೊಂಡು ಬಂದಿರುವ ಅಂಜನ್ ಕುಮಾರ್, ರಕ್ತದಲ್ಲಿ ಹರಿಯುತ್ತಿರುವುದು ಪೊಲೀಸಿಂಗ್ ಮಾತ್ರ.
    • ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಜನ್ ಕುಮಾರ್ ಗೆ ಕಮ್ಯುನಲ್ ವಿಚಾರಗಳಲ್ಲಿ ಸಾಕಷ್ಟು ಮಂದಿ ರಾಜಕಾರಣಿಗಳು ಫೋನ್ ಮಾಡಿದ್ರೂ,ಅದ್ಯಾವುದಕ್ಕೂ ಕ್ಯಾರೇ ಎಂದಿಲ್ಲ.

      ಎತ್ತಂಗಡಿ ಮಾಡಿಸುವ ಬೆದರಿಕೆ ಬಂದಾಗಲೂ. ನಾನು ಈಗ್ಲೇ ರೆಡಿ ಎಂಬ ಸಂದೇಶ ರವಾನಿಸಿದ್ದಾರೆ. ಅಂಜನ್ ಕುಮಾರ್ ಯಾವ ಮಿನಿಟ್ ಮೇಲೆ ಬಂದಿಲ್ಲ ಎಂದ ಮೇಲೆ ರಾಜಕೀಯ ಒತ್ತಡಕ್ಕೆ ಮಣಿಯೋ ಮಾತು ಎಲ್ಲಿ ಬಂತು.

      ಹಾಗಾಗಿಯೇ..ಹರ್ಷ ಪ್ರಕರಣದಲ್ಲಿ ಗಲಾಟೆ ಎಬ್ಬಿಸಿದವರಿಗೆ ಶಿವಮೊಗ್ಗ ಸುಟ್ಟ ಬಿಡ್ತಿನಿ ಎಂದರ ವಿರುದ್ಧ ಪ್ರಕರಣ ದಾಖಲಿಸುವ ಖಡಕ್ ದೈರ್ಯ ತೋರಿದ್ದಾರೆ.

      ಸಾವರ್ಕರ್ ಸಾಮ್ರಾಜ್ಯ ಬೈಕ್ ರಾಲಿಯಲ್ಲಿ ಸಂದರ್ಬದಲ್ಲಿ ಆದ ಘಟನೆ ಬಗ್ಗೆ ಹರ್ಷ ಸಹೋದರಿ ಅಶ್ವಿನಿ ವಿರುದ್ಧ ಒತ್ತಡದ ನಡುವೆಯೂ ಅಂಜನ್ ಕುಮಾರ್ ಕ್ಯಾರೆ ಅನ್ನದೆ ಎಪ್.ಐ.ಆರ್ ದಾಖಲಿಸಿ, ನಾಗರೀಕ ಸಮಾಜಕ್ಕೆ ನಾವು ಯಾರ ಪರವೂ ಇಲ್ಲ..

      ನಾವು ಎಲ್ಲರ ಪರ ಇದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಪೊಲೀಸ್ ಠಾಣೆ ಮೆಟ್ಟಲೇರಿದ ಕೇಸ್ ಗಳಿಗೆ ಅದೆಷ್ಟೇ ರಾಜಕೀಯ ಒತ್ತಡಗಳು ಬಂದ್ರೂ ಅಂಜನ್ ಕುಮಾರ್ ತಗ್ಗೋ ಮಾತೇ ಇಲ್ಲ..

      ಅವರ ವರ್ಗಾವಣೆಗೆ ಪಿತೂರಿಗಳು ನಡೆದರೂ ಅಚ್ಚರಿಯಿಲ್ಲ. ಅವರು ವರ್ಗಾವಣೆಯಾದ್ರೆ..ಅದು ಶಿವಮೊಗ್ಗದ ಜನತೆಗೆ ಆಗೋ ನಷ್ಟವೇ ಹೊರತು..ಅಂಜನ್ ಕುಮಾರ್ ಆಗೋ ನಷ್ಟವಲ್ಲ..

Share This Article