Karnataka Govt Order 25 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಶೇಷ ಅಂದರೆ ಮುಂದಿನ ಆದೇಶ ಬರುವವರೆಗೂ ಹಾಲಿ ಇರುವ ಶಾಸಕರೇ ಆಯಾ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿರುವುದು. ಅಧ್ಯಕ್ಷಗಿರಿ ಸದ್ಯದಲ್ಲಿಯೇ ಬದಲಾಗುತ್ತಾ ಎಂಬ ಚರ್ಚೆಗೂ ನಾಂದಿ ಹಾಡಿದೆ. ಕಳೆದ 2024 ರ ಜನವರಿ 26 ರಂದು ಅಪ್ಪಾಜಿ ನಾಡಗೌಡ, ರಾಜು ಕಾಗೆ, ಎಚ್.ಸಿ. ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಬಿಕೆ ಸಂಗಮೇಶ್ ಸೇರಿದಂತೆ ಟಿ.ಡಿ. ರಾಜೇಗೌಡ ಹಾಗೂ ಶರತ್ ಬಚ್ಚೇಗೌಡ ಸೇರಿದಂತೆ ಒಟ್ಟು 25 ಜನ ಶಾಸಕರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿತ್ತು.
ಶಿವಮೊಗ್ಗ, ಸಾಗರ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ರೇಟು! ವಾರದಲ್ಲಿಯೇ ಬದಲಾಯ್ತು ಅಡಿಕೆ ದರ!
Karnataka Govt Order
ಈ ನೇಮಕಾತಿಯ ಅವಧಿಯು 2 ವರ್ಷಗಳಾಗಿದ್ದು, ಇದೇ ತಿಂಗಳ 26 ನೇ ತಾರೀಖಿಗೆ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಇದೀಗ 25 ಶಾಸಕರನ್ನು ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿಸಿದೆ. ಜೊತೆಯಲ್ಲಿ ಇವರಿಗೆ ನೀಡಲಾಗುತ್ತಿದ್ದ ಎಲ್ಲ ರೀತಿಯ ಸೌಲಭ್ಯಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಸೂಚನೆ ನೀಡಿದೆ. ಹೊಸ ಆದೇಶದಲ್ಲಿ ಮುಂದಿನ ಆದೇಶದವರೆಗೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿರುವುದು, ಅಧಿಕಾರ ಹಸ್ತಾಂತರ ಹಾಗೂ ಯಾವುದೇ ಹೊತ್ತಿನಲ್ಲಿ ಅಧಿಕಾರದಿಂದ ಇಳಿಸಬಹುದು ಎಂಬ ಸೂಚನೆ ಮೂಡಿದೆ. ಅಲ್ಲದೆ ಈ ಬಗ್ಗೆ ಸ್ವತಃ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದವರಲ್ಲಿ ಶುರುವಾಗಿದೆ.

ಶಿವಮೊಗ್ಗದಲ್ಲಿ 91 ಸಾವಿರ ರೇಟಾಗಿದೆ! ಎಲ್ಲೆಲ್ಲಿ ಎಷ್ಟಿದೆ ಅಡಕೆ ದರ! ಗೊರಬಲಿಗೂ ಡಿಮ್ಯಾಂಡ್ ಇದೆ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

